Thursday, September 3, 2009

ಸಿಎಂ ಸಾವಿನ ಆಸುಪಾಸು

ಸಾವ್ಲಿಲದ ಜಾಗ ಇದೆಯೇ? ಸಾವು ಇಲ್ಲದವರು ಇದಾರೆಯೇ.. ಅದು ಕಲ್ಪನೆ ಮಾತ್ರ!


ಬೇತಾಳ ಯೋಚಿಸಿ.. ಯೋಚಿಸಿ ಅಸ್ವಸ್ಥನಾಗ್ದಿದ. ಇಂತಹ ಚಿಂತೆ ತಲೆಯ್ಲಲಿ ತುಂಬಲು ಕಾರಣ ಇತ್ತು. ಆಂಧ್ರ ಸಿಎಂ ವೈ ಎಸ್ ರಾಜಶೇಖರ ರೆಡ್ಡಿ ಅವರ ಸಾವು..

ಲೈವ್ ಆಗಲು ನಕ್ಸಲ್ ಅಡ್ಡಿ!

ಆ ದಿನದ ಎಲಾ ವಾರ್ತಾ ಮಾಧ್ಯಮಗಳು ಬಿತ್ತರಿಸಿದ ಸ್ದುದಿ ಸಾರಾಂಶನ್ನು ಗ್ರಹಿಸಿಕೊಂಡ್ದಿದ ಬೇತಾಳ ತನ್ನ್ಲಲ್ದಿದ `ಲ್ಯಾಪ್‌ಟಾಪ್ ಕಂಪ್ಯೂಟರ್'ನ್ಲಲಿ ಮುಖ್ಯಾಂಶಗಳನ್ನು ಅಳವಡಿಸಿಕೊಂಡಿತ್ತು. ಮುಂಬಯಿ ತಾಜ್ ಹೊಟೇಲ್‌ನ್ಲಲಿ ಉಗ್ರರ ದಾಳಿ(೨೬/೧೧) ಸಂಭವಿಸಿದಾಗ `ಲೈವ್' ವರದಿ ಟೆಲಿಕಾಸ್ಟ್ ಮಾಡುತ್ತ್ದಿದ ದೃಶ್ಯಮಾಧ್ಯಮಗಳು ಸಿಎಂ ಕಣ್ಮರೆಯ ಕುರಿತು ಇಂತಹ ಪ್ರಯತ್ನ ಮಾಡುತ್ತ್ದಿದುದು ಕಂಡುಬಂತು.

ಆದರೆ ಸಿಎಂ ಕಣ್ಮರೆ ಪ್ರಕರಣದ್ಲಲಿ ರಿಸ್ಕ್ ಹೆಚ್ಚು ಇತ್ತು. ಕ್ಯಾಮೆರಾಗಳು ಹೆಲಿಕಾಪ್ಟರ್ ಕಾಣೆಯಾಗ್ದಿದ ಕಾಡಿಗೆ ಏಕಾಏಕಿ ನುಗ್ಗುತ್ತ್ದಿದರು.... ಆ ಉತ್ಸಾಹಕ್ಕೆ ತಣ್ಣೀರು ಎರಚ್ದಿದು ನಕ್ಸಲರ ಭಯ! ಇದು ಅವರ ಮಾತಿನ್ಲಲಿ ಅಲ್ಲಲಿ ಕಾಣುತ್ತಿತ್ತು. ಮುಖ್ಯ ಮಂತ್ರಿ ಕಾಣೆಯಾದ ಕಾಡು ನಕ್ಸಲ ಕೇಂದ್ರ ತಾಣ ಎಂಬುದಾಗಿ ಪದೇ ಪದೇ ಅನ್ನುತ್ತ್ದಿದರು.

ಸಾವು ಒಂದೇ ಗೌರವ ಬೇರೆ..

ಕಾಣೆಯಾಗ್ದಿದ ಹೆಲಿಕಾಪ್ಟರ್‌ನ್ಲಲಿ ಮುಖ್ಯಮಂತ್ರಿ ವೈಎಸ್‌ಆರ್ ಮಾತ್ರ ಇದ್ದದ್ಲಲ. ಅಲಿ ಇಬ್ಬರು ಪೈಲಟ್‌ಗಳು, ಒಬ್ಬ ಗನ್‌ಮನ್, ಒಬ್ಬ ಕಂದಾಯ ಅಧಿಕಾರಿ, ಒಬ್ಬ ಪೊಲೀಸ್ ಅಧಿಕಾರಿ ಇದರು. ಇವರೂ ಮನುಷ್ಯರೇ, ಇವರ್‍ದದೂ ಜೀವವೇ, ಇವರಿಗೂ ಮನೆ, ಮಡದಿ ಮಕ್ಕಳು ಇದಾರೆ.... ಸಾವು ಒಂದೇ ರೀತಿ ಆಕ್ರಮಿಸಿ ಕೊಂಡಿತ್ತು. ಆದರೆ ಸಿಎಮ್ಮಿನ ಮರಣ ಮಾತ್ರ ಎಲರನ್ನೂ ಕಾಡ್ದಿದು ಮಾತ್ರ ಸತ್ಯ. ವ್ಯಕ್ತಿಯ ಲೌಕಿಕ ಜೀವನದ `ದರ್ಜೆ' ಆತನ ಸವಿನ ಶವದ ದರ್ಜೆಯನ್ನೂ ನಿರ್ಧರಿಸುವುದನ್ನು ಕಂಡು ಬೇತಾಳನ ತಲೆ ಕಿರಿಕ್ ಅಂದಿತು.

ಸಾವು ಅನ್ನುವ ಅತಿಥಿ

ಸಾವು ಅನ್ನುವುದೇ ಸತ್ಯ. ಅಲಿ ಮೇಲು ಕೀಳುಗಳ್ಲಿಲ. ಇರಬಾರದು. ಸಮಾನತೆ ಜಾಗ ಅದು. ಆಳಾಗಿರಲಿ, ಅರಸಾಗಿರಲಿ ಸಾವಿನಿಂದ ಹೊರತಾಗಿರಲು ಸಾಧ್ಯವ್ಲಿಲ... ಸಾವು ಒಂದೇ ವಿಧ ಆಗಿರಬಹುದು... ಆದರೆ... ಸಂಸ್ಕಾರ ಮಾತ್ರ ಭಿನ್ನ. ಆಳಿಗೊಂದು ಥರ, ಅರಸನಿಗೊಂದು ಥರ.. ಸ್ಮಶಾನದ್ಲಲಿ ಸಮಾಧಿಯ ಪಕ್ಕ ನಿಂತ್ದಿದ ಬೇತಾಳನಿಗೆ ಆ ಸತ್ಯ ಕಠೋರ ಅನ್ನಿಸಿತು.

ಸಾವನ್ನು ದೂರ ಇಡಲು, ಪಂಚಭೂತಗಳಿಂದಾದ ದೇಹವನ್ನು ಸಾವು ಅಪ್ಪದಂತೆ ಕಾಯಲು ಎಷ್ಟು ಸಿದ್ಧತೆ ನಡೆಸಿದರೂ, ಎಷ್ಟೇ ಸನ್ನಾಹ ಸಾವು ತಾನು ಆಕ್ರಮಿಸಬೇಕಾದ ದೇಹವನ್ನು ಸೇರಲು ನುಸುಳು ರಂಧ್ರವನ್ನು ಕಂಡುಕೊಂಡಿರುತ್ತದೆ. ತಕ್ಷಕನ ರೂಪದ್ಲಲಿ ಬರುವ ಸಾವನ್ನು ಹೊರಗಿಡಲು ಪ್ರಯತ್ನಿಸಿದ ರಾಜ ಪರೀಕ್ಷಿತ, ಸಾವಿನಿಂದ ಪಾರಾಗಲು ಬುದ್ಧನ ಸಲಹೆಯಂತೆ ಸಾಸಿವೆ ಕಾಳಿಗಾಗಿ ಅಲೆದಾಡಿದ ಗೌತಮಿ, ಸಾವಿನ ಹೆಜ್ಜೆಗಳನ್ನು ಬೆಂಬತ್ತಿ ಯಕ್ಷನ ಪ್ರಶ್ನೆಯ ಹಂದರದ್ಲಲಿ ಸಿಕ್ಕಿದ ಯುದಿಷ್ಠಿರ..... ಸಾವಿನ ಚಿಂತನೆ ನಡೆಸಿದ ಪೌರಾಣಿಕ, ಆದ್ಯಾತ್ಮಿಕ ಹೆಜ್ಜೆಗುರುತುಗಳು ಬೇತಾಳನ ಮನಃಪಟಲದ್ಲಲಿ ಸಿನಿಮಾ ರೀಲಿನಂತೆ ಚಲಿಸತೊಡಗಿದುವು..

ಆದರೂ ಆ ಸಿಎಂ ಸಾವು ಅನಿರೀಕ್ಷಿತ ಎಂದು ತಳ್ಳಿ ಹಾಕಬಹುದೇ? ನಕ್ಸಲರನ್ನು ಬೆಂಬತ್ತಿ ಕಾಡಿದ ಸಿಎಂ ರೆಡ್ಡಿ ನಕ್ಸಲರ ಅಡ್ಡೆಯಾದ ಕಾಡಿನ ನಡುವೆಯೇ ಕೊನೆಯುಸಿರೆಳ್ದೆದು ಮಾತ್ರ ವಿಪರ್ಯಾಸ.

ಸಾವು ಹೇಗೂ ಬರಬಹುದು... ಯಾವ ರೂಪದ್ಲಲೂ ಇರಬಹುದು. ಉದೇಶ ಮುಖ್ಯವೇ ಹೊರತು ನೆಪ ಅಲ ಎಂಬ ಸತ್ಯ ಅರಿತ ಬೇತಾಳ ತಾನು ಕುಳಿತ್ದಿದ ಶವ ಚಲಿಸತೊಡಗಿದಾಗ ಎಚ್ಚರಗೊಂಡಿತು.

ಅರಸನೂ ಆಳಾಗ ಬಹುದು..

ರಾಜ ಶವವನ್ನು ಮತ್ತೆ ಹೆಗಲಿಗೇರಿಸಿಕೊಂಡು ಹೊರಟ್ದಿದ. ಅಂಥಾ ಅರಸ ಇಂಥಾ ಅನಾಥ ಪ್ರೇತಕ್ಕೆ ಗತಿ ಕಾಣಿಸಲು ಭಗೀರಥ ಪ್ರಯತ್ನ ಪಡುತ್ತಿರುವುದು ಕಂಡು ಬೇತಾಳಕ್ಕೆ ವಿಸ್ಮಯವಾಯಿತು. ಆಳುಗಳು ಅರಸನ ಶವ ಹೊರುವುದು ಸರಿ, ಆದರೆ ಇಲಿ ಅರಸ ಅನಾಥ ಶವ ಹೊತ್ತು ಸಾಗುವುದರ ಹಿಂದಿನ ಸರಿತಪ್ಪುಗಳ್ಲಲ, ಆ ಮನಃಸ್ಥಿತಿ ಕಂಡು ಬೇತಾಳಕ್ಕೆ ವಿಸ್ಮಯವಾಯಿತು.

ಅರಸನ ಮೌನ ಮುರಿಯುವ ಪ್ರಯತ್ನಕ್ಕೆ ಮುಂದಾದ ಬೇತಾಳ ಅಂದು ಊರ್‍ಲೆಲಾ ಗ್ದದಲ ಎಬ್ಬಿಸ್ದಿದ ಸ್ದುದಿಯ ಮೂಲಕವೇ ಮೌನಮುರಿಯಲು ಪ್ರಯತ್ನಿಸಿತು....

ಹವಾಮಾನ ಇಲಾಖೆ ವಿಫಲ?

ಅರಸನೇ ಇದು ನಿನಗೂ ಗೊತ್ತಿರುವ ವಿಷಯ. ಅರಿವ್ಲಿಲದವನಂತೆ ನಟಿಸಬೇಡ. ಆಂಧ್ರಪ್ರದೇಶ ಎಂಬ ರಾಜ್ಯ ಪ್ರಜಾಪ್ರಭುವಿನ ಸಾವು ಸಹಜವೇ? ರಾಜಶೇಖರನು ರಹಸ್ಯವಾಗಿ ಪ್ರಜೆಗಳ ಯೋಗಕ್ಷೇಮ ತಿಳಿಯಲು, ಯೋಜನೆಗಳ್ಲಲಿ ಅಧಿಕಾರಿಗಳು ಕೈಗೊಂಡ ಅವ್ಯವಹಾರಗಳ ಪತ್ತೆಗೆ ಹೊರಟ್ದಿದು ಸಾವಿನ್ಲಲೇಕೆ ಕೊನೆಗೊಂಡಿತು? ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನೊಂದಿಗೆ ಸಾಗುವ ವಿಮಾನ, ಅತಿ ವಿಶಿಷ್ಟ ವ್ಯಕ್ತಿಯಾದ ರಾಜಶೇಖರ ರೆಡ್ಡಿ ಇದ ವಿಮಾನ ಹಾರಾಟದ ಮಾರ್ಗ ಹವಾಮಾನ ಇಲಾಖೆಯ ಅಧಿಕಾರಿಗಳ ಗಮನದ್ಲಲಿ ಇರಲ್ಲಿಲವೇ? ಮಳೆಯ ಹಂಗಾಮ ಮೋಡಮುಸುಕಿದ ಕಾಲಮಾನ ಹಾಗೂ ಅಪಾಯದ ಮುನ್ಸೂಚನೆಯನ್ನು ಅವರೇಕೆ ನೀಡಲ್ಲಿಲ. ಇವ್ಲೆಲಕ್ಕೂಉತ್ತರ ಗೊತ್ತ್ದಿದೂ ಮೌನವಹಿಸ ಬೇಡ ಎಂದು ಮಾತಿಗೆ ಎಳೆಯಿತು.

ಬೇತಾಳನೇ ಅಧಿಕಾರದ್ಲಲಿರುವವರಿಗೆ ಶತ್ರುಗಳು ಅನೇಕ. ಸಾವು ಕೂಡ ಶತ್ರುವೇ? ಶತ್ರು ಮಿತ್ರನ ರೂಪದ್ಲಲಿ ಸಾವಿನ ಹೊದಿಕೆ ಹ್ದೊದು ಬರುವುದು ಮಾತ್ರ ವಿಪರ್ಯಾಸ. ಜನ ಕಾರ್ಯಕ್ಕೆ ಹೊರಟ್ದಿದ ಪ್ರಜಾಪ್ರಭು ರಾಜಶೇಖರನಿಗೆ ಆಗಸದ್ಲಲಿ ಚಲಿಸಬೇಕಾದ ಹಾದಿ ದುರ್ಗಮ ಎಂದು ತಿಳಿಸಬೇಕಾದ ಹವಾಮಾನ ಇಲಾಖೆಗೆ ಅದು ತಿಳಿದಿರಲೇ ಬೇಕು. ಆದರೆ ಮೊಡದ ತೆರೆಯೊಳಗೆ ಹೆಲಿಕಾಪ್ಟರ್ ಸಂಚರಿಸಲಾರದು ಎಂದು ವೈಮಾನಿಕನಿಗೂ ಅರಿವಿರಬಹುದು. ಆದರೆ ಅರ್ಧಮಾರ್ಗದಿಂದ ಹಿಂದಿರುಗದೇ ಇದುದು. ನೇರ ಬೆಟ್ಟ- ದುರ್ಗಮ ಕಾಡಿನೊಳಕ್ಕೆ ವಿಮಾನ ಇಳಿಸ್ದಿದು ಮಾತ್ರಅರ್ಥವಾಗದ ವಿಷಯ.

ರಾಜಶೇಖರ ರೆಡ್ಡಿ ಜನಪ್ರಿಯ ಆಡಳಿತಾಧಿಕಾರಿಯಾಗ್ದಿದುದು, ಇತ್ತೀಚಿನ ಚುನಾವಣೆಗಳ ಯಶಸ್ಸು, ಈ ಯಶಸ್ಸನ್ನು ಕಂಡು ಪ್ರಜಾರಾಜ್ಯಂ, ತೆಲುಗು ದೇಶದಂತಹ ಸ್ಟಾರ್ ವ್ಯಾಲ್ಯೂ ಪಕ್ಷಗಳಿಂದ ತಾರೆಯರು ರೆಡ್ಡಿ ಪಾಳೆಯಕ್ಕೆ ಗುಳೇ ಬರತೊಡಿಗ್ದಿದುದು ಇತ್ತೀಚಿನ ವಿದ್ಯಮಾನ. ಇದು ಇತರ ಪಕ್ಷಗಳನ್ನು ಅಲುಗಾಡಿಸತೊಡಗಿಸಿತ್ತು. ಅಧಿಕಾರಿಗಳ ಭ್ರಷ್ಟತೆಯ ವಿರುದ್ಧ ಸಮರ ಸಾರ್‍ದಿದ ರು. ರೈತನಾಗಿ ಹುಟ್ಟಿ ವೈದ್ಯನಾಗಿ ಬೆಳೆದ್ದಿದ ಆ ಮುಖ್ಯಮಂತ್ರಿ ಅವ್ಯವಹಾರಗಳಿಗೆ ಶಸ್ತ್ರಚಿಕಿತ್ಸೆ ಆರಂಭಿಸ್ದಿದರು. ನಕ್ಸಲರಿಗೂ ಅವರು ದುಃಸ್ವಪ್ನವಾಗ್ದಿದರು. ಹೆಲಿಕಾಪ್ಟರ್ ದುರಂತ ತೀರಾ ಸಾಮಾನ್ಯ ಎಂಬ ರೀತಿಯ್ಲಲಿ ನಡೆದ್ದಿದರೂ ಅದರ ಹಿಂದೆ ನಿಗೂಢತೆಗಳಿರಬೇಕು ಎಂಬುದಂತೂ ಸತ್ಯ.

ಅರಸನ ಮೌನಭಂಗವಾಗುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಮರದ ಕೊಂಬೆ ಸೇರಿತು.