Friday, September 11, 2009

ಪ್ರಕಾಶ್ ರೈ ಹೊಗಳಲು ನಮಗೆ ಮುಖ ಉಂಟೆ?

ವದೊಳಗ್ದಿದ ಬೇತಾಳಕ್ಕೆ ತಲೆ ಗಿರ್ ಅಂದಿತು...

ನ್ನಡದ ಪರಿತ್ಯಕ್ತ ಪುತ್ರನಂತ್ದಿದ ಪ್ರಕಾಶ ರೈ ಎಂಬ ಪ್ರತಿಭಾವಂತ ನಟ ಅದ್ಲೆಲ್ಲೆಲೊ ಹೋಗಿ, ಯಾವ್ಯಾವುದೊ ಭಾಷೆಗಳ್ಲಲಿ ಅವಕಾಶ ಗಿಟ್ಟಿಸಿಕೊಂಡು, ಬಳಿಕ ಅಲೇ ತನ್ನ ನಿರ್ಮಾಣಸಂಸ್ಥೆಯನ್ನೂ ಆರಂಭಿಸಿ, ತನ್ನ ಸಾಧನೆಯಿಂದ ಕಲೆಯ ಮೇರು ಹಂತಕ್ಕೇರಿದರೆ ಅದನ್ನು ಹೊಗಳುವ ಅರ್ಹತೆ ಕನ್ನಡಿಗರು ಇನ್ನೂ ಉಳಿಸಿಕೊಂಡ್ದಿದಾರೆಯೇ..
ಈ ಜನ ಹೇಗೆ ಬೇಕಾದರೂಬದಲಾಗುತ್ತಾರೆ. ವ್ಯಕ್ತಿಯೊಬ್ಬನನ್ನು ನಿರ್ಲಕ್ಷ್ಯಿಸಿ ಕಾಲ-ಕಸ ಮಾಡುವವರೂ ಅವರೇ, ಆತ ಫೀನಿಕ್ಸ್‌ನಂತೆ ಮತ್ತೆ ಮೇಲ್ದೆದು ಬಂದರೆ ’ತಾವೇ ಬೆಳೆಸಿದವರು ’ ಅನ್ನುವಂತೆ ಪೋಸ್ ಕೊಡುವವರೂಅವರೇ!
ಬೇತಾಳಕ್ಕೆ ರೋಸಿ ಹೋಗಿತ್ತು. ಆ ದಿನದ ಸ್ದುದಿಯನ್ನ್ಲೆಲಾ ಹೀರಿಕೊಂಡ್ದಿದ ತನ್ನ ಲ್ಯಾಪ್‌ಟಾಪ್ ಕಂಪ್ಯೂಟರ್‌ನ್ನು ಬಿಡಿಸಿ ಕುಳಿತು ನೋಡಿತು.. ಸಿನಿಮಾ ಪ್ರಶಸ್ತಿಯದೇ ಸ್ದುದಿ. ಪ್ರಕಾಶ್ ರಾಜ್ ಆಗಿ ಬದಲಾದ ತುಳು-ಕನ್ನಡಿಗ ಪ್ರಕಾಶ್ ರೈಗೆ ಶ್ರೇಷ್ಠ ನಟ ಪ್ರಶಸ್ತಿ ಬಂದಿತ್ತು. ಎಲ್ಲೆಲೂ ರೈ ಗುಣಗಾನ. ಚಾನೆಲ್‌ಗಳಂತೂ ಒಲದ ಮಗನ ಬೆನ್ನು ತಟ್ಟುವಂತೆ ಪ್ರವರ ಒಪ್ಪಿಸಿದುವು.....
ಆಂ? ಅಷ್ಟರ್‍ಲಲಾಗಲೇ ವಿಕ್ರಮಾದಿತ್ಯ ಶವವನ್ನು ಮರದಿಂದ ಇಳಿಸಿ ಎಂದಿನಂತೆ ತನ್ನ ಹಾದಿ ತುಳಿಯತೊಡಗ್ದಿದ... ಚಕ್ಕನೆ ಜಾಗೃತವಾದ ಬೇತಾಳ, ರಾಜನ ‘ತಲೆ ಕೊರೆಯಲು’ ಇಂದು ಇದೇ ವಿಷಯ ಸಾಕು ಎಂದು ಯೋಚಿಸಿ, ಶವದೊಳಗಿಂದ ಅಶರೀರವಾಣಿ ಆರಂಭಿಸಿತು.
ರಾಜನೇ , ಇದು ವರೆಗೆ, ಅಂದರೆ ಪ್ರಶಸ್ತಿ ಬರುವ ಹಿಂದಿನ ದಿನದ ವರೆಗೂ ಕನ್ನಡಿಗರು, ಮಾಧ್ಯಮಗಳ ಜಾಣ ಮರೆವಿಗೆ ಕಾರಣ ರಾದ ಪ್ರಕಾಶ್ ರೈ ಅವರನ್ನು ಮತ್ತೆ ಹೊನ್ನಶೂಲಕ್ಕೆ ಏರಿಸತೊಡಗ್ದಿದಾರೆ.... ಹೇಗೂ ಖಳನಾಯಕನಾಗಿ ಅನುಭವ ಇದ ಪ್ರಕಾಶ್ ರೈಯ ತುಟಿ ಅಂಚಿನ್ಲಲಿ ವ್ಯಂಗ್ಯದ ನಗು ಇತ್ತೇ...!
೨೦೦೮ರ್‍ಲಲಿ ಒಂದೇ ವರ್ಷ ಆರೆಂಟು ಸಿನಿಮಾ ಮಾಡ್ದಿದ ಪ್ರಕಾಶ್ ಬಗ್ಗೆ , ಕಾಂಜೀವರಂ’ ಬಗ್ಗೆ ಪ್ರಶ್ಸತಿಗೂ ಮುನ್ನ ಒಂದಕ್ಷರವನ್ನೂ ಬರೆಯದ ಕನ್ನಡ ಜನತೆ ಪ್ರಶಸ್ತಿಯ ಮರುದಿನ ‘ಇವ ನಮ್ಮವ ’ ಎಂದು ಹೊರುವುದೇಕೆ. ಪ್ರಕಾಶ್‌ರೈಗಂತೂ ಇದರ ಅಗತ್ಯ ಇರಲ್ಲಿಲ.
ಕನ್ನಡದ ಸ್ಕ್ರಾಲ್ ನ್ಯೂಸ್‌ಗಳ್ಲಲೂ ಕಾಣಿಸಿಕೊಳ್ಳದ್ದಿದ, ಬ್ಲೊ ಅಪ್ ಗಳ ವ್ಯಾಪ್ತಿಯಿಂದಲೂ ಹೊರಗ್ದಿದ, ಕನ್ನಡಿಗರ ನೆನಪಿನಂಗಳದಿಂದಾಚೆ ತನ್ನ ಹೆಸರನ್ನೇ ಬದಲಿಸಿ ಕೊಂಡು ಹೊಸ ಗೂಡುಕಟ್ಟ್ದಿದ ಪ್ರಕಾಶ್‌ರಾಜ್ ರಾತ್ರಿ ಬೆಳಗಾಗುವುದರೊಳಗಾಗಿ ಮತ್ತೆ ‘ಕನ್ನಡಿಗ’ನಾದ ‘ಕನ್ನಡ ಪವಾಡ’ ಬೇತಾಳಕ್ಕೆ ರೇಜಿಗೆ ಉಂಟುಮಾಡಿತ್ತು.
ನಾಗಮಂಡಲದ ಬಳಿಕ..
ಬೇತಾಳಕ್ಕೆ ಅರ್ಥವಾಗದ ಪ್ರಶ್ನೆ ಅದು... ಪ್ರಕಾಶ್ ರೈ ಕನ್ನಡ ಬಿಟ್ಟು ಇತರ ಭಾಷೆಗೆ ಹೋಗಬೇಕಿತ್ತಾ...
’ನಾಗಮಂಡಲ’ ಎಂಬ ಅಸಂಗತ ಕಥಾನಕವನ್ನು ನಟಿ ವಿಜಯಲಕ್ಷ್ಮಿ ಜೊತೆ ಕನ್ನಡಿಗರು ಮೆಚ್ಚುವಂತೆಮನೋಜ್ಞವಾಗಿ ನಟಿಸಿ ನೀಡಿದ ಪ್ರಕಾಶ್ ರೈಯನ್ನು ಅಂದು ಅಭಿನಂದಿಸಲು ಕನ್ನಡದ್ಲಲಿ ಶಬ್ದ ಇರಲ್ಲಿಲವೇ? ಹಾಗೆ ಹೊಗಳಿ ಗಾಂಧಿನಗರದ ಜನರು ಒಂದಷ್ಟು ಅವಕಾಶ ನೀಡ್ದಿದರೆ ರೈ ಅವರು ರಾಜ್ ಆಗುತ್ತ್ದಿದರೆ? ಬೇತಾಳಕ್ಕೆ ಇದು ಅರ್ಥವಾಗದ ವಿಷಯವಾಗಿರಲ್ಲಿಲ.
‘ಬಿಸಿಲು ಕುದುರೆ’, ‘ಗುಡ್ಡದ ಭೂತ’ ಇತ್ಯಾದಿ ದೂರದರ್ಶನದ ಸಾಕ್ಷ್ಯ ಚಿತ್ರಗಳ ಮೂಲಕ ಕ್ಯಾಮೆರಾ ಮುಂದೆ ಬಂದ ಪ್ರಕಾಶ್ ರೈ ಮೂಲತಃರಂಗ ಕಲಾವಿದ ಈ ಕಾರಣದಿಂದಲೇ ಮುಖಾಭಿನಯ, ಭಾವಾಭಿನಯಗಳಿಗೆ ಹೇಳಿಮಾಡಿಸಿದಂತ್ದಿದರು. ಆದರೆ ಕನ್ನಡ ಮಂದಿಗೆ ಗಾಂಧಿನಗರದ ದೊರೆಗಳಿಗೆ ಅವರ್‍ಲಲಿನ ಕಲಾವಿದನನ್ನು ಗುರುತಿಸಿ ಬೆಳೆಸುವ ತಾಕತ್ತು ಇರಲ್ಲಿಲ... ಬೇತಾಳಕ್ಕೆ ಹಾಗನ್ನಿಸ್ದಿದರಿಂದ ರಾಜನಿಗೆ ಹಾಗೆಯೇ ಹೇಳಿತು.
ಪ್ರಕಾಶ್ ರೈಗೆ ಖಳನಾಗಿಯೂ ನಾಯಕ ನಾಗಿಯೂ ನಟಿಸುವ ಪ್ರತಿಭೆ ಇತ್ತು. ಆದರೆ ಬೆಂಗಳೂರಿನ ಅದರ್‍ಲಲೂ ಗಾಂಧಿನಗರದ ಕೆಲವರು ಹೇಳ್ದಿದಷ್ಟೇ ಕನ್ನಡ, ಅವರು ಹೇಳಿದವರು ಮಾತ್ರ ಪ್ರತಿಭಾವಂತರು, ನಾಯಕರು, ಗ್ಲೆಲುವವರ ಅನ್ನುವ ಧೋರಣೆಯ ವಿರುದ್ಧ ರೈಯ್ಲಲಿನ ‘ಹೀರೊ’ ರಾಜಿಮಾಡಿಕೊಳ್ಳಲ್ಲಿಲ. ಅವರ್‍ಲಲ್ದಿದ ‘ಖಳನಾಯಕ’ ಜ್ದಿದಿಗೆ ಹೋರಾಟಕ್ಕೆ ನ್ಲಿಲಲ್ಲಿಲ. ಬೇರೆ ಭಾಷೆಗಳತ್ತ ಮುಖಮಾಡಿದರು. ಆ ನೋವು ಅವರನ್ನು ಸದಾ ಕಾಡುತ್ತಿತ್ತು... ಬೇತಾಳಕ್ಕೆ ಆ ಸತ್ಯ ಗೊತ್ತಿತ್ತು.
ಅದ್ಲಿಲವಾದರೆ ವಜ್ರಮುನಿ ಎಂಬ ಆ ಗಾಂಭೀರ್ಯ, ಜೀವಕಳೆ ಹೊತ್ತ ಖಳನಾಯಕ ಪಟ್ಟ ಇಂದು ಖಾಲಿ ಬ್ದಿದಿರುತ್ತಿರಲ್ಲಿಲ. ಅದನ್ನು ಮುಂದುವರಿಸುವ ತಾಕತ್ತು ರೈ ಅವರಿಗಿತ್ತು. ಕೋಟು, ಗಿರ್ಜಾ ಮೀಸೆ, ಗಿರಿಕ್ ಮೆಟ್ಟು, ಕಿವಿ ಗಡಚಿಕ್ಕುವ ಮ್ಯೂಸಿಕ್ ಇದು ಡೈಲಾಗ್ ಹೇಳಿದರೆ, ಡಿಶುಂಡಿಶುಂ ಗುಂಡು ಹಾರಿಸಿದರೆ ಖಳನಾಗುವುದ್ಲಿಲ. ಅದಕ್ಕೆ ಭಾಷೆಯನ್ನು ಹೊರಳಿಸುವ, ಕಣ್ಣು ಮುಖದ್ಲಲಿ ಭಾವ ತುಂಬಿ ತುಳುಕುವ ಅಭಿನಯದ ಗತ್ತು ಬೇಕು, ಅನುಭಾವದ ಹೂರಣ ಇರಬೇಕು..... ಬೇತಾಳ ಒಂದು ಕ್ಷಣಮೌನವಾಗಿ ಮಾತು ಮುಂದುವರಿಸಿತು.
ಇದೇ ಕಾರಣಕ್ಕೆ ಯಾವ ಸಂದರ್ಶನದ್ಲಲೂ ಪ್ರಕಾಶ್ ’ತಾನು ಕನ್ನಡದ ಹುಡುಗ ಅನ್ನಲ್ಲಿಲ. ತಮಿಳು, ತೆಲುಗು, ಮಲೆಯಾಳಂ, ಕನ್ನಡ ನನ್ನನ್ನು ಬೆಳೆಸಿತು’ ಅಂದರು. ಬೇತಾಳಕ್ಕೆ ಭೇಷ್ ಅನ್ನದಿರಲಾಗಲ್ಲಿಲ.
ಕನ್ನಡಿಗರು ಅಂದು ಮನಸ್ಸು ಮಾಡ್ದಿದರೆ ‘ ತಮಿಳು ಚಿತ್ರ’ (ಕಾಂಜೀವರಂ)ಕ್ಕೆ ಬಂದ ಪುರಸ್ಕಾರವನ್ನು ಕನ್ನಡಕ್ಕೇ ಬಂತು ಎಂಬ ಬಳಸುದಾರಿ ಬೇಕಿರಲ್ಲಿಲ. ಇಲೇ ಇದು ಪ್ರಶಸ್ತಿ ಬಾಚಿಕೊಳ್ಳುವ ತಾಕತ್ತು ರೈ ಅವರ್‍ಲಲಿನ ನಟನಿಗೆ ಇತ್ತು. ಈಗ ವರರ ತಮಿಳು ಚಿತ್ರಕ್ಕೆ ಪ್ರಶಸ್ತಿ ಬಂದಾಗ ತೆಲುಗು, ಮಲೆಯಾಳಂ, ತಮಿಳರು ಪ್ರಕಾಶ್ ರಾಜ್ ಅನ್ನು ಕೊಂಡಾಡಬಹುದು. ಆದರೆ ತಾವೇ ಸಂಚು ಹೂಡಿ ಮರೆತ ಪ್ರಕಾಶ್ ರೈ ಅವರನ್ನು ಗುಣಗಾನ ಮಾಡಲು ಕನ್ನಡಿಗರಿಗೆ ಮುಖ ಇದೆಯಾ...?
ರಾಜನೇ ಈ ಪ್ರಶ್ನೆಗೆ ಉತ್ತರ ಗೊತ್ತ್ದಿದರೂ ಹೇಳದ್ದಿದರೆ ನಿನ್ನ ತಲೆ ಉದಿನ ಹಪ್ಪಳದಂತೆ ಪಿಪ್ಪುಚೂರಾಗುತ್ತದೆ...
ರಾಜ ಮೌನ ಮುರಿದ... ಬೇತಾಳನೇ ಇದು ಕನ್ನಡಿಗರ ಮೂಲ ಭೂತ ಗುಣ. ಕನ್ನಡ ಎಂದರೆ ಕೆಲವು ಭಾಗದ ಜನರು ಮಾತ್ರ, ಕೆಲವು ಭಾಗದ ಕನ್ನಡ ಮಾತ್ರ ಶ್ರೇಷ್ಠ, ಎಲ್ಲೆಲೂ ಆ ಕನ್ನಡ ಬಳಸಿದರಷ್ಟೇ ಪುರಸ್ಕಾರ ನೀಡಬೇಕು ಎಂಬಿತ್ಯಾದಿ. ಇಲದ್ದಿದರೆ ಎಂತೆಂಥಾ ಅತಿರಥ ಮಹಾರಥರು ಮೆರೆದ ಕನ್ನಡ ರಜತ ಭೂಮಿಯ್ಲಲಿ ಇಂದು ‘ಹಳೆ ಪಾತ್ರೆ ... ಪೇಪರ್’ಗಳ ಕೊರಕಲು ರಾಗ, ಪ್ರೇತ ನೃತ್ಯ ಕಾಣುತ್ತಿತ್ತೇ...? ಬರಡು ಭೂಮಿಯ್ಲಲಿ ಬೆಳೆ, ಬಂಡೆಯ ಮೇಲೆ ಒರತೆ ಚಿಮ್ಮಿಸಲು ಸಾಧ್ಯವೇ... ಅದಾಗದು, ಆದರೆ ಸಿನಿಮಾ ಮಂದಿ ಪ್ರತಿಭೆ ಇಲದವರನ್ನೂ ಹೀರೋ ಮಾಡುತ್ತಾರೆ. ಪ್ರತಿಭಾವಂತರನ್ನು ನೆರೆಯ ಭಾಷೆಗಳಿಗೆ ದಾನ ನೀಡುತ್ತಾರೆ. ಹೆತ್ತಮ್ಮನಿಗೆ ಬೇಡದ ಆ ಪ್ರತಿಭೆಗಳು ಹೊತ್ತಮ್ಮನ ಮಡಿಲ್ಲಲಿ ಆಕಾಶ ಮಟ್ಟ ಬೆಳೆಯುತ್ತಾರೆ.... ಆಗ ಕನ್ನಡಿಗರೂ ಎಲರೊಂದಿಗೆ ‘ಗೋವಿಂದಾ’ ಅನ್ನುತ್ತಾರೆ... ಗುಂಪಿನ್ಲಲಿ ಮುಖ ಮರೆಸಬೇಕ್ಲಿಲ.... ಮೌನ ಭಂಗವಾಗುತ್ತ್ದಿದಂತೆಯೇ ಬೇತಾಳ ಮರದ ಕೊಂಬೆ ಸೇರಿತು.