Tuesday, September 8, 2009

ಮುಖ್ಯಮಂತ್ರಿಯ ಚೀನ ಯಾನ

ವದೊಳಗೆ ಸೇರಿದ ಬೇತಾಳಕ್ಕೆ ಯಾಕೋ ಎಲ್ಲವೂ ಸರಿ ಇಲ್ಲ ಅನ್ನಿಸತೊಡಗಿತ್ತು. ಖಾಕಿ, ಖಾದಿ, ಕಾವಿಗಳೆಲ್ಲಾ ಅದಲುಬದಲಾದಂತೆ... ಎಲ್ಲವೂ ಅಯೋಮಯ.

ಅದರೊಳಗೆ ಇವರು.. ಇದರೊಳಗೆ ಅವರು ಸೇರಿ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದನ್ನಿಸತೊಡಗಿತು.
ಭಾರತೀಯ ಸೇನೆಯ ಅಧಿಕಾರಿಯಾಗ್ದಿದು, ಬಳಿಕ ನಾಲ್ಕು ದಶಕ ಕಾಲ ಆರ್‌ಎಸ್‌ಎಸ್ ಬಿಜೆಪಿಯ ಶಿಸ್ತಿನ ಸಿಪಾಯಿಯಾಗ್ದಿದ ಜಸ್ವಂತ್ ಸಿಂಗ್ ಪಾಕಿಸ್ತಾನದ ಮುಖಂಡರ ಬೆನ್ನುತಟ್ಟಿದಾಗ... ಕೇಸರಿಯೇ ನೆಲಜಲ ಎಂದೆನ್ನುತ್ತ್ದಿದ ರೈತಪುತ್ರ ಯಡಿಯೂರಪ್ಪ ಚೀನ  ಕತ್ತಿಕಾಳಗದ ಕೆಂಪುನೆಲಕ್ಕೆ ಆಸಕ್ತಿಯ ಅಡಿ ಇಟ್ಟ್ದದು, ಕೇರಳದ್ಲಲಿ `ಸ್ವಂತಕ್ಕೇನೂ ಬೇಡ ಎಲವೂ ಸಮಾಜ್ದದು'ಎಂದು ಹೇಳಿದ ಕಾರ್ಲ್ ಮಾರ್ಕ್ಸ್‌ನ ಶಿಷ್ಯರ ಸರ್ಕಾರದ ಮಂತ್ರಿಯೊಬ್ಬರು ಬಹುಕೋಟಿ ಹಗರಣದ್ಲಲಿ ತಬ್ಬಿಬ್ಬಾಗಿ ಸಿಬಿಐ ಪಟ್ಟಿಯ್ಲಲಿ ಹುಗಿದು ಹೋದ್ದದು.... ಬೇತಾಳನಿಗೆ ಬ್ರಾಂಡ್ ನೇಮ್‌ಗಳ್ಲೆಲಾ ಕಲಬೆರಕೆಯಾದಂತೆ ಅನ್ನಿಸತೊಡಗಿತ್ತು.
ಪಕ್ಕದ್ಲಲೇ ಇರುವ ಕೇರಳ...
ಕೃಷಿ, ಕೃಷಿರಂಗದ ಸುಧಾರಣೆ ಇತ್ಯಾದಿಗಳ ಬಗ್ಗೆ ಕಲಿಯ ಬೇಕೆಂದ್ದಿದರೆ, ಯಡಿಯೂರಪ್ಪ ಮತ್ತವರ ಸಹೋದ್ಯೋಗಿಗಳು ಚೀನಾಕ್ಕೆ ಹೋಗಬೇಕೆಂದಿರಲ್ಲಿಲ. ಪಕ್ಕದ್ಲಲೇ ಇರುವ ಕೇರಳದ ಕುಟ್ಟನಾಡಿನಂತಹ ಬಯಲುಸೀಮೆಗೆ ಹೋಗಿ ಬರಬಹುದಿತ್ತು. ಕಮ್ಯುನಿಸ್ಟರಿಗೆ ಅಧಿಕಾರ ಕೈಗೆ ಸಿಕ್ಕರೆ ಅವರೂ ಸಮಾಜವಾದ ಮರೆತು ಸಾಮ್ರಾಜ್ಯವಾದಿಗಳ ಭೂತಹೊಕ್ಕವರಂತಾಗುತ್ತಾರೆ. ಕುಟ್ಟನಾಡಿನ್ಲಲಿ ಭತ್ತದ ಗ್ದದೆಗಳು ಹೇಳ ಹೆಸರ್‍ಲಿಲದಂತೆ ವಿನಾಶದ ಅಂಚಿನ್ಲಲಿವೆ. ಸಾಮಾನ್ಯರು, ಸಣ್ಣಗಾತ್ರದ ಜಮೀನು ಹೊಂದಿದ ಕೃಷಿಕರು, ಗೇಣಿಗೆ ಕೃಷಿ ಮಾಡುವವರಿಗಾಗಿ ಕಾನೂನು ಹೆಚ್ಚೇನನನ್ನೂ ಕೊಟ್ಟ್ಲಿಲ. ಹೊಸ ಕಾಯ್ದೆಗಳೂ ಇದನ್ನೇ ಹೇಳುತ್ತವೆ. ಆದರೆ ಸಮಾಧಾನದ ವಿಷಯವೆಂದರೆ ನಿವೃತ್ತಿಯ ಅಂಚಿನ್ಲಲಿರುವ ವೃದ್ಧ ಕೃಷಿಕರಿಗೆ ಪಿಂಚಣಿ ರೂಪದ್ಲಲಿ ಗಂಜಿ ಕುಡಿಯಲು ಸರ್ಕಾರದಿಂದ ಹಣ ಸಿಗುತ್ತದೆ. `ಉಳುವವನೇ ಹೊಲದೊಡೆಯ' ಎಂದು ೭೦ರ ದಶಕದ್ಲಲಿ ಕೆಂಪುಬಾವುಟ ಹಿಡಿದು, ಕೃಷಿಕಾರ್ಮಿಕರ ಕೈಗೆ ಸ್ವಾಭಿಮಾನದ ಶಕ್ತಿ ನೀಡಿದ ಕಮ್ಯೂನಿಸ್ಟರು ಇಂದು ಎಲವನ್ನೂ ಮರೆತ್ದಿದಾರೆ ಬೇತಾಳನಿಗಷ್ಟೇ ಅಲ ಸ್ವತಃ ಪಕ್ಷದ ಬೆಂಬಲಿಗರಿಗೂ ಹೀಗೆ ಅನ್ನಿಸುತ್ತಿದೆಯಂತೆ!
ಪಶ್ಚಿಮ ಬಂಗಾಳ..
ಯಾಕಂದ್ರೆ ಪಶ್ಚಿಮ ಬಂಗಾಳದ್ಲಲಿ ಸೆಪಿಎಂ ಆಡಳಿತವ್ದಿದರೂ ದುಡಿಯುವವರನ್ನು ತೊತ್ತಳ ತುಳಿದ ಸರ್ಕಾರ ಟಾಟಾ ಕಂಪನಿಯ ಅಡಿಯಾಳಾಗಿ 'ನ್ಯಾನೊ'ಗೆ ಕೆಂಪು ಹಾಸಿನ ಸ್ವಾಗತ ನೀಡಿತ್ತು. ಅಲಿ ಬಡಜನರ ರಕ್ತ ಹಳದಿನದಿಯ ನೀರನ್ನೂ ಕೆಂಪಾಗಿಸಿತ್ತು. ಹಾಗಿರುವಾಗ `ಸಮಾಜವಾದಿ'ಗಳಾದ ಕಮ್ಯೂನಿಸ್ಟರಿಗೆ `ಸಾಮ್ರಾಜ್ಯವಾದಿ', `ಕೋಮುವಾದಿ' ಮುಂತಾದ ವ್ಯಾಧಿಗಳನ್ನು ಹೊತ್ತ ಬಿಜೆಪಿ ಮಂದಿ ಕಮ್ಯೂನಿಸ್ಟ್ ದೇಶ ಚೀನಾದಿಂದ ಕಲಿಯ ಬೇಕ್ದಾದೇನು ಎಂzಬುದು ಬೇತಾಳನ ತಲೆಗೆ ಹೊಳೆಯದ ವಿಷಯವಾಗಿತ್ತು.
ಭೂಮಾಫಿಯ ಪಾಲಾಗುತ್ತಿದೆ ಕೃಷಿ ಭೂಮಿ..
ಕರ್ನಾಟಕದ್ಲಲಿ ರೈತನಿಗೆ ಸುಖ ಇಲ, ರೈತರ ರಕ್ಷಕರೆಂದು ಕೂಗಾಡುವ ಸಂಘಟನೆ ಮುಖಂಡರು ಮಾತ್ರ ಹೊಟ್ಟೆ ಬೆಳೆಸಿ ಹಾಯಾಗ್ದಿದಾರೆ. ಆದರೆ ರೈತರ ಕೃಷಿ ಭೂಮಿ ಅಭಿವೃದ್ಧಿಯ ಹೆಸರ್‍ಲಲಿ ಭೂಮಾಫಿಯದ ಪಾಲಾಗುತ್ತಿದೆ. ಕೃಷಿ ಭೂಮಿ ಸುಲಭವಾಗಿ ವಾಣಿಜ್ಯ್ದೋದೇಶಕ್ಕೆ ಖಾತೆ ಬದಲಾಗುವುದರಿಂದ ರೈತನ ಕಾಲಡಿಯ ನಲ ಕರಗತೊಡಗಿದೆ. ವಿಶೇಷ ಆರ್ಥಿಕ ವಲಯ, ಉದ್ಯಮೀಕರಣ ಮುಂತಾದವುಗಳಿಗೆ ಜಮೀನು ಸ್ವಾಧೀನ ಎಂಬ ನೆಲೆಯ್ಲಲಿ ರೈತರ ಮೇಲೆಯೇ ಆಕ್ರಮಣ ನಡೆಯುತ್ತಿದೆ. ಬರಡು ಭೂಮಿಯ ಬದಲು ಫಸಲು ಭೂಮಿ ಸ್ವಾಧೀನ ಮಾಡುವ ಕುತಂತ್ರ ಅಧಿಕಾರಿ ವರ್ಗದ್ಲಲಿ ನಡೆಯುತ್ತಿದೆ. ಹಾಗಾಗಿ ಕುಳಿತ್ಲಲೇ ಮಾಡಬಹುದಾದ ಕ್ರಾಂತಿಗೆ ಸಿಎಂ ಚೀನಾಗೆ ಫ್ಲೈಟ್ ಹತ್ತಿ ಹಾರ್‍ದಿದೇಕೆ ಎಂಬುದು ಬೇತಾಳನನ್ನು ಕಾಡುವ ಪ್ರಶ್ನೆಯಾಗಿತ್ತು.
ಚೀನಾ ಅಭೂತಪೂರ್ವ ಸಾಧನೆ..
ಚೀನಾ ಕಮ್ಯೂನಿಸ್ಟ್ ರಾಜ್ಯವಾಗ್ದಿದರೂ ಅಲಿ ಕಳೆದ ನಾಲ್ಕುಯ ವರ್ಷಗಳ್ಲಲಿ ಅಭೂತಪೂರ್ವ ಸಾಧನೆ ಆಗಿದೆ. ಅಲಿಯ ಕೃಷಿ ನೆಲಗಳ್ಲಲಿ ಕ್ರಾಂತಿ ಕಾರಿ ಉತ್ಪಾದನೆ ಮಾಡಿ ಆಗಾರ ಸ್ವಾವಲಂಬನೆಗೆ ಸರ್ಕಾರ ಹೆಜ್ಜೆ ಇರಿಸಿದೆ. ರೈತರು ಸರ್ಕಾರಕ್ಕೆ ತಮ್ಮ ಇಳುವರಿಯ ಒಂದು ಭಾಗವನ್ನು ದೇಣಿಗೆನೀಡಿ ದೇಶದ ಆಹಾರ ಸಂಗ್ರಹಕ್ಕೆ ತಮ್ಮ ಕೊಡುಗೆ ಕೊಡುತ್ತಾರೆ. ಜಗತ್ತಿನ ಅತಿ ಹೆಚ್ಚು ಜನಸಂರ್ಖಯೆಯ ರಾಷ್ಟ್ರವಾಗ್ದಿದರೂ ಅಲಿನ ಬಡವರು ಹಸಿವೆ, ಪೋಷಕಾಂಶದ ಕೊರತೆ ಇಲದೆ ಬದುಕುತ್ತವೆ ಅಂತೆ ಇದು ವಿಶ್ವಸಂಸ್ಥೆಯ ಅಧ್ಯಯನ ವರದಿಯ್ಲ್ಲಲೂಇದೆ. ಹಾಂ! ಇದು ಭರತದ್ಲಲಿ ನಡೆಯುವ 'ಬಲವಂತದ ಮಾಘಸ್ನಾನ'ದಂತಿರುವ 'ಲೆವಿ ಪದ್ಧತಿ' ಅಲ. ದಾಖಲೆಯ್ಲಲಿರುವ ಎಲರಿಗೆ ಸಮಬಾಳು ಎಲರಿಗೆ ಸಮಪಾಲು ಸ್ಲೋಗನ್ ಅಲವೇ ಅಲ.
ಪ್ರವಾಸ ಹೊರಟ ಕಾರಣ
ಸಿಎಂಯಡಿಯೂರಪ್ಪ ಮತ್ತು ತಂಡದವರು ಪ್ರವಾಸ ಹೊರಟ ಇನ್ನೊಂದು ಕಾರಣ ಎಂದರೆ ಬಂಡವಾಳ ಹೂಡಿಕೆ. ಚೀನಾದಿಂದ ಶ್ರೀಮಂತರನ್ನು ರಾಜ್ಯಕ್ಕೆ ಕರೆಸಿ ಅವರಿಗೆ ಉದ್ಯಮ ಅವಕಾಶ ನೀಡುವುದು. ಬಿಜೆಪಿ ಅಧಿಕಾರ ನಡೆಸಲು ಅನರ್ಹ, ನಂಬಿಕೆಗೂಯೋಗ್ಯರ್‍ಲಲ ಎಂದು ಹೆಳುತ್ತಿರುವ ಭಾರತೀಯ ಕಮ್ಯುನಿಸ್ಟರ ಶಿಫಾರಸು ಇಲದೆ ಚೀನಾದ ಮಂದಿ ಇಲಿಗೆ ಹಣದ ಥೈಲಿ ಹಿಸಿದು ಬರುತ್ತಾರೆಯೇ? ರಾಜ್ಯದ್ಲಲಿ ವಿದೇಶಿ ಹೂಡಿಕೆದಾರರಿಗೆ ನೆಮ್ಮದಿಯ ವಾತಾವರಣ ಇಲ `ಇದು ಕೋಮು ಗಲಭೆ' ರಾಜ್ಯ ಎಂಬಂಥ ಸ್ದುದಿ ಹರಡುತ್ತಲೇ ಇರುವವರೂಇದಾರೆ. ಇದಕ್ಕೆ ಕೆಲವು ಆಂಗ್ಲ ಟಿವಿ ಛಾನೆಲ್‌ಗಳೂ ಸಾಥ್ ನೀಡುತ್ತಿವೆ.... ಬೇತಾಳಕ್ಕೆ ಇದ್ಲೆವೂಕಣ್ಣೊರಸುವ ತಂತ್ರ ಎಂದನ್ನಿಸತೊಡಗಿತ್ತು.
ಬೇತಾಳ ಇಷ್ಟ್ಲೆಲಾ ಮಾತನಾಡುತ್ತ್ದಿದರೂ ಇದ್ಲೆಲಾ ತನಗೆ ಸಂಬಂಧಿಸ್ದಿದೇ ಅಲ ಅನ್ನುವಂತೆ ಭಾರತೀಯ ಮತದಾರನ ಪ್ರತಿರೂಪದಂತೆ ಮೌನವಾಗಿ ಸಾಗುತ್ತ್ದಿದ ವಿಕ್ರಮಾದಿತ್ಯನನ್ನು ಕಂಡು ಅಸಹನೆ ಭೂಗಿಲ್ದೆದಿತು.
ರಾಜನೇ, ಈ ಮೇಲಿನ ಎಲಾಗೊಂದಲಗಳಿಗೆಉತ್ತರ ಅರಿತೂ ನೀನು ಉತ್ತರಿಸದ್ದಿದರೆ ನಿನ್ನ ತಲೆ ಬಾಂಬ್ ಇಡದೆಯೇ ಸ್ಫೋಟಗೊಳ್ಳುತ್ತದೆ ಎಂದು ಹೆದರಿಸಿತು....
 ತಂತ್ರ...
ಬೇತಾಳನೇ ... ಇದ್ಲೆಲವೂ ಸರ್ಕಾರ ನಡೆಸುವವರ್‍ಲಲಿ ಸಹಜವಾಗಿಯೇ ಇರುವ ತಂತ್ರ. ವಿಧಾನ ಸಭೆಯ್ಲಲಿ ಗ್ದದಲ ಮಾಡುವ ಪ್ರತಿಪಕ್ಷಗಳಬಾಯ್ಮುಚ್ಚಿಸಲು ಅಭಿವೃದ್ಧಿಯ ಮಂತ್ರ, ಚೀನಾ ಅಣ್ಣಂದಿರ ಸಹವಾಸ ಬಯಸಿದಂತೆ ತೋರಿಸಿ `ಕೋಮುವಾದಿ' ಗಳೆಂದು ಕರೆಯುವ ಕೊಮಾ ಸ್ಥಿತಿಯ್ಲಲಿರುವ ಕಮ್ಯುನಿಸ್ಟ್‌ರು, ವಿಚಾರವಾದಿಗಳು, ಬುದ್ಧಿ ಜೀವಿಗಳ ಹಾದಿ ತಪ್ಪಿಸುವ ತಂತ್ರ, ಎಲವನ್ನೂಪ್ರತಿ ಚುನಾವಣೆಯ್ಲಲಿ ಮರೆಯುವ ಜನ ಇಂತ್ದದನ್ನ್ಲೆಲ ಮರೆಯದೇ ಇರುತ್ತಾರೆಯೇ ಎಂದು ರಾಜ ಪ್ರಶ್ನಿಸಿದ.

ರಾಜನ ಮೌನ ವ್ರತ ಭಂಗವಾಗುತ್ತಿರುವಂತೆಯೇ ಬೇತಾಳ ಶವದೊಂದಿಗೆ ಮತ್ತೆ ಮರ ಸೇರಿತು.