Thursday, September 17, 2009

ಯಸ್ ಯುವರ್ ಆನರ್!!

ಬೇತಾಳ ಒಂದು ಕ್ಷಣ ಬೆಚ್ಚಿತು. ಅದು ನಿಜವೇ... ಅಥವಾ... ಇದರ್‍ಲಲೂ ರಾಜಕೀಯ ಅಡಗಿರಬಹುದೇ...? ಆರೋಪ ಮಾಡಿದವರೂ ಕಾನೂನು ತಜ್ಞರೇ ಅಲವೇ....

ಪತ್ರಿಕೆಗಳು, ದೃಶ್ಯಮಾಧ್ಯಮಗಳ್ಲಲಿ ಅದೇ ಬ್ರೀಕಿಂಗ್ ನ್ಯೂಸ್, ಫ್ಲಾಷ್ ಎಲಾ.... ಕಾಲನ್ನು ಚಕ್ಕಳ ಮಕ್ಕಳ ಹಾಕಿ ಕುಳಿತು ಟಿವಿ ಚಾನೆಲ್‌ಗಳ್ಲಲಿ ಬರುತ್ತ್ದಿದ ಅವಲೋಕನವನ್ನು ವೀಕ್ಷಿಸಿತು. ಅಲೇ ಹರಡಿ ಹಾಕಿ ಪತ್ರಿಕೆಗಳನ್ನೂ ಓದಿತು. ಚೀಫ್ ಜಸ್ಟೀಸ್‌ವೊಬ್ಬರ ಮೇಲೆ ಭ್ರಷ್ಟಾಚಾರ ಆರೋಪ ಆರೋಪ.. ಬೇತಾಳನ ಮೈಯ್ಲೆಲಾ ಬೆವರಿತು. ಹರಹರಾ ಶ್ರೀ ಚೆನ್ನಸೋಮೇಶ್ವರಾ... ಎಂದು ಅರಿವ್ಲಿಲದೆ ಮನ ಆರ್ತನಾದಮಾಡಿತು.

ಹೆತ್ತ ತಾಯಿಯೇ ಮಗನ ಹತ್ಯೆ ಮಾಡಿದರೆ... ಬೇಲಿಯೇ ಹೊಲ ಮೇದರೆ... ಕಾಯುವನೇ ತಲೆ ತರಿದರೆ... ನಿಂತ ನೆಲವೇ ಬಾಯಿ ತೆರೆದು ನುಂಗಿದರೆ.... ಶಿವಕ್ಲೊಲಲು ಕಾಯುವ ಪರಮಾತ್ಮ ಯಾರು... ಎಂದೆನಿಸಿತು.

ಎಲ್ಲೆಲೂ ಭ್ರಷ್ಟಾಚಾರ. ಲಂಚ ರುಷುವತ್ತು. ಹಣ ಇಲದವ ಹೆಣಕ್ಕೆ ಸಮ ಎಂಬಂತಹ ಸ್ಥಿತಿ ಈ ಭೂಮಿ ಮೇಲಿದೆ..... ಅಷ್ಟಿಷ್ಟು ನಂಬಿಕೆಯ ಪೀಠ ಎಂದರೆ ನ್ಯಾಯಸ್ಥಾನಗಳಾಗ್ದಿದುವು. ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ನ್ಯಾಯ ದೇವತೆಯ ಕಯ್ಯ್ಲಲಿರುವ ತಕ್ಕಡಿ ಏರುಪೇರಾಗದು ಎಂದು ಬೇತಾಳ ಭಾವಿಸಿತ್ತು ಆದರೆ ಎಲವೂ ತಾನು ಭಾವಿಸಿದಂತ್ಲಿಲ ಎಂದು ಅನ್ನಿಸ ತೊಡಗಿತು.

ಸ್ಮಶಾನದ ಮೂಲೆಯ್ಲಲೇನೋ ಸ್ದದು ಬೇತಾಳ ಅತ್ತ ತಿರುಗಿತು. ವಿಕ್ರಮಾದಿತ್ಯ ಅದಾಗಲೇ ತನ್ನ ಕಾಯಕ ಆರಂಭಿಸ್ದಿದನು. ಶವ ಹೊತ್ತು ಬೇತಾಳಕ್ಕೆ ಬೆನ್ನು ಹಾಕಿ ನಡೆಯತೊಡಗ್ದಿದನು. ಈ ಜಗದ್ಲಲಿ ಕಲಿಯುಗದ ಕಾಲದ್ಲಲಿ ಬದಲಾಗದ ಭೂಪ ಇದರೆ ಈತ ಮಾತ್ರ. ಶವ ಹೊರಲು, ಹೆಣಕ್ಕೆ ಸಂಸ್ಕಾರ ಮಾಡಲು ಕೂಡ ಕರ್ಚೀಫಿನ ಕೆಳಗೆ ಕೈ ಒಡ್ಡಿ ಸಂಬಳದ ಹೊರಗೆ ಗಿಂಬಳವನ್ನೂ ಪಡೆಯುವ ಕಾಲದ್ಲಲಿ ಈತ ಮಾತ್ರ ಕಾಯಕವೇ ಕೈಲಾಸ ಎಂಬಂತೆ ಸಾಗುತ್ತ್ದಿದಾನ್ಲಲಾ ಏನಿದರ ಮರ್ಮ... ಬೇತಾಳನಿಗೆ ಸುಮ್ಮನಿರಲಾಗಲ್ಲಿಲ. ರಾಜನ ಮೌನಭಂಗ ಮಾಡುವ ತನ್ನ ಹಠ ಬಿಡಲ್ಲಿಲ.... ಶವದೊಳಗೆ ಸೇರಿತು. ಮಾತನಾಡ ತೊಡಗಿತು. ತನ್ನ ಲ್ಯಾಪ್‌ಟಾಪ್ ಕಂಪ್ಯೂಟರ್‌ನ್ಲಲಿ ಜೋಡಿಸಿಕೊಂಡ್ದಿದ ಮಾಹಿತಿಯನ್ನು ರಾಜನ ಮುಂದೆ ಹೇಳ ತೊಡಗಿತು.

ಅರಸನೇ ಇದೇನಿದು, ನ್ಯಾಯಾಧಿಪನೇ ಕಾಂಚಾಣದ ಆಸೆಗೆ ಬ್ದಿದಿರುವನೆಂದು ನ್ಯಾಯವಾದಿಗಳೇ ಆರೋಪಿಸಿರುವರ್‍ಲಲಾ...

ಆರ್ಯಾವರ್ತವೆಂಬ ಈ ಭರತ ಭೂಮಿಯ್ಲಲಿ ಪ್ರಜಾಸತ್ತೆಯ್ಲಲಿ ಬಡ ಜನರಿಗೆ ಕಾನೂನು ಕೈ ಅಳತೆಯ್ಲಲಿ ಸಿಗಬೇಕೆಂಬ ಆಶಯದೊಂದಿಗೆ ನ್ಯಾಯ ಪೀಠ ಜನರ ಬಳಿಗೆ ಸರಿಯಿತು. `ನ್ಯಾಯ ದಾನ ವಿಳಂಬವಾದರೆ, ನ್ಯಾಯದಾನ ನಿರಾಕರಿಸಿದಂತೆ' ಎಂಬ ನೀತಿಯಂತೆ ತ್ವರಿತ ನ್ಯಾಯಾಲಯಗಳ ಸ್ಥಾಪನೆಯಾಯಿತು. ಬಡವರಿಗೆ ಕಾನೂನು ಹೋರಾಟಕ್ಕೆ ನೆರವಾಗಲು ಲೋಕ ಅದಾಲತ್‌ಗಳು ಚಾಲನೆಗೊಂಡವು, ಬಡ ಜನರಿಗೆ ಸ್ವಂತ ವಕೀಲರನ್ನಿರಿಸಲು ಅಸಾಧ್ಯ ಎಂಬ ಕಾರಣಕ್ಕೆ ಸರ್ಕಾರವೇ ತನ್ನ ಖರ್ಚಿನ್ಲಲಿ ಬಡವರ ಪ್ರಕರಣಗಳ್ಲಲಿ ವಕೀಲರನ್ನು ನೇಮಿಸುವ ಪದ್ಧತಿಯೂ ಬಂತು.... ಇವುಗಳ್ಲೆಲಾ ಹಣ ಇಲ ಎಂಬ ಕಾರಣಕ್ಕಾಗಿ ಯಾರಿಗೂ ನ್ಯಾಯ ನಿರಾಕರಣೆ ಯಾಗಬಾರದು ಎಂಬ ಸದ್ದುದೇಶದ ಕ್ರಮಗಳಾಗ್ದಿದುವು.

ಆದರೆ ನ್ಯಾಯಮೂರ್ತಿಯೊಬ್ಬರ ಸುತ್ತ ಹರಡಿರುವ ಆರೋಪ... ಹೊಸ ರಿವಾಜುಗಳಿಗೆ ಎಡೆ ಮಾಡಿಕೊಡುವಂತಿದೆ. ಈಗ ಬಡವರಿಗೆ ನ್ಯಾಯ-ಸರಿಯಾದ ತೀರ್ಪುಒದಗಿಸಲು ಸರ್ಕಾರವೇ ಅವರ ಪರವಾಗಿ ನ್ಯಾಯಾಧೀಶರಿಗೆ ಅಗತ್ಯ `ಲಂಚ `(?!)ನೀಡಬೇಕೆ ಎಂಬ ಕುಚೋದ್ಯಕ್ಕೆ ಎಡೆ ಮಾಡಿದೆಯ್ಲಲಾ ಎಂದು ಪ್ರಶ್ನಿಸಿತು.

ರಾಜನೇ ನ್ಯಾಯಾಧಿಪನ ಸುತ್ತ ಹೆಣೆದ ಆರೋಪ ನಿಜವೇ? ಆ ನ್ಯಾಯಮೂರ್ತಿಯ ವಶದ್ಲಲಿ ಐದು ನೂರಕ್ಕೂ ಅಧಿಕ ಎಕರೆ ಅಕ್ರಮ ಜಮೀನು, ಲೆಕ್ಕ ಮೀರಿದ ಸಂಪತ್ತು ಇದೆ ಎಂಬ ಆರೋಪದ್ಲಲಿ ಹುರುಳಿರಬಹುದೇ?

ಬೇತಾಳನೇ... ಚಲನ ಚಿತ್ರಗಳ್ಲ್ಲಲ್ಲೆಲ ನೀನು ಇಂತಹ ದೃಶ್ಯಗಳನ್ನು ಗಮನಿಸಿರಬಹುದು. ಖಳನಾಯಕರು ಹೇಗೆUಹೇಗೋ ತನ್ನ ಬೆಂಬಲಿಗರಿಗೆ ಜಾಮೀನು, ನಿರೀಕ್ಷಣಾ ಜಾಮೀನು, ಪೆರೋಲ್ ಪಡೆದರೆ... ಎದುರು ಕಕ್ಷಿಗಳಿಗೆ ಗ್ಲಲು ಇತ್ಯಾದಿ ಕೃತ್ಯಗಳನ್ನು ರಕ್ತ ಸಿಕ್ತ ಅಧ್ಯಾಯದ ಮೂಲಕ ನಿರ್ವಹಿಸುವುದು ನೋಡಿರುವೆಯಷ್ಟೇ... ಬದುಕು ಕೂಡ ಒಂದು ನಾಟಕ (ಜಗವೊಂದು ನಾಟಕವು ನಿನದೊಂದು ಪಾತ್ರ, ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಳದಿ ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ, ಆಟಕ್ಕೆ ಕಥೆ ಇಲ ಮೊದಲ್ಲಿಲ, ಕಡೆ ಇಲ ನೋಡಕರೆ ಆಟಕರು- ಮಂಕುತಿಮ್ಮ) ಎಂದು ಡಿವಿಜಿಯಂತಹ ಬ್ಲಲವರು ಎಂದೋ ಹೇಳಿ ಹೋಗ್ದಿದಾರೆ....

ನ್ಯಾಯಾಧೀಶರೂ ಮನುಷ್ಯರೇ ಅಲವೇ? ಅವರಿಗೂ ಮಕ್ಕಳು ಮರಿ ಅವರ ಹಿತಚಿಂತನೆ ಇದೇ ಇರುತ್ತದೆ. ಎಲಾ ವ್ಯವಸ್ಥೆಯ್ಲಲೂ ಭ್ರಷ್ಟಾಚಾರ ತಾಂಡವವಾಡುತ್ತಿರುವಾಗ ನ್ಯಾಯಾಂಗಮಾತ್ರ ಕಾಂಚಾಣ ಬಂದಾಗ ಕಣ್ಮುಚ್ಚಿರಲು ಸಾಧ್ಯವೇ? ಅಷ್ಟಕ್ಕೂ ನ್ಯಾಯಾಧೀಶರನ್ನು ನೇಮಕ ಮಾಡುವವರು ಯಾರು. ಆಗ್ಲೆಲಾ ತೆರೆಮರೆಯ ಕಸರತ್ತು ನಡೆಸುವವರು ಯಾರು. ಯಾರು ನ್ಯಾಯಾಧೀಶರಾದರೆ ಆಡಳಿತಾಧಿಕಾರಿಗಳು ಲೆಕ್ಕ ಹಾಕಿಯೇ ಹಾಕುತ್ತಾರೆ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಬೇರೆಬೇರೆ ಎಂದು ಸಂವಿಧಾನ ಹೇಳ್ದಿದರೂ ಇಂದು ಅದ್ಲೆಲಾ ಕಲಸು ಮೇಲೋಗರ ಆಗುತ್ತಿದೆ. ಆದರೆ ಎಲವೂ ತೆರೆಮರೆಯ್ಲಲಿ ಅಷ್ಟೇ...

ನ್ಯಾಯಾಧೀಶರ ನೇಮಕ, ರಾಜ್ಯಪಾಲ,ರಾಷ್ಟ್ರಪತಿ ನೇಮಕ ಇತ್ಯಾದಿಗಳ ಹಿಂದೆ ಮೇಲ್ನೋಟಕ್ಕೆ ಸಾಚಾ ಕಂಡರೂರಾಜಕೀಯದ ನೆರಳು ಇದೇ ಇದೆ. ರಾಜಕೀಯ ಇದರೆ ಅಲಿ ಹಣಕಾಸಿನ ವ್ಯವಹಾರ ಇದೇ ಇರುತ್ತದೆ ಅನ್ನುವುದು ಬ್ಲಲವರ ಮಾತು. ಬಂಗಾಳ, ನೋಯ್ಡಾ ಮುಂತಾದೆಡೆ ಈಗಾಗಲೇ ನ್ಯಾಧೀಶರು ಇಂತಹ ಬಲೆಯ ಸುಳಿಯ್ಲಲಿ `ಕಾಣೆ'ಯಾಗ್ದಿದಾರೆ. ಇತ್ತೀಚೆಗಂತೂ `ಆಸ್ತಿ ಬಹಿರಂಗ' ಎಂಬ ನಾಟಕಗಳೂ ರಂಗೇರುತ್ತಿವೆಯ್ಲಲಾ. ಲೆಕ್ಕಪರಿಶೋಧಕರೆಂಬ ನಕ್ಷತ್ರಿಕರು ಕೈಯೊಳಗ್ದಿದರೆ ಹಿಮಾಲಯದಂತಹ ಸಂಪತ್ತ್ದಿದರೂ ಮೋಟು ದಿಬ್ಬ ಎಂದು ಸಣ್ಣದಾಗಿ ತೋರಿಸುವ ಜಾಣರು ಇರುತ್ತಾರೆ...

ರಾಜ್ಯಪಾಲ, ರಾಷ್ಟ್ರಪತಿ ಇತ್ಯಾದಿ ನಿವೃತ್ತ ರಾಜಕಾರಣಿಗಳು, ಪರೋಕ್ಷ ರಾಜಕಾರಣಿಗಳು, ಇತರ ಕ್ಷೇತ್ರದ್ಲಲಿ ಆಡಳಿತಾಧಿಕಾರಿಗಳಿಗೆ ನಿಕಟವಾಗಿರುವವರಿಗೆ ದಕ್ಕುತ್ತ್ದಿದ ಹ್ದುದೆಗಳು. ಆದರೂ ಹಿಂದ್ಲೆಲಾ ಅದಕ್ಕೆ ಒಂಧು ರೀತಿಯ ನೀತಿಯ ಚೌಕಟ್ಟು ಇತ್ತು. ಇಂದು ರಾಜ್ಯ ಪಾಲರಾದವರು ಮತ್ತೆ ರಾಜಕಾರಣಿಯ ಪೋಷಾಕು ತೊಡುತ್ತಾರೆ ಎಂದಾದರೆ ಯಾ ಸ್ಥಾನವೂ ಭದ್ರವಾಗಿದೆ, ಭಷ್ಟಾಚಾರ ರಹಿತವಾಗಿದೆ ಎಂದು ಭಾವಿಸಬೇಕ್ಲಿಲ.

ಹಾಗೆಂದು ಈಗ ನೀನು ಹೇಳಿರುವ ನ್ಯಾಯಾಧಿಪನ ಮೇಲಿನ ಆರೋಪ ಸತ್ಯವಾಗಿರಬೇಕ್ಲಿಲ. ಮೇಲಿನ ನ್ಯಾಯಾಲಯಕ್ಕೆ ಬಡ್ತಿಯಾಗಿರುವ ನ್ಯಾಯಾಧಿಪನ ಉನ್ನತಿಯ ಮೇಲೆ ಅಸೂಯೆಗೊಂಡವರ ಸಂಚು ಇದೆ ಎಂಬ ಹ್ಲುಲುಕಡ್ಡಿಯ ಆಶ್ರಯವನ್ನು ಬೇಕಾದರೆ ಮುಳುಗುವ ಮೊದಲು ಗಟ್ಟಿ ಹಿಡಿಯಬಹದು.

ರಾಜನು ಮಾತು ಮುಗಿಸುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಮರದ ಕೊಂಬೆ ಸೇರಿತು.

1 comment: