Friday, September 25, 2009

ಗೇರಿ ಸೂತ್ರ: ಆಟಕ್ಕೂ ಪಾಠಕ್ಕೂ ಸೆಕ್ಸ್ !

'ಅಪ್ಪಾ ರೇಂಕ್ ಬರಬೇಕಂದ್ರೆ ನನಗೆ ಸೆಕ್ಸ್ ಬೇಕು ... ಇಂಥ್ದಾದ್ಲೆಲಾ ಇದರೆ ಮಾತ್ರ, ಸ್ಕೋರ್ ಮಾಡೋಕೆ ಇಂಟರೆಸ್ಟ್ ಬರುತ್ತೆ. ಇಂಡಿಯನ್ ಕ್ರಿಕೆಟಿಗರು ಸ್ಕೋರ್ ಮಾಡೋಕೆ ಕೋಚ್ ಗ್ಯಾರಿ ಕರ್ಸ್ಟನ್ ಹೇಳ್ದಿದು ನೀವು ಓದಿಲ್ವಾ....'

ಬೇತಾಳ ಒಂದು ಕ್ಷಣ ಬೆಚ್ಚಿತು... ನಮ್ಮ ವಿದ್ಯಾರ್ಥಿಗಳೇನಾದರೂ ತಮ್ಮ ಪಾಲಕರ್‍ಲಲಿ ಇಂತಹ ಬೇಡಿಕೆ ಇರಿಸಿದರೆ. .. ಆಟದ್ಲಲಿ ಆಗಬಹುದಾದರೆ ಪಾಠದ್ಲಲಿ ಏಕಾಗಬಾರದು ..! ಹೀಗೇ ಹೋದರೆ ಅಂಕ ಇರಲಿ, ರನ್ ಆಗಿರಲಿ ಸ್ಕೋರ್ ಮಾಡೋಕೆ ತರಬೇತಿ, ಟ್ಯೂಷನ್, ಸ್ಟಡಿಗಿಂತ ಸೆಕ್ಸ್ ಗೆ ಹೆಚ್ಚು ಮಹತ್ವ ಬರಬಹುದೇ ಬೇತಾಳನ ಮೈ ಬೆವರಿತು...

ಟೀಮ್ ಇಂಡಿಯಾದ ಕೋಚ್ ಗ್ಯೇರಿ ಹೇಳಿದ ೪ ಪುಟಗಳ ಸಲಹೆ ಕೇಳಿ ತಂಡದ `ಯುವ' ಆಟಗಾರರು ಇನ್ನು ಕ್ದದು ಮುಚ್ಚಿ ೨೦-೨೦ ಆಡಬೇಕ್ಲಿಲ ಎಂದು ಇಲದ ಮೀಸೆಯ ಕೆಳಗೆ ತುಟಿ ಸವರಿಕೊಂಡರೆ, ಯುವತನ ಕಳೆದು ಕೊಳ್ಳದ್ದಿದರೂ ತಂಡದಿಂದ ಹೊರಗಾಗಿರುವ `ಮಾಜಿ'ಗಳು 'ಈ ಐಡಿಯ ಅವರಿಗೆ ಅಂದೇ ಏಕೆ ಬರಲ್ಲಿಲ ಎಂದು ಬಾಯಿಬಾಯಿ ಬಡಿದುಕೊಳ್ಳತೊಡಗ್ದಿದಾರೆ. ಇನ್ನು ಕೆಲವು ಆಟಗಾರರ ಗೆಳೆಯಗೆಳತಿಯರಂತೂ ಇದಕ್ಕ್ಲೆಲಾ ಕೋಚ್‌ನ ಸಲಹೆ ಬೇಕೇನ್ರಿ ನಮ್ಮ `ಹುಡುಗ' ಇದನ್ನು ಹಿಂದೆಯೇ 'ಚಾಲೂ' ಮಾಡ್ಯಾನ್ರಿ.. ಅಂತ ಮನದೊಳಗೆ 'ಅಕ್ರಮ-ಸಕ್ರಮ' ಕ್ಕೆ ಅವಕಾಶ ದೊರೆಯುತ್ತದ್ಲಲಾ ಅಂತ ಲೆಕ್ಕಾಚಾರದ್ಲಲಿ ತೊಡಗ್ದಿದರು. ಬೇತಾಳಕ್ಕೆ ತಪ್ಪು ಮಾಡಿಯಾದರೂತುಪ್ಪ ತಿನ್ನು ಎಂಬ ಗಾದೆ ಮಾತು ನೆನಪಾಯಿತು. ಎಲದಕ್ಕೂ ಬ್ಲೆಲ ಸೇರಿಸಿ ಪಾಕವನ್ನು ನಳಪಾಕ ಮಾಡುವಂತೆ ಇಂದು ಎಲದರ್‍ಲಲೂ ಕಾಮವನ್ನು ಬೆರೆಸುವುದು ಕಾಮನ್ ಆಗುತ್ತಿದೆ.

ಭಾರತ ತಂಡದ್ಲಲಿ ಸೇರಿಕೊಂಡಿರುವ ಕೇರಳದ 'ಕಿಡಿಮಿಡಿ' ಹುಡುಗ, ಪಂಜಾಬ್‌ನ `ತುಂಟ', `ಜಗಳ ಗಂಟ'ರು ಈಗಾಗಲೇ ಹಲವು ಸಿನಿ ನಟಿಯರು, ಮಾಡೆಲ್‌ಗಳ ಕುಡಿನೋಟಕ್ಕೆ ಕರಗಿ ಹೋಗ್ದಿದರು ಎಂಬ ಗಾಸಿಪ್‌ಗಳು ಅಲ್ಲಲಿ ಚೌಚೌ ಬಾತ್ ಬಡಿಸಿತ್ತು. ಇದ್ಲೆಲಾವೂ ಆದ ಮೇಲೆ ಗ್ಯಾರಿ ಅವರ 'ಅಕ್ರಮ ' ಕಾನೂನು ಜಾರಿ ಗೊಂಡಿತ್ತು.

ಐಪಿಎಲ್ ಕ್ರಿಕೆಟ್ ಎಂಬ 'ನವರಸ' ಭರಿತ ಕ್ರಿಕೆಟ್ ಜೂಜು, ಕ್ರಿಕೆಟಿಗರ ಹರಾಜು, ತೆರೆಮರೆಯ ಮೋಜು ಆರಂಭವಾದ ಮೇಲೆ ಈ ಆಟ ಹಿಂದಿನಂತೆ ಮಾನ್ಯತೆಯ ಚೌಕಟ್ಟಿನೊಳಗೆ ಉಳಿದ್ಲಿಲ. ಮ್ಯಾಚ್‌ಪಿಕ್ಸಿಂಗ್‌ಗೆ ಖಲಾಸ್ ಆಗ್ದಿದ ಕ್ರಿಕೆಟ್‌ನ ಮಾನ ಕ್ರೀಡಾಂಗಣದೊಳಗೆ ಕುಣಿಯುವ ಮಾನಿನಿಯರ ಅರಂಗೇಟ್ರದೊಂದಿಗೆ ಡಮಾರ್ ಆಯಿತು.

ಎಲಾ ಓಕೆ ಚೀಯರ್ಸ್ ಗರ್ಲ್‌ಗಳು ಯಾಕೆ? ಎಂಬ ಅನುಮಾನ ಹೆಡೆ ಎತ್ತ ತೊಡಗ್ದಿದು ಆಗಲೇ... ಈ ಹಂತದ್ಲಲಿ ಆಡಿ ಆಡಿ ಸುಸ್ತಾದ ಹುಡುಗರ ಬ್ಲಿಲಿಗೆ ಹೆದೆ ಏರಿಸುವ ಪ್ರಯತ್ನವನ್ನು ಮಾಡುವ ಹೊಣೆ ಕೋಚ್ ಗ್ಯಾರಿ ಅವರಿಗಿತ್ತು. ಆದರೆ ಈ ಹೊಣೆಗಾರಿಕೆಯನ್ನು ಅವರು ಬಳಸಿಕೊಂಡ ರೀತಿ ಮಾತ್ರ ಭಾರತೀಯರು ಹುಬ್ಬ ಗಂಟಿಕ್ಕುವಂತೆ ಮಾಡಿದೆ.

ಭಾರತೀಯ ಕ್ರಿಕೆಟ್ ತಂಡದ್ಲಲಿ ಕೋಚ್‌ಗಳ ಬಗ್ಗೆ ಅಸಮಾಧಾನ ಎಂದೆಂದೂ ನಿರಂತರವಾಗಿರುವ ಸಮಸ್ಯೆ. ಇಂತಹ ಬೆಂಕಿಗೆ ತಣ್ಣೀರೆರಚಿ ನಂದಿಸುವ ಪ್ರಯತ್ನವನ್ನು ಗ್ಯಾರಿ ಅವರು ಮಾಡ್ದಿದಾರೆ ಎಂಬ ಕುಹಕವೂ ಅಲ್ಲಲಿ ಕೇಳಿ ಬರುತ್ತಿದೆ. ವೀರು ಅವರು ತಂಡದ ನಾಯಕ ಸ್ತಾನ ಬಿಟ್ಟ್ದದು, ಆಯ್ಕೆ ಸರಿ ಇಲ, ವಿಶ್ರಾಂತಿ ಕೊಡುತ್ತ್ಲಿಲ ಎಂದು ದೋನಿ ತಂಡ ಕಿರಿ ಗುಟ್ಟ್ದಿದು, ಎಲಾ ಸೇರಿ ಕೋಚ್ ಗ್ಯಾರಿ ಸುತ್ತ ಗುಮ್ಮನಂತೆ ಬಂದು ಕುಳಿತಾಗ ಅವರು ಸ್ವ-ರಕ್ಷಣೆಗಾಗಿ `ಮೋಹಿನಿ ಅಸ್ತ್ರ'ವನ್ನು ಬಳಸಿದಂತೆ ತೋರುತ್ತದೆ. ಆದರೆ ಈ ಮೋಹಿನಿ ಅಸ್ತ್ರ ಅವರ ಕಾಲಿಗೆ ತೊಡಕಾಗಿ, ಅವರ ವೃತ್ತಿ ಭವಿಷ್ಯಕ್ಕೆ ತೊಡರುಗಾಲು ಹಾಕುವ ಸಾಧ್ಯತೆಯೂ ಇದೆ.

ಸಾಧಕನು 'ವಿಷಯಾಕಾಂಕ್ಷೆ'ಗಳಿಂದ ಮುಕ್ತನಾಗಿರಬೇಕು. ಬ್ರಹ್ಮಚರ್ಯವೇ ಸಾಧಕನ್ಲಲಿರಬೇಕಾದ ಮುಖ್ಯ ಅರ್ಹತೆ . ಕಾಮಕ್ರೋಧಲೋಭ ಮೋಹ ಮದ ಮತ್ಸರ ಇತ್ಯಾದಿ ಅರಿ ಷಡ್ವರ್ಗಗಳಿಂದ ದೂರವಿರಬೇಕು. `ಶರೀರಮಾದ್ಯಂ ಖಲು ಧರ್ಮ ಸಾಧನೆ' ಎಂಬ `ಚಾರ್ವಾಕ ವಾದ'ವು ಸಾಧಕನಿಗೆ ಹಿತವ್ಲಲ. ಸಂಯಮವೇ ಸಕಲಕ್ಕೂ ಸಾಧನ ಎಂಬಿತ್ಯಾದಿ ಭಾರತೀಯರ ಗುರಿಸಾಧನೆಯ ನೀತಿ ಸಂಹಿತೆಯನ್ನೇ ಗ್ಯಾರಿ ಗೆರಸೆಯ್ಲಲಿ ಹಾಕಿ ಗೇರ್‍ದಿದಾರೆ..... ಬೇತಾಳನ ತಲೆಯ್ಲಲಿ ಅದೇನೇನೊ ವಿಷಯಗಳು ಬಾಲ್‌ನಂತೆ ಗಿರಗಿರನೆ 'ಸ್ಪಿನ್' ಆಗತೊಡಗಿತು.

ಅಷ್ಟರ್‍ಲಲಾಗಲೇ ವಿಕ್ರಮಾದಿತ್ಯನು `ಅಂಪೇರ್'ನ ಮುಖದಂತೆ ನಿರ್ವಿಕಾರನಾಗಿ ನಿರ್ಲಿಪ್ತನಾಗಿ ಎಂದಿನಂತೆ ಶವಹೊತ್ತು ಹೊರಟಿರುವುದು ಕಾಣಿಸಿತು. ಜಗತ್ತೇ ಇಂದು ಕಾಮದ ಸುತ್ತ ಗಿರಕಿ ಹೊಡೆಯುತ್ತ್ದಿದರೆ ರಾಜನು ಮಾತ್ರ ಶವದ ಸುತ್ತ ಚಪ್ಪಲಿ ಸವೆಸುತ್ತಿರುವುದು ಬೇತಾಳಕ್ಕೆ ಅಚ್ಚರಿಯುಂಟು ಮಾಡಿತು. ಸೆಕ್ಸ್‌ನ ಬಗ್ಗೆ ಮಾತಿಗೆಳೆದರೆ ಎಂತಹ ಮೌನಿಯೂ ವಾಚಾಳಿಯಾಗುತ್ತಾನೆ ಎಂಬ ಆಧುನಿಕ ನಿಯಮದಂತೆ ಬೇತಾಳನೂ ರಾಜನ ಮೌನವ್ರ ಭಂಗಕ್ಕೆ ಸೆಕ್ಸ್ ಅಸ್ತ್ರ ಪ್ರಯೋಗಿಸಿತು... ಅದನ್ನು ಪ್ರಶ್ನೆಯ ರೂಪದ್ಲಲಿ ನಿವೇದಿಸಿತು.

ಅರಸನೇ ಈ ಎಲಾ ಮಾತು, ವಾದ ವಿವಾದಗಳನ್ನು ಕೇಳಿದೆಯಷ್ಟೇ... ಕಾರ್ಯಕ್ಷಮತೆ, ಸಾಮರ್ಥ್ಯ ಹೆಚ್ಚಿಸಲು ಸೆಕ್ಸ್‌ಅನ್ನು ಉಚಿತವಾಗಿ ಕೊಡಹೋದರೆ ಕ್ರಿಕೆಟಿಗರ ದೇಹಕ್ಷಮತೆ ಎಲಿಗೆ ತಲುಪುತ್ತದೆ ಎಂಬ ಚಿಂತನ ಇಲದ ಕೋಚ್‌ನ ತಲೆಯ್ಲಲಿ ಬಾಲ್ ಒಳಗಿರುವಂತೆ ಗಾಳಿ ಮಾತ್ರ ಇದೆಯೇನೋ ಎಂದು ನಿನಗೆ ಅನ್ನಿಸುವುದ್ಲಿಲವೇ? ವಿವಾಹಿತರಾದರೆ, ಅದರ್‍ಲಲೂ ಏಕಪತ್ನಿ ವ್ರತ ಹೊತ್ತ ಕ್ರಿಕೆಟಿಗನಾದರೆ ಆಕೆಯ ಸಮೇತ ಗ್ಯಾರಿ ಸಲಹೆಯಂತೆ ಪಂದ್ಯಕ್ಕೆ ಪ್ರವಾಸ ಹೊರಟು ಪ್ರಸವಕ್ಕೆ ಸಿದ್ಧತೆ ಮಾಡಬಹುದು. ಆದರೆ ಅವಿವಾಹಿತ ಹಾಟ್ ಬಾಯ್ಸ್ ಇರುವ ತಂಡ ಇದು. ಅವರ ಕಥೆ ಏನು. ಯಾರನ್ನಾದರೂ ಬಳಸಿಕೊಳ್ಳಲು ಪ್ರೇರೇಪಿಸಿದಂತಾಗುವುದ್ಲಿಲವೇ? ಅಡ್ಡದಾರಿ ಹಿಡಿಯಲು (ಸರಿ ದಾರಿಯ್ಲಲಿ ಇನ್ನೂಉಳಿದವರು ಇದರೆ..) ಅವಕಾಶ ನೀಡಿದಂತಾಗುವುದ್ಲಿಲವೇ? ಸರ್ಕಾರದ ಭತ್ಯೆಯ್ಲಲಿ ಸೆಕ್ಸ್ ಭತ್ಯೆ ಎಂದು ಕೊಡಬೇಕಾಗುವುಸದ್ಲಿಲವೇ? ಇದು ಜಾರಿಯಾದರೆ ನಮ್ಮ ಸರ್ಕಾರಿ ನೌಕರರು ಈ ಭತ್ಯೆಗೆ ಹೆಚ್ಚಿನ ಹೋರಾಟ ಮಾಡಲಾರರೇ? ಇದ್ಲೆಲವೂಜಾರಿಯಾದರೆ ವಿದ್ಯಾರ್ಥಿಗಳೂ ಸುಮ್ಮನಿರುತ್ತಾರೆಯೇ ಅವರೂ ಸೆಕ್ಸ್ ಸ್ಕಾಲರ್‌ಶಿಪ್ ಬೇಕು ಅಂತ ಕೋರಿಕೆ ಮುಂದಿಡಲಾರರೇ....

ಬೇತಾಳನ ಪ್ರಶ್ನೆ ಇನ್ನೂ ಮುಂದುವರಿಯುತ್ತಿತ್ತೇನೊ... ಕಾಮೆಂಟರಿ ಜೋರಾಗಿ ಸಾಗಿದಾಗ ಕರೆಂಟ್ ಹೋದಂತೆ.... 'ಬಾಯಿ ಮುಚ್ಚು' ರಾಜ ಬೇತಾಳನತ್ತ ತಿರುಗಿ ತನ್ನ ಲೇಸರ್ ಖಡ್ಗವನ್ನು ಝಳಪಿಸಿದ.

ಬೇತಾಳನೇ ಪ್ರತಿಯೊಬ್ಬರಿಗೂ ಸ್ವಂತ ವಿವೇಕ, ವಿವೇಚನೆ ಅಂತ ಇದೆ. ಬಾವಿಗೆ ಹಾರು, ಬೆಂಕಿಯನ್ನು ದಾಟು, ಹಾವಿನ ಬಾಯಿಗೆ ಕೈ ಹಾಕು ಎಂದರೆ ಯಾರಾದರೂ ಮಾಡುತ್ತಾರೆಯೇ... ಇದು ಕೂಡ ಹಾಗೆಯೇ ಅನೈತಿಕತೆಯನ್ನು ಭಾರತೀಯರು ಸಹಿಸಲಾರರು. ಅಂತಹ ಪ್ರಯತ್ನಗಳನ್ನು ತೆರೆಮರೆಯ್ಲಲಿ ಮಾಡಬಹುದಾದರೂಪ್ರಕಟವಾಗಿ ಮಾಡುವ ಧೈರ್ಯ ಇನ್ನೂ ನಮ್ಮ್ಲಲಿ ಇಲ.. ರಾಜನ ಮೌನ ಭಂಗವಾಗುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಮರವನ್ನು ಸೇರಿತು.