Friday, September 25, 2009

ಗೇರಿ ಸೂತ್ರ: ಆಟಕ್ಕೂ ಪಾಠಕ್ಕೂ ಸೆಕ್ಸ್ !

'ಅಪ್ಪಾ ರೇಂಕ್ ಬರಬೇಕಂದ್ರೆ ನನಗೆ ಸೆಕ್ಸ್ ಬೇಕು ... ಇಂಥ್ದಾದ್ಲೆಲಾ ಇದರೆ ಮಾತ್ರ, ಸ್ಕೋರ್ ಮಾಡೋಕೆ ಇಂಟರೆಸ್ಟ್ ಬರುತ್ತೆ. ಇಂಡಿಯನ್ ಕ್ರಿಕೆಟಿಗರು ಸ್ಕೋರ್ ಮಾಡೋಕೆ ಕೋಚ್ ಗ್ಯಾರಿ ಕರ್ಸ್ಟನ್ ಹೇಳ್ದಿದು ನೀವು ಓದಿಲ್ವಾ....'

ಬೇತಾಳ ಒಂದು ಕ್ಷಣ ಬೆಚ್ಚಿತು... ನಮ್ಮ ವಿದ್ಯಾರ್ಥಿಗಳೇನಾದರೂ ತಮ್ಮ ಪಾಲಕರ್‍ಲಲಿ ಇಂತಹ ಬೇಡಿಕೆ ಇರಿಸಿದರೆ. .. ಆಟದ್ಲಲಿ ಆಗಬಹುದಾದರೆ ಪಾಠದ್ಲಲಿ ಏಕಾಗಬಾರದು ..! ಹೀಗೇ ಹೋದರೆ ಅಂಕ ಇರಲಿ, ರನ್ ಆಗಿರಲಿ ಸ್ಕೋರ್ ಮಾಡೋಕೆ ತರಬೇತಿ, ಟ್ಯೂಷನ್, ಸ್ಟಡಿಗಿಂತ ಸೆಕ್ಸ್ ಗೆ ಹೆಚ್ಚು ಮಹತ್ವ ಬರಬಹುದೇ ಬೇತಾಳನ ಮೈ ಬೆವರಿತು...

ಟೀಮ್ ಇಂಡಿಯಾದ ಕೋಚ್ ಗ್ಯೇರಿ ಹೇಳಿದ ೪ ಪುಟಗಳ ಸಲಹೆ ಕೇಳಿ ತಂಡದ `ಯುವ' ಆಟಗಾರರು ಇನ್ನು ಕ್ದದು ಮುಚ್ಚಿ ೨೦-೨೦ ಆಡಬೇಕ್ಲಿಲ ಎಂದು ಇಲದ ಮೀಸೆಯ ಕೆಳಗೆ ತುಟಿ ಸವರಿಕೊಂಡರೆ, ಯುವತನ ಕಳೆದು ಕೊಳ್ಳದ್ದಿದರೂ ತಂಡದಿಂದ ಹೊರಗಾಗಿರುವ `ಮಾಜಿ'ಗಳು 'ಈ ಐಡಿಯ ಅವರಿಗೆ ಅಂದೇ ಏಕೆ ಬರಲ್ಲಿಲ ಎಂದು ಬಾಯಿಬಾಯಿ ಬಡಿದುಕೊಳ್ಳತೊಡಗ್ದಿದಾರೆ. ಇನ್ನು ಕೆಲವು ಆಟಗಾರರ ಗೆಳೆಯಗೆಳತಿಯರಂತೂ ಇದಕ್ಕ್ಲೆಲಾ ಕೋಚ್‌ನ ಸಲಹೆ ಬೇಕೇನ್ರಿ ನಮ್ಮ `ಹುಡುಗ' ಇದನ್ನು ಹಿಂದೆಯೇ 'ಚಾಲೂ' ಮಾಡ್ಯಾನ್ರಿ.. ಅಂತ ಮನದೊಳಗೆ 'ಅಕ್ರಮ-ಸಕ್ರಮ' ಕ್ಕೆ ಅವಕಾಶ ದೊರೆಯುತ್ತದ್ಲಲಾ ಅಂತ ಲೆಕ್ಕಾಚಾರದ್ಲಲಿ ತೊಡಗ್ದಿದರು. ಬೇತಾಳಕ್ಕೆ ತಪ್ಪು ಮಾಡಿಯಾದರೂತುಪ್ಪ ತಿನ್ನು ಎಂಬ ಗಾದೆ ಮಾತು ನೆನಪಾಯಿತು. ಎಲದಕ್ಕೂ ಬ್ಲೆಲ ಸೇರಿಸಿ ಪಾಕವನ್ನು ನಳಪಾಕ ಮಾಡುವಂತೆ ಇಂದು ಎಲದರ್‍ಲಲೂ ಕಾಮವನ್ನು ಬೆರೆಸುವುದು ಕಾಮನ್ ಆಗುತ್ತಿದೆ.

ಭಾರತ ತಂಡದ್ಲಲಿ ಸೇರಿಕೊಂಡಿರುವ ಕೇರಳದ 'ಕಿಡಿಮಿಡಿ' ಹುಡುಗ, ಪಂಜಾಬ್‌ನ `ತುಂಟ', `ಜಗಳ ಗಂಟ'ರು ಈಗಾಗಲೇ ಹಲವು ಸಿನಿ ನಟಿಯರು, ಮಾಡೆಲ್‌ಗಳ ಕುಡಿನೋಟಕ್ಕೆ ಕರಗಿ ಹೋಗ್ದಿದರು ಎಂಬ ಗಾಸಿಪ್‌ಗಳು ಅಲ್ಲಲಿ ಚೌಚೌ ಬಾತ್ ಬಡಿಸಿತ್ತು. ಇದ್ಲೆಲಾವೂ ಆದ ಮೇಲೆ ಗ್ಯಾರಿ ಅವರ 'ಅಕ್ರಮ ' ಕಾನೂನು ಜಾರಿ ಗೊಂಡಿತ್ತು.

ಐಪಿಎಲ್ ಕ್ರಿಕೆಟ್ ಎಂಬ 'ನವರಸ' ಭರಿತ ಕ್ರಿಕೆಟ್ ಜೂಜು, ಕ್ರಿಕೆಟಿಗರ ಹರಾಜು, ತೆರೆಮರೆಯ ಮೋಜು ಆರಂಭವಾದ ಮೇಲೆ ಈ ಆಟ ಹಿಂದಿನಂತೆ ಮಾನ್ಯತೆಯ ಚೌಕಟ್ಟಿನೊಳಗೆ ಉಳಿದ್ಲಿಲ. ಮ್ಯಾಚ್‌ಪಿಕ್ಸಿಂಗ್‌ಗೆ ಖಲಾಸ್ ಆಗ್ದಿದ ಕ್ರಿಕೆಟ್‌ನ ಮಾನ ಕ್ರೀಡಾಂಗಣದೊಳಗೆ ಕುಣಿಯುವ ಮಾನಿನಿಯರ ಅರಂಗೇಟ್ರದೊಂದಿಗೆ ಡಮಾರ್ ಆಯಿತು.

ಎಲಾ ಓಕೆ ಚೀಯರ್ಸ್ ಗರ್ಲ್‌ಗಳು ಯಾಕೆ? ಎಂಬ ಅನುಮಾನ ಹೆಡೆ ಎತ್ತ ತೊಡಗ್ದಿದು ಆಗಲೇ... ಈ ಹಂತದ್ಲಲಿ ಆಡಿ ಆಡಿ ಸುಸ್ತಾದ ಹುಡುಗರ ಬ್ಲಿಲಿಗೆ ಹೆದೆ ಏರಿಸುವ ಪ್ರಯತ್ನವನ್ನು ಮಾಡುವ ಹೊಣೆ ಕೋಚ್ ಗ್ಯಾರಿ ಅವರಿಗಿತ್ತು. ಆದರೆ ಈ ಹೊಣೆಗಾರಿಕೆಯನ್ನು ಅವರು ಬಳಸಿಕೊಂಡ ರೀತಿ ಮಾತ್ರ ಭಾರತೀಯರು ಹುಬ್ಬ ಗಂಟಿಕ್ಕುವಂತೆ ಮಾಡಿದೆ.

ಭಾರತೀಯ ಕ್ರಿಕೆಟ್ ತಂಡದ್ಲಲಿ ಕೋಚ್‌ಗಳ ಬಗ್ಗೆ ಅಸಮಾಧಾನ ಎಂದೆಂದೂ ನಿರಂತರವಾಗಿರುವ ಸಮಸ್ಯೆ. ಇಂತಹ ಬೆಂಕಿಗೆ ತಣ್ಣೀರೆರಚಿ ನಂದಿಸುವ ಪ್ರಯತ್ನವನ್ನು ಗ್ಯಾರಿ ಅವರು ಮಾಡ್ದಿದಾರೆ ಎಂಬ ಕುಹಕವೂ ಅಲ್ಲಲಿ ಕೇಳಿ ಬರುತ್ತಿದೆ. ವೀರು ಅವರು ತಂಡದ ನಾಯಕ ಸ್ತಾನ ಬಿಟ್ಟ್ದದು, ಆಯ್ಕೆ ಸರಿ ಇಲ, ವಿಶ್ರಾಂತಿ ಕೊಡುತ್ತ್ಲಿಲ ಎಂದು ದೋನಿ ತಂಡ ಕಿರಿ ಗುಟ್ಟ್ದಿದು, ಎಲಾ ಸೇರಿ ಕೋಚ್ ಗ್ಯಾರಿ ಸುತ್ತ ಗುಮ್ಮನಂತೆ ಬಂದು ಕುಳಿತಾಗ ಅವರು ಸ್ವ-ರಕ್ಷಣೆಗಾಗಿ `ಮೋಹಿನಿ ಅಸ್ತ್ರ'ವನ್ನು ಬಳಸಿದಂತೆ ತೋರುತ್ತದೆ. ಆದರೆ ಈ ಮೋಹಿನಿ ಅಸ್ತ್ರ ಅವರ ಕಾಲಿಗೆ ತೊಡಕಾಗಿ, ಅವರ ವೃತ್ತಿ ಭವಿಷ್ಯಕ್ಕೆ ತೊಡರುಗಾಲು ಹಾಕುವ ಸಾಧ್ಯತೆಯೂ ಇದೆ.

ಸಾಧಕನು 'ವಿಷಯಾಕಾಂಕ್ಷೆ'ಗಳಿಂದ ಮುಕ್ತನಾಗಿರಬೇಕು. ಬ್ರಹ್ಮಚರ್ಯವೇ ಸಾಧಕನ್ಲಲಿರಬೇಕಾದ ಮುಖ್ಯ ಅರ್ಹತೆ . ಕಾಮಕ್ರೋಧಲೋಭ ಮೋಹ ಮದ ಮತ್ಸರ ಇತ್ಯಾದಿ ಅರಿ ಷಡ್ವರ್ಗಗಳಿಂದ ದೂರವಿರಬೇಕು. `ಶರೀರಮಾದ್ಯಂ ಖಲು ಧರ್ಮ ಸಾಧನೆ' ಎಂಬ `ಚಾರ್ವಾಕ ವಾದ'ವು ಸಾಧಕನಿಗೆ ಹಿತವ್ಲಲ. ಸಂಯಮವೇ ಸಕಲಕ್ಕೂ ಸಾಧನ ಎಂಬಿತ್ಯಾದಿ ಭಾರತೀಯರ ಗುರಿಸಾಧನೆಯ ನೀತಿ ಸಂಹಿತೆಯನ್ನೇ ಗ್ಯಾರಿ ಗೆರಸೆಯ್ಲಲಿ ಹಾಕಿ ಗೇರ್‍ದಿದಾರೆ..... ಬೇತಾಳನ ತಲೆಯ್ಲಲಿ ಅದೇನೇನೊ ವಿಷಯಗಳು ಬಾಲ್‌ನಂತೆ ಗಿರಗಿರನೆ 'ಸ್ಪಿನ್' ಆಗತೊಡಗಿತು.

ಅಷ್ಟರ್‍ಲಲಾಗಲೇ ವಿಕ್ರಮಾದಿತ್ಯನು `ಅಂಪೇರ್'ನ ಮುಖದಂತೆ ನಿರ್ವಿಕಾರನಾಗಿ ನಿರ್ಲಿಪ್ತನಾಗಿ ಎಂದಿನಂತೆ ಶವಹೊತ್ತು ಹೊರಟಿರುವುದು ಕಾಣಿಸಿತು. ಜಗತ್ತೇ ಇಂದು ಕಾಮದ ಸುತ್ತ ಗಿರಕಿ ಹೊಡೆಯುತ್ತ್ದಿದರೆ ರಾಜನು ಮಾತ್ರ ಶವದ ಸುತ್ತ ಚಪ್ಪಲಿ ಸವೆಸುತ್ತಿರುವುದು ಬೇತಾಳಕ್ಕೆ ಅಚ್ಚರಿಯುಂಟು ಮಾಡಿತು. ಸೆಕ್ಸ್‌ನ ಬಗ್ಗೆ ಮಾತಿಗೆಳೆದರೆ ಎಂತಹ ಮೌನಿಯೂ ವಾಚಾಳಿಯಾಗುತ್ತಾನೆ ಎಂಬ ಆಧುನಿಕ ನಿಯಮದಂತೆ ಬೇತಾಳನೂ ರಾಜನ ಮೌನವ್ರ ಭಂಗಕ್ಕೆ ಸೆಕ್ಸ್ ಅಸ್ತ್ರ ಪ್ರಯೋಗಿಸಿತು... ಅದನ್ನು ಪ್ರಶ್ನೆಯ ರೂಪದ್ಲಲಿ ನಿವೇದಿಸಿತು.

ಅರಸನೇ ಈ ಎಲಾ ಮಾತು, ವಾದ ವಿವಾದಗಳನ್ನು ಕೇಳಿದೆಯಷ್ಟೇ... ಕಾರ್ಯಕ್ಷಮತೆ, ಸಾಮರ್ಥ್ಯ ಹೆಚ್ಚಿಸಲು ಸೆಕ್ಸ್‌ಅನ್ನು ಉಚಿತವಾಗಿ ಕೊಡಹೋದರೆ ಕ್ರಿಕೆಟಿಗರ ದೇಹಕ್ಷಮತೆ ಎಲಿಗೆ ತಲುಪುತ್ತದೆ ಎಂಬ ಚಿಂತನ ಇಲದ ಕೋಚ್‌ನ ತಲೆಯ್ಲಲಿ ಬಾಲ್ ಒಳಗಿರುವಂತೆ ಗಾಳಿ ಮಾತ್ರ ಇದೆಯೇನೋ ಎಂದು ನಿನಗೆ ಅನ್ನಿಸುವುದ್ಲಿಲವೇ? ವಿವಾಹಿತರಾದರೆ, ಅದರ್‍ಲಲೂ ಏಕಪತ್ನಿ ವ್ರತ ಹೊತ್ತ ಕ್ರಿಕೆಟಿಗನಾದರೆ ಆಕೆಯ ಸಮೇತ ಗ್ಯಾರಿ ಸಲಹೆಯಂತೆ ಪಂದ್ಯಕ್ಕೆ ಪ್ರವಾಸ ಹೊರಟು ಪ್ರಸವಕ್ಕೆ ಸಿದ್ಧತೆ ಮಾಡಬಹುದು. ಆದರೆ ಅವಿವಾಹಿತ ಹಾಟ್ ಬಾಯ್ಸ್ ಇರುವ ತಂಡ ಇದು. ಅವರ ಕಥೆ ಏನು. ಯಾರನ್ನಾದರೂ ಬಳಸಿಕೊಳ್ಳಲು ಪ್ರೇರೇಪಿಸಿದಂತಾಗುವುದ್ಲಿಲವೇ? ಅಡ್ಡದಾರಿ ಹಿಡಿಯಲು (ಸರಿ ದಾರಿಯ್ಲಲಿ ಇನ್ನೂಉಳಿದವರು ಇದರೆ..) ಅವಕಾಶ ನೀಡಿದಂತಾಗುವುದ್ಲಿಲವೇ? ಸರ್ಕಾರದ ಭತ್ಯೆಯ್ಲಲಿ ಸೆಕ್ಸ್ ಭತ್ಯೆ ಎಂದು ಕೊಡಬೇಕಾಗುವುಸದ್ಲಿಲವೇ? ಇದು ಜಾರಿಯಾದರೆ ನಮ್ಮ ಸರ್ಕಾರಿ ನೌಕರರು ಈ ಭತ್ಯೆಗೆ ಹೆಚ್ಚಿನ ಹೋರಾಟ ಮಾಡಲಾರರೇ? ಇದ್ಲೆಲವೂಜಾರಿಯಾದರೆ ವಿದ್ಯಾರ್ಥಿಗಳೂ ಸುಮ್ಮನಿರುತ್ತಾರೆಯೇ ಅವರೂ ಸೆಕ್ಸ್ ಸ್ಕಾಲರ್‌ಶಿಪ್ ಬೇಕು ಅಂತ ಕೋರಿಕೆ ಮುಂದಿಡಲಾರರೇ....

ಬೇತಾಳನ ಪ್ರಶ್ನೆ ಇನ್ನೂ ಮುಂದುವರಿಯುತ್ತಿತ್ತೇನೊ... ಕಾಮೆಂಟರಿ ಜೋರಾಗಿ ಸಾಗಿದಾಗ ಕರೆಂಟ್ ಹೋದಂತೆ.... 'ಬಾಯಿ ಮುಚ್ಚು' ರಾಜ ಬೇತಾಳನತ್ತ ತಿರುಗಿ ತನ್ನ ಲೇಸರ್ ಖಡ್ಗವನ್ನು ಝಳಪಿಸಿದ.

ಬೇತಾಳನೇ ಪ್ರತಿಯೊಬ್ಬರಿಗೂ ಸ್ವಂತ ವಿವೇಕ, ವಿವೇಚನೆ ಅಂತ ಇದೆ. ಬಾವಿಗೆ ಹಾರು, ಬೆಂಕಿಯನ್ನು ದಾಟು, ಹಾವಿನ ಬಾಯಿಗೆ ಕೈ ಹಾಕು ಎಂದರೆ ಯಾರಾದರೂ ಮಾಡುತ್ತಾರೆಯೇ... ಇದು ಕೂಡ ಹಾಗೆಯೇ ಅನೈತಿಕತೆಯನ್ನು ಭಾರತೀಯರು ಸಹಿಸಲಾರರು. ಅಂತಹ ಪ್ರಯತ್ನಗಳನ್ನು ತೆರೆಮರೆಯ್ಲಲಿ ಮಾಡಬಹುದಾದರೂಪ್ರಕಟವಾಗಿ ಮಾಡುವ ಧೈರ್ಯ ಇನ್ನೂ ನಮ್ಮ್ಲಲಿ ಇಲ.. ರಾಜನ ಮೌನ ಭಂಗವಾಗುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಮರವನ್ನು ಸೇರಿತು.

Thursday, September 17, 2009

ಯಸ್ ಯುವರ್ ಆನರ್!!

ಬೇತಾಳ ಒಂದು ಕ್ಷಣ ಬೆಚ್ಚಿತು. ಅದು ನಿಜವೇ... ಅಥವಾ... ಇದರ್‍ಲಲೂ ರಾಜಕೀಯ ಅಡಗಿರಬಹುದೇ...? ಆರೋಪ ಮಾಡಿದವರೂ ಕಾನೂನು ತಜ್ಞರೇ ಅಲವೇ....

ಪತ್ರಿಕೆಗಳು, ದೃಶ್ಯಮಾಧ್ಯಮಗಳ್ಲಲಿ ಅದೇ ಬ್ರೀಕಿಂಗ್ ನ್ಯೂಸ್, ಫ್ಲಾಷ್ ಎಲಾ.... ಕಾಲನ್ನು ಚಕ್ಕಳ ಮಕ್ಕಳ ಹಾಕಿ ಕುಳಿತು ಟಿವಿ ಚಾನೆಲ್‌ಗಳ್ಲಲಿ ಬರುತ್ತ್ದಿದ ಅವಲೋಕನವನ್ನು ವೀಕ್ಷಿಸಿತು. ಅಲೇ ಹರಡಿ ಹಾಕಿ ಪತ್ರಿಕೆಗಳನ್ನೂ ಓದಿತು. ಚೀಫ್ ಜಸ್ಟೀಸ್‌ವೊಬ್ಬರ ಮೇಲೆ ಭ್ರಷ್ಟಾಚಾರ ಆರೋಪ ಆರೋಪ.. ಬೇತಾಳನ ಮೈಯ್ಲೆಲಾ ಬೆವರಿತು. ಹರಹರಾ ಶ್ರೀ ಚೆನ್ನಸೋಮೇಶ್ವರಾ... ಎಂದು ಅರಿವ್ಲಿಲದೆ ಮನ ಆರ್ತನಾದಮಾಡಿತು.

ಹೆತ್ತ ತಾಯಿಯೇ ಮಗನ ಹತ್ಯೆ ಮಾಡಿದರೆ... ಬೇಲಿಯೇ ಹೊಲ ಮೇದರೆ... ಕಾಯುವನೇ ತಲೆ ತರಿದರೆ... ನಿಂತ ನೆಲವೇ ಬಾಯಿ ತೆರೆದು ನುಂಗಿದರೆ.... ಶಿವಕ್ಲೊಲಲು ಕಾಯುವ ಪರಮಾತ್ಮ ಯಾರು... ಎಂದೆನಿಸಿತು.

ಎಲ್ಲೆಲೂ ಭ್ರಷ್ಟಾಚಾರ. ಲಂಚ ರುಷುವತ್ತು. ಹಣ ಇಲದವ ಹೆಣಕ್ಕೆ ಸಮ ಎಂಬಂತಹ ಸ್ಥಿತಿ ಈ ಭೂಮಿ ಮೇಲಿದೆ..... ಅಷ್ಟಿಷ್ಟು ನಂಬಿಕೆಯ ಪೀಠ ಎಂದರೆ ನ್ಯಾಯಸ್ಥಾನಗಳಾಗ್ದಿದುವು. ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ನ್ಯಾಯ ದೇವತೆಯ ಕಯ್ಯ್ಲಲಿರುವ ತಕ್ಕಡಿ ಏರುಪೇರಾಗದು ಎಂದು ಬೇತಾಳ ಭಾವಿಸಿತ್ತು ಆದರೆ ಎಲವೂ ತಾನು ಭಾವಿಸಿದಂತ್ಲಿಲ ಎಂದು ಅನ್ನಿಸ ತೊಡಗಿತು.

ಸ್ಮಶಾನದ ಮೂಲೆಯ್ಲಲೇನೋ ಸ್ದದು ಬೇತಾಳ ಅತ್ತ ತಿರುಗಿತು. ವಿಕ್ರಮಾದಿತ್ಯ ಅದಾಗಲೇ ತನ್ನ ಕಾಯಕ ಆರಂಭಿಸ್ದಿದನು. ಶವ ಹೊತ್ತು ಬೇತಾಳಕ್ಕೆ ಬೆನ್ನು ಹಾಕಿ ನಡೆಯತೊಡಗ್ದಿದನು. ಈ ಜಗದ್ಲಲಿ ಕಲಿಯುಗದ ಕಾಲದ್ಲಲಿ ಬದಲಾಗದ ಭೂಪ ಇದರೆ ಈತ ಮಾತ್ರ. ಶವ ಹೊರಲು, ಹೆಣಕ್ಕೆ ಸಂಸ್ಕಾರ ಮಾಡಲು ಕೂಡ ಕರ್ಚೀಫಿನ ಕೆಳಗೆ ಕೈ ಒಡ್ಡಿ ಸಂಬಳದ ಹೊರಗೆ ಗಿಂಬಳವನ್ನೂ ಪಡೆಯುವ ಕಾಲದ್ಲಲಿ ಈತ ಮಾತ್ರ ಕಾಯಕವೇ ಕೈಲಾಸ ಎಂಬಂತೆ ಸಾಗುತ್ತ್ದಿದಾನ್ಲಲಾ ಏನಿದರ ಮರ್ಮ... ಬೇತಾಳನಿಗೆ ಸುಮ್ಮನಿರಲಾಗಲ್ಲಿಲ. ರಾಜನ ಮೌನಭಂಗ ಮಾಡುವ ತನ್ನ ಹಠ ಬಿಡಲ್ಲಿಲ.... ಶವದೊಳಗೆ ಸೇರಿತು. ಮಾತನಾಡ ತೊಡಗಿತು. ತನ್ನ ಲ್ಯಾಪ್‌ಟಾಪ್ ಕಂಪ್ಯೂಟರ್‌ನ್ಲಲಿ ಜೋಡಿಸಿಕೊಂಡ್ದಿದ ಮಾಹಿತಿಯನ್ನು ರಾಜನ ಮುಂದೆ ಹೇಳ ತೊಡಗಿತು.

ಅರಸನೇ ಇದೇನಿದು, ನ್ಯಾಯಾಧಿಪನೇ ಕಾಂಚಾಣದ ಆಸೆಗೆ ಬ್ದಿದಿರುವನೆಂದು ನ್ಯಾಯವಾದಿಗಳೇ ಆರೋಪಿಸಿರುವರ್‍ಲಲಾ...

ಆರ್ಯಾವರ್ತವೆಂಬ ಈ ಭರತ ಭೂಮಿಯ್ಲಲಿ ಪ್ರಜಾಸತ್ತೆಯ್ಲಲಿ ಬಡ ಜನರಿಗೆ ಕಾನೂನು ಕೈ ಅಳತೆಯ್ಲಲಿ ಸಿಗಬೇಕೆಂಬ ಆಶಯದೊಂದಿಗೆ ನ್ಯಾಯ ಪೀಠ ಜನರ ಬಳಿಗೆ ಸರಿಯಿತು. `ನ್ಯಾಯ ದಾನ ವಿಳಂಬವಾದರೆ, ನ್ಯಾಯದಾನ ನಿರಾಕರಿಸಿದಂತೆ' ಎಂಬ ನೀತಿಯಂತೆ ತ್ವರಿತ ನ್ಯಾಯಾಲಯಗಳ ಸ್ಥಾಪನೆಯಾಯಿತು. ಬಡವರಿಗೆ ಕಾನೂನು ಹೋರಾಟಕ್ಕೆ ನೆರವಾಗಲು ಲೋಕ ಅದಾಲತ್‌ಗಳು ಚಾಲನೆಗೊಂಡವು, ಬಡ ಜನರಿಗೆ ಸ್ವಂತ ವಕೀಲರನ್ನಿರಿಸಲು ಅಸಾಧ್ಯ ಎಂಬ ಕಾರಣಕ್ಕೆ ಸರ್ಕಾರವೇ ತನ್ನ ಖರ್ಚಿನ್ಲಲಿ ಬಡವರ ಪ್ರಕರಣಗಳ್ಲಲಿ ವಕೀಲರನ್ನು ನೇಮಿಸುವ ಪದ್ಧತಿಯೂ ಬಂತು.... ಇವುಗಳ್ಲೆಲಾ ಹಣ ಇಲ ಎಂಬ ಕಾರಣಕ್ಕಾಗಿ ಯಾರಿಗೂ ನ್ಯಾಯ ನಿರಾಕರಣೆ ಯಾಗಬಾರದು ಎಂಬ ಸದ್ದುದೇಶದ ಕ್ರಮಗಳಾಗ್ದಿದುವು.

ಆದರೆ ನ್ಯಾಯಮೂರ್ತಿಯೊಬ್ಬರ ಸುತ್ತ ಹರಡಿರುವ ಆರೋಪ... ಹೊಸ ರಿವಾಜುಗಳಿಗೆ ಎಡೆ ಮಾಡಿಕೊಡುವಂತಿದೆ. ಈಗ ಬಡವರಿಗೆ ನ್ಯಾಯ-ಸರಿಯಾದ ತೀರ್ಪುಒದಗಿಸಲು ಸರ್ಕಾರವೇ ಅವರ ಪರವಾಗಿ ನ್ಯಾಯಾಧೀಶರಿಗೆ ಅಗತ್ಯ `ಲಂಚ `(?!)ನೀಡಬೇಕೆ ಎಂಬ ಕುಚೋದ್ಯಕ್ಕೆ ಎಡೆ ಮಾಡಿದೆಯ್ಲಲಾ ಎಂದು ಪ್ರಶ್ನಿಸಿತು.

ರಾಜನೇ ನ್ಯಾಯಾಧಿಪನ ಸುತ್ತ ಹೆಣೆದ ಆರೋಪ ನಿಜವೇ? ಆ ನ್ಯಾಯಮೂರ್ತಿಯ ವಶದ್ಲಲಿ ಐದು ನೂರಕ್ಕೂ ಅಧಿಕ ಎಕರೆ ಅಕ್ರಮ ಜಮೀನು, ಲೆಕ್ಕ ಮೀರಿದ ಸಂಪತ್ತು ಇದೆ ಎಂಬ ಆರೋಪದ್ಲಲಿ ಹುರುಳಿರಬಹುದೇ?

ಬೇತಾಳನೇ... ಚಲನ ಚಿತ್ರಗಳ್ಲ್ಲಲ್ಲೆಲ ನೀನು ಇಂತಹ ದೃಶ್ಯಗಳನ್ನು ಗಮನಿಸಿರಬಹುದು. ಖಳನಾಯಕರು ಹೇಗೆUಹೇಗೋ ತನ್ನ ಬೆಂಬಲಿಗರಿಗೆ ಜಾಮೀನು, ನಿರೀಕ್ಷಣಾ ಜಾಮೀನು, ಪೆರೋಲ್ ಪಡೆದರೆ... ಎದುರು ಕಕ್ಷಿಗಳಿಗೆ ಗ್ಲಲು ಇತ್ಯಾದಿ ಕೃತ್ಯಗಳನ್ನು ರಕ್ತ ಸಿಕ್ತ ಅಧ್ಯಾಯದ ಮೂಲಕ ನಿರ್ವಹಿಸುವುದು ನೋಡಿರುವೆಯಷ್ಟೇ... ಬದುಕು ಕೂಡ ಒಂದು ನಾಟಕ (ಜಗವೊಂದು ನಾಟಕವು ನಿನದೊಂದು ಪಾತ್ರ, ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಳದಿ ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ, ಆಟಕ್ಕೆ ಕಥೆ ಇಲ ಮೊದಲ್ಲಿಲ, ಕಡೆ ಇಲ ನೋಡಕರೆ ಆಟಕರು- ಮಂಕುತಿಮ್ಮ) ಎಂದು ಡಿವಿಜಿಯಂತಹ ಬ್ಲಲವರು ಎಂದೋ ಹೇಳಿ ಹೋಗ್ದಿದಾರೆ....

ನ್ಯಾಯಾಧೀಶರೂ ಮನುಷ್ಯರೇ ಅಲವೇ? ಅವರಿಗೂ ಮಕ್ಕಳು ಮರಿ ಅವರ ಹಿತಚಿಂತನೆ ಇದೇ ಇರುತ್ತದೆ. ಎಲಾ ವ್ಯವಸ್ಥೆಯ್ಲಲೂ ಭ್ರಷ್ಟಾಚಾರ ತಾಂಡವವಾಡುತ್ತಿರುವಾಗ ನ್ಯಾಯಾಂಗಮಾತ್ರ ಕಾಂಚಾಣ ಬಂದಾಗ ಕಣ್ಮುಚ್ಚಿರಲು ಸಾಧ್ಯವೇ? ಅಷ್ಟಕ್ಕೂ ನ್ಯಾಯಾಧೀಶರನ್ನು ನೇಮಕ ಮಾಡುವವರು ಯಾರು. ಆಗ್ಲೆಲಾ ತೆರೆಮರೆಯ ಕಸರತ್ತು ನಡೆಸುವವರು ಯಾರು. ಯಾರು ನ್ಯಾಯಾಧೀಶರಾದರೆ ಆಡಳಿತಾಧಿಕಾರಿಗಳು ಲೆಕ್ಕ ಹಾಕಿಯೇ ಹಾಕುತ್ತಾರೆ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಬೇರೆಬೇರೆ ಎಂದು ಸಂವಿಧಾನ ಹೇಳ್ದಿದರೂ ಇಂದು ಅದ್ಲೆಲಾ ಕಲಸು ಮೇಲೋಗರ ಆಗುತ್ತಿದೆ. ಆದರೆ ಎಲವೂ ತೆರೆಮರೆಯ್ಲಲಿ ಅಷ್ಟೇ...

ನ್ಯಾಯಾಧೀಶರ ನೇಮಕ, ರಾಜ್ಯಪಾಲ,ರಾಷ್ಟ್ರಪತಿ ನೇಮಕ ಇತ್ಯಾದಿಗಳ ಹಿಂದೆ ಮೇಲ್ನೋಟಕ್ಕೆ ಸಾಚಾ ಕಂಡರೂರಾಜಕೀಯದ ನೆರಳು ಇದೇ ಇದೆ. ರಾಜಕೀಯ ಇದರೆ ಅಲಿ ಹಣಕಾಸಿನ ವ್ಯವಹಾರ ಇದೇ ಇರುತ್ತದೆ ಅನ್ನುವುದು ಬ್ಲಲವರ ಮಾತು. ಬಂಗಾಳ, ನೋಯ್ಡಾ ಮುಂತಾದೆಡೆ ಈಗಾಗಲೇ ನ್ಯಾಧೀಶರು ಇಂತಹ ಬಲೆಯ ಸುಳಿಯ್ಲಲಿ `ಕಾಣೆ'ಯಾಗ್ದಿದಾರೆ. ಇತ್ತೀಚೆಗಂತೂ `ಆಸ್ತಿ ಬಹಿರಂಗ' ಎಂಬ ನಾಟಕಗಳೂ ರಂಗೇರುತ್ತಿವೆಯ್ಲಲಾ. ಲೆಕ್ಕಪರಿಶೋಧಕರೆಂಬ ನಕ್ಷತ್ರಿಕರು ಕೈಯೊಳಗ್ದಿದರೆ ಹಿಮಾಲಯದಂತಹ ಸಂಪತ್ತ್ದಿದರೂ ಮೋಟು ದಿಬ್ಬ ಎಂದು ಸಣ್ಣದಾಗಿ ತೋರಿಸುವ ಜಾಣರು ಇರುತ್ತಾರೆ...

ರಾಜ್ಯಪಾಲ, ರಾಷ್ಟ್ರಪತಿ ಇತ್ಯಾದಿ ನಿವೃತ್ತ ರಾಜಕಾರಣಿಗಳು, ಪರೋಕ್ಷ ರಾಜಕಾರಣಿಗಳು, ಇತರ ಕ್ಷೇತ್ರದ್ಲಲಿ ಆಡಳಿತಾಧಿಕಾರಿಗಳಿಗೆ ನಿಕಟವಾಗಿರುವವರಿಗೆ ದಕ್ಕುತ್ತ್ದಿದ ಹ್ದುದೆಗಳು. ಆದರೂ ಹಿಂದ್ಲೆಲಾ ಅದಕ್ಕೆ ಒಂಧು ರೀತಿಯ ನೀತಿಯ ಚೌಕಟ್ಟು ಇತ್ತು. ಇಂದು ರಾಜ್ಯ ಪಾಲರಾದವರು ಮತ್ತೆ ರಾಜಕಾರಣಿಯ ಪೋಷಾಕು ತೊಡುತ್ತಾರೆ ಎಂದಾದರೆ ಯಾ ಸ್ಥಾನವೂ ಭದ್ರವಾಗಿದೆ, ಭಷ್ಟಾಚಾರ ರಹಿತವಾಗಿದೆ ಎಂದು ಭಾವಿಸಬೇಕ್ಲಿಲ.

ಹಾಗೆಂದು ಈಗ ನೀನು ಹೇಳಿರುವ ನ್ಯಾಯಾಧಿಪನ ಮೇಲಿನ ಆರೋಪ ಸತ್ಯವಾಗಿರಬೇಕ್ಲಿಲ. ಮೇಲಿನ ನ್ಯಾಯಾಲಯಕ್ಕೆ ಬಡ್ತಿಯಾಗಿರುವ ನ್ಯಾಯಾಧಿಪನ ಉನ್ನತಿಯ ಮೇಲೆ ಅಸೂಯೆಗೊಂಡವರ ಸಂಚು ಇದೆ ಎಂಬ ಹ್ಲುಲುಕಡ್ಡಿಯ ಆಶ್ರಯವನ್ನು ಬೇಕಾದರೆ ಮುಳುಗುವ ಮೊದಲು ಗಟ್ಟಿ ಹಿಡಿಯಬಹದು.

ರಾಜನು ಮಾತು ಮುಗಿಸುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಮರದ ಕೊಂಬೆ ಸೇರಿತು.

Friday, September 11, 2009

ಪ್ರಕಾಶ್ ರೈ ಹೊಗಳಲು ನಮಗೆ ಮುಖ ಉಂಟೆ?

ವದೊಳಗ್ದಿದ ಬೇತಾಳಕ್ಕೆ ತಲೆ ಗಿರ್ ಅಂದಿತು...

ನ್ನಡದ ಪರಿತ್ಯಕ್ತ ಪುತ್ರನಂತ್ದಿದ ಪ್ರಕಾಶ ರೈ ಎಂಬ ಪ್ರತಿಭಾವಂತ ನಟ ಅದ್ಲೆಲ್ಲೆಲೊ ಹೋಗಿ, ಯಾವ್ಯಾವುದೊ ಭಾಷೆಗಳ್ಲಲಿ ಅವಕಾಶ ಗಿಟ್ಟಿಸಿಕೊಂಡು, ಬಳಿಕ ಅಲೇ ತನ್ನ ನಿರ್ಮಾಣಸಂಸ್ಥೆಯನ್ನೂ ಆರಂಭಿಸಿ, ತನ್ನ ಸಾಧನೆಯಿಂದ ಕಲೆಯ ಮೇರು ಹಂತಕ್ಕೇರಿದರೆ ಅದನ್ನು ಹೊಗಳುವ ಅರ್ಹತೆ ಕನ್ನಡಿಗರು ಇನ್ನೂ ಉಳಿಸಿಕೊಂಡ್ದಿದಾರೆಯೇ..
ಈ ಜನ ಹೇಗೆ ಬೇಕಾದರೂಬದಲಾಗುತ್ತಾರೆ. ವ್ಯಕ್ತಿಯೊಬ್ಬನನ್ನು ನಿರ್ಲಕ್ಷ್ಯಿಸಿ ಕಾಲ-ಕಸ ಮಾಡುವವರೂ ಅವರೇ, ಆತ ಫೀನಿಕ್ಸ್‌ನಂತೆ ಮತ್ತೆ ಮೇಲ್ದೆದು ಬಂದರೆ ’ತಾವೇ ಬೆಳೆಸಿದವರು ’ ಅನ್ನುವಂತೆ ಪೋಸ್ ಕೊಡುವವರೂಅವರೇ!
ಬೇತಾಳಕ್ಕೆ ರೋಸಿ ಹೋಗಿತ್ತು. ಆ ದಿನದ ಸ್ದುದಿಯನ್ನ್ಲೆಲಾ ಹೀರಿಕೊಂಡ್ದಿದ ತನ್ನ ಲ್ಯಾಪ್‌ಟಾಪ್ ಕಂಪ್ಯೂಟರ್‌ನ್ನು ಬಿಡಿಸಿ ಕುಳಿತು ನೋಡಿತು.. ಸಿನಿಮಾ ಪ್ರಶಸ್ತಿಯದೇ ಸ್ದುದಿ. ಪ್ರಕಾಶ್ ರಾಜ್ ಆಗಿ ಬದಲಾದ ತುಳು-ಕನ್ನಡಿಗ ಪ್ರಕಾಶ್ ರೈಗೆ ಶ್ರೇಷ್ಠ ನಟ ಪ್ರಶಸ್ತಿ ಬಂದಿತ್ತು. ಎಲ್ಲೆಲೂ ರೈ ಗುಣಗಾನ. ಚಾನೆಲ್‌ಗಳಂತೂ ಒಲದ ಮಗನ ಬೆನ್ನು ತಟ್ಟುವಂತೆ ಪ್ರವರ ಒಪ್ಪಿಸಿದುವು.....
ಆಂ? ಅಷ್ಟರ್‍ಲಲಾಗಲೇ ವಿಕ್ರಮಾದಿತ್ಯ ಶವವನ್ನು ಮರದಿಂದ ಇಳಿಸಿ ಎಂದಿನಂತೆ ತನ್ನ ಹಾದಿ ತುಳಿಯತೊಡಗ್ದಿದ... ಚಕ್ಕನೆ ಜಾಗೃತವಾದ ಬೇತಾಳ, ರಾಜನ ‘ತಲೆ ಕೊರೆಯಲು’ ಇಂದು ಇದೇ ವಿಷಯ ಸಾಕು ಎಂದು ಯೋಚಿಸಿ, ಶವದೊಳಗಿಂದ ಅಶರೀರವಾಣಿ ಆರಂಭಿಸಿತು.
ರಾಜನೇ , ಇದು ವರೆಗೆ, ಅಂದರೆ ಪ್ರಶಸ್ತಿ ಬರುವ ಹಿಂದಿನ ದಿನದ ವರೆಗೂ ಕನ್ನಡಿಗರು, ಮಾಧ್ಯಮಗಳ ಜಾಣ ಮರೆವಿಗೆ ಕಾರಣ ರಾದ ಪ್ರಕಾಶ್ ರೈ ಅವರನ್ನು ಮತ್ತೆ ಹೊನ್ನಶೂಲಕ್ಕೆ ಏರಿಸತೊಡಗ್ದಿದಾರೆ.... ಹೇಗೂ ಖಳನಾಯಕನಾಗಿ ಅನುಭವ ಇದ ಪ್ರಕಾಶ್ ರೈಯ ತುಟಿ ಅಂಚಿನ್ಲಲಿ ವ್ಯಂಗ್ಯದ ನಗು ಇತ್ತೇ...!
೨೦೦೮ರ್‍ಲಲಿ ಒಂದೇ ವರ್ಷ ಆರೆಂಟು ಸಿನಿಮಾ ಮಾಡ್ದಿದ ಪ್ರಕಾಶ್ ಬಗ್ಗೆ , ಕಾಂಜೀವರಂ’ ಬಗ್ಗೆ ಪ್ರಶ್ಸತಿಗೂ ಮುನ್ನ ಒಂದಕ್ಷರವನ್ನೂ ಬರೆಯದ ಕನ್ನಡ ಜನತೆ ಪ್ರಶಸ್ತಿಯ ಮರುದಿನ ‘ಇವ ನಮ್ಮವ ’ ಎಂದು ಹೊರುವುದೇಕೆ. ಪ್ರಕಾಶ್‌ರೈಗಂತೂ ಇದರ ಅಗತ್ಯ ಇರಲ್ಲಿಲ.
ಕನ್ನಡದ ಸ್ಕ್ರಾಲ್ ನ್ಯೂಸ್‌ಗಳ್ಲಲೂ ಕಾಣಿಸಿಕೊಳ್ಳದ್ದಿದ, ಬ್ಲೊ ಅಪ್ ಗಳ ವ್ಯಾಪ್ತಿಯಿಂದಲೂ ಹೊರಗ್ದಿದ, ಕನ್ನಡಿಗರ ನೆನಪಿನಂಗಳದಿಂದಾಚೆ ತನ್ನ ಹೆಸರನ್ನೇ ಬದಲಿಸಿ ಕೊಂಡು ಹೊಸ ಗೂಡುಕಟ್ಟ್ದಿದ ಪ್ರಕಾಶ್‌ರಾಜ್ ರಾತ್ರಿ ಬೆಳಗಾಗುವುದರೊಳಗಾಗಿ ಮತ್ತೆ ‘ಕನ್ನಡಿಗ’ನಾದ ‘ಕನ್ನಡ ಪವಾಡ’ ಬೇತಾಳಕ್ಕೆ ರೇಜಿಗೆ ಉಂಟುಮಾಡಿತ್ತು.
ನಾಗಮಂಡಲದ ಬಳಿಕ..
ಬೇತಾಳಕ್ಕೆ ಅರ್ಥವಾಗದ ಪ್ರಶ್ನೆ ಅದು... ಪ್ರಕಾಶ್ ರೈ ಕನ್ನಡ ಬಿಟ್ಟು ಇತರ ಭಾಷೆಗೆ ಹೋಗಬೇಕಿತ್ತಾ...
’ನಾಗಮಂಡಲ’ ಎಂಬ ಅಸಂಗತ ಕಥಾನಕವನ್ನು ನಟಿ ವಿಜಯಲಕ್ಷ್ಮಿ ಜೊತೆ ಕನ್ನಡಿಗರು ಮೆಚ್ಚುವಂತೆಮನೋಜ್ಞವಾಗಿ ನಟಿಸಿ ನೀಡಿದ ಪ್ರಕಾಶ್ ರೈಯನ್ನು ಅಂದು ಅಭಿನಂದಿಸಲು ಕನ್ನಡದ್ಲಲಿ ಶಬ್ದ ಇರಲ್ಲಿಲವೇ? ಹಾಗೆ ಹೊಗಳಿ ಗಾಂಧಿನಗರದ ಜನರು ಒಂದಷ್ಟು ಅವಕಾಶ ನೀಡ್ದಿದರೆ ರೈ ಅವರು ರಾಜ್ ಆಗುತ್ತ್ದಿದರೆ? ಬೇತಾಳಕ್ಕೆ ಇದು ಅರ್ಥವಾಗದ ವಿಷಯವಾಗಿರಲ್ಲಿಲ.
‘ಬಿಸಿಲು ಕುದುರೆ’, ‘ಗುಡ್ಡದ ಭೂತ’ ಇತ್ಯಾದಿ ದೂರದರ್ಶನದ ಸಾಕ್ಷ್ಯ ಚಿತ್ರಗಳ ಮೂಲಕ ಕ್ಯಾಮೆರಾ ಮುಂದೆ ಬಂದ ಪ್ರಕಾಶ್ ರೈ ಮೂಲತಃರಂಗ ಕಲಾವಿದ ಈ ಕಾರಣದಿಂದಲೇ ಮುಖಾಭಿನಯ, ಭಾವಾಭಿನಯಗಳಿಗೆ ಹೇಳಿಮಾಡಿಸಿದಂತ್ದಿದರು. ಆದರೆ ಕನ್ನಡ ಮಂದಿಗೆ ಗಾಂಧಿನಗರದ ದೊರೆಗಳಿಗೆ ಅವರ್‍ಲಲಿನ ಕಲಾವಿದನನ್ನು ಗುರುತಿಸಿ ಬೆಳೆಸುವ ತಾಕತ್ತು ಇರಲ್ಲಿಲ... ಬೇತಾಳಕ್ಕೆ ಹಾಗನ್ನಿಸ್ದಿದರಿಂದ ರಾಜನಿಗೆ ಹಾಗೆಯೇ ಹೇಳಿತು.
ಪ್ರಕಾಶ್ ರೈಗೆ ಖಳನಾಗಿಯೂ ನಾಯಕ ನಾಗಿಯೂ ನಟಿಸುವ ಪ್ರತಿಭೆ ಇತ್ತು. ಆದರೆ ಬೆಂಗಳೂರಿನ ಅದರ್‍ಲಲೂ ಗಾಂಧಿನಗರದ ಕೆಲವರು ಹೇಳ್ದಿದಷ್ಟೇ ಕನ್ನಡ, ಅವರು ಹೇಳಿದವರು ಮಾತ್ರ ಪ್ರತಿಭಾವಂತರು, ನಾಯಕರು, ಗ್ಲೆಲುವವರ ಅನ್ನುವ ಧೋರಣೆಯ ವಿರುದ್ಧ ರೈಯ್ಲಲಿನ ‘ಹೀರೊ’ ರಾಜಿಮಾಡಿಕೊಳ್ಳಲ್ಲಿಲ. ಅವರ್‍ಲಲ್ದಿದ ‘ಖಳನಾಯಕ’ ಜ್ದಿದಿಗೆ ಹೋರಾಟಕ್ಕೆ ನ್ಲಿಲಲ್ಲಿಲ. ಬೇರೆ ಭಾಷೆಗಳತ್ತ ಮುಖಮಾಡಿದರು. ಆ ನೋವು ಅವರನ್ನು ಸದಾ ಕಾಡುತ್ತಿತ್ತು... ಬೇತಾಳಕ್ಕೆ ಆ ಸತ್ಯ ಗೊತ್ತಿತ್ತು.
ಅದ್ಲಿಲವಾದರೆ ವಜ್ರಮುನಿ ಎಂಬ ಆ ಗಾಂಭೀರ್ಯ, ಜೀವಕಳೆ ಹೊತ್ತ ಖಳನಾಯಕ ಪಟ್ಟ ಇಂದು ಖಾಲಿ ಬ್ದಿದಿರುತ್ತಿರಲ್ಲಿಲ. ಅದನ್ನು ಮುಂದುವರಿಸುವ ತಾಕತ್ತು ರೈ ಅವರಿಗಿತ್ತು. ಕೋಟು, ಗಿರ್ಜಾ ಮೀಸೆ, ಗಿರಿಕ್ ಮೆಟ್ಟು, ಕಿವಿ ಗಡಚಿಕ್ಕುವ ಮ್ಯೂಸಿಕ್ ಇದು ಡೈಲಾಗ್ ಹೇಳಿದರೆ, ಡಿಶುಂಡಿಶುಂ ಗುಂಡು ಹಾರಿಸಿದರೆ ಖಳನಾಗುವುದ್ಲಿಲ. ಅದಕ್ಕೆ ಭಾಷೆಯನ್ನು ಹೊರಳಿಸುವ, ಕಣ್ಣು ಮುಖದ್ಲಲಿ ಭಾವ ತುಂಬಿ ತುಳುಕುವ ಅಭಿನಯದ ಗತ್ತು ಬೇಕು, ಅನುಭಾವದ ಹೂರಣ ಇರಬೇಕು..... ಬೇತಾಳ ಒಂದು ಕ್ಷಣಮೌನವಾಗಿ ಮಾತು ಮುಂದುವರಿಸಿತು.
ಇದೇ ಕಾರಣಕ್ಕೆ ಯಾವ ಸಂದರ್ಶನದ್ಲಲೂ ಪ್ರಕಾಶ್ ’ತಾನು ಕನ್ನಡದ ಹುಡುಗ ಅನ್ನಲ್ಲಿಲ. ತಮಿಳು, ತೆಲುಗು, ಮಲೆಯಾಳಂ, ಕನ್ನಡ ನನ್ನನ್ನು ಬೆಳೆಸಿತು’ ಅಂದರು. ಬೇತಾಳಕ್ಕೆ ಭೇಷ್ ಅನ್ನದಿರಲಾಗಲ್ಲಿಲ.
ಕನ್ನಡಿಗರು ಅಂದು ಮನಸ್ಸು ಮಾಡ್ದಿದರೆ ‘ ತಮಿಳು ಚಿತ್ರ’ (ಕಾಂಜೀವರಂ)ಕ್ಕೆ ಬಂದ ಪುರಸ್ಕಾರವನ್ನು ಕನ್ನಡಕ್ಕೇ ಬಂತು ಎಂಬ ಬಳಸುದಾರಿ ಬೇಕಿರಲ್ಲಿಲ. ಇಲೇ ಇದು ಪ್ರಶಸ್ತಿ ಬಾಚಿಕೊಳ್ಳುವ ತಾಕತ್ತು ರೈ ಅವರ್‍ಲಲಿನ ನಟನಿಗೆ ಇತ್ತು. ಈಗ ವರರ ತಮಿಳು ಚಿತ್ರಕ್ಕೆ ಪ್ರಶಸ್ತಿ ಬಂದಾಗ ತೆಲುಗು, ಮಲೆಯಾಳಂ, ತಮಿಳರು ಪ್ರಕಾಶ್ ರಾಜ್ ಅನ್ನು ಕೊಂಡಾಡಬಹುದು. ಆದರೆ ತಾವೇ ಸಂಚು ಹೂಡಿ ಮರೆತ ಪ್ರಕಾಶ್ ರೈ ಅವರನ್ನು ಗುಣಗಾನ ಮಾಡಲು ಕನ್ನಡಿಗರಿಗೆ ಮುಖ ಇದೆಯಾ...?
ರಾಜನೇ ಈ ಪ್ರಶ್ನೆಗೆ ಉತ್ತರ ಗೊತ್ತ್ದಿದರೂ ಹೇಳದ್ದಿದರೆ ನಿನ್ನ ತಲೆ ಉದಿನ ಹಪ್ಪಳದಂತೆ ಪಿಪ್ಪುಚೂರಾಗುತ್ತದೆ...
ರಾಜ ಮೌನ ಮುರಿದ... ಬೇತಾಳನೇ ಇದು ಕನ್ನಡಿಗರ ಮೂಲ ಭೂತ ಗುಣ. ಕನ್ನಡ ಎಂದರೆ ಕೆಲವು ಭಾಗದ ಜನರು ಮಾತ್ರ, ಕೆಲವು ಭಾಗದ ಕನ್ನಡ ಮಾತ್ರ ಶ್ರೇಷ್ಠ, ಎಲ್ಲೆಲೂ ಆ ಕನ್ನಡ ಬಳಸಿದರಷ್ಟೇ ಪುರಸ್ಕಾರ ನೀಡಬೇಕು ಎಂಬಿತ್ಯಾದಿ. ಇಲದ್ದಿದರೆ ಎಂತೆಂಥಾ ಅತಿರಥ ಮಹಾರಥರು ಮೆರೆದ ಕನ್ನಡ ರಜತ ಭೂಮಿಯ್ಲಲಿ ಇಂದು ‘ಹಳೆ ಪಾತ್ರೆ ... ಪೇಪರ್’ಗಳ ಕೊರಕಲು ರಾಗ, ಪ್ರೇತ ನೃತ್ಯ ಕಾಣುತ್ತಿತ್ತೇ...? ಬರಡು ಭೂಮಿಯ್ಲಲಿ ಬೆಳೆ, ಬಂಡೆಯ ಮೇಲೆ ಒರತೆ ಚಿಮ್ಮಿಸಲು ಸಾಧ್ಯವೇ... ಅದಾಗದು, ಆದರೆ ಸಿನಿಮಾ ಮಂದಿ ಪ್ರತಿಭೆ ಇಲದವರನ್ನೂ ಹೀರೋ ಮಾಡುತ್ತಾರೆ. ಪ್ರತಿಭಾವಂತರನ್ನು ನೆರೆಯ ಭಾಷೆಗಳಿಗೆ ದಾನ ನೀಡುತ್ತಾರೆ. ಹೆತ್ತಮ್ಮನಿಗೆ ಬೇಡದ ಆ ಪ್ರತಿಭೆಗಳು ಹೊತ್ತಮ್ಮನ ಮಡಿಲ್ಲಲಿ ಆಕಾಶ ಮಟ್ಟ ಬೆಳೆಯುತ್ತಾರೆ.... ಆಗ ಕನ್ನಡಿಗರೂ ಎಲರೊಂದಿಗೆ ‘ಗೋವಿಂದಾ’ ಅನ್ನುತ್ತಾರೆ... ಗುಂಪಿನ್ಲಲಿ ಮುಖ ಮರೆಸಬೇಕ್ಲಿಲ.... ಮೌನ ಭಂಗವಾಗುತ್ತ್ದಿದಂತೆಯೇ ಬೇತಾಳ ಮರದ ಕೊಂಬೆ ಸೇರಿತು.

Thursday, September 10, 2009

'ಲವ್ ಜಿಹಾದ್'

ವವನ್ನು ಹೆಗಲಿಗೇರಿಸಿ ಹೊರಟ್ದಿದ ವಿಕ್ರಮಾದಿತ್ಯನ ಮೌನ ಮುರಿಯುವ ಉದೇಶದಿಂದ ಬೇತಾಳ ಮಾತನಾಡ ತೊಡಗಿತು. ತನ್ನ ಲ್ಯಾಪ್‌ಟಾಪ್‌ನಿಂದ ಹೊಚ್ಚ ಹೊಸ ಸ್ದುದಿ ಆರಿಸಿ ವಿಕ್ರಮಾದಿತ್ಯನ ಮನಸ್ಸಿಗೆ ಸಂವಹನ ಮಾಡತೊಡಗಿತು....
ಮಲೆಯಾಳಂ ಟಿವಿ ಚಾನೆಲ್‌ನ್ಲಲಿ ಬಿತ್ತರವಾಗುತ್ತ್ದಿದ ಸ್ದುದಿ ಕೇಳಿ ಬೇತಾಳ ದಂಗು ಬಡಿದು ಕುಳಿತಿತು.
ಪ್ರೀತಿ ಪ್ರೇಮದ ಹಿಂದೆ ಧರ್ಮ ಪ್ರಚಾರ ಅಜೆಂಡಾ.... ಅದರ ಹೆಸರು `ಲವ್ ಜಿಹಾದ್'. ಇದರ ಪ್ರಯೋಗ ಶಾಲಾ ಕಾಲೇಜುಗಳ್ಲಲಿ...
ಧೂರ್ತ ತಂತ್ರ
ಶವದ್ಲಲಿ ಸೇರ್‍ದಿದರೂ ಬೇತಾಳನ ಮೈ ಕಂಪಿಸಿತು, ಸಣ್ಣಗೆ ಬೆವರಿತು. ಮಕ್ಕಳಿಗೆ ಪ್ರೀತಿ ಪೇಮದ ಸವಿ ಅದಿ ಧರ್ಮದ ಅಫೀಮು ನೀಡುವ ಧೂರ್ತ ತಂತ್ರ. ಪವಿತ್ರ ಖುರಾನ್ ಹೆಸರ್‍ಲಲಿ ಶಾಂತಿ ಸಾರುವ ಇಸ್ಲಾಂ ಧರ್ಮಕ್ಕೆ ಕ್ಯಾನ್ಸರ್‌ನಂತೆ ಅಂಟಿಕೊಂಡಿರುವ ಮೂಲಭೂತವಾದಿಗಳು ನಡೆಸುವ ತೆರೆಮರೆಯ ಕಸರತ್ತು ಇದು.
ಹಿಂದ್ಲೆಲಾ ಇಂತಹ ಆರೋಪ ಕ್ರೈಸ್ತ ಮಿಷನರಿಗಳ ಮೇಲಿತ್ತು. ಮತಾಂತರದ ಉದೇಶ ಸಾಧಿಸಲು ತಮ್ಮ ಗುರಿಸಾಧನೆಗಾಗಿ ಲವ್ ಎಂಬ ಅಮಲನ್ನು ಬಳಸುತ್ತ್ದಿದರು ಎಂಬ ಅಪವಾದ ಅವರ ಮೇಲು ಇತ್ತು. ಅದು ಸರಿಯೊ ತಪ್ಪೊ ಗೊತ್ತ್ಲಿಲ. ಆದರೆ ಯಾವ ನೈಜ ಕಿಶ್ಚನ್ನನೂ ಯಾವ ನೈಜ ಮುಸಲನ್ಮಾನನೂ ಈ ರೀತಿಯ್ಲಲಿ ತಮ್ಮ ಧರ್ಮವಿಸ್ತರಣೆಗೆ ಆಶಿಸಲಾರ... ಧರ್ಮ ಇಂದು ವ್ಯಾಪಾರದ ಸರಕಾಗುತ್ತಿರುವ ಬಗೆ ಕಂಡು ಬೇತಾಳ ಬೆರಗಾಯಿತು.
ಹಲವು ವಿದೇಶಿ ಶಕ್ತಿಗಳಿಗೆ ಧರ್ಮ ಒಂದು ವ್ಯಾಪಾರಿ ಸರಕು. ಅದರ ವಿಸ್ತರಣೆಗೆ ಬಂಡವಾಳ ಹೂಡುತ್ತಿವೆ. ವಿಸ್ತರಣೆಗೆ ಏಜೆಂಟರನ್ನು ನೇಮಿಸುತ್ತವೆ. ಈ ಏಜೆಂಟರಿಗೆ ಕೈ ತುಂಬ ಹಣ ನೀಡುತ್ತವೆ . ಅದಕ್ಕೆ ಪ್ರತಿಯಾಗಿ `ವರ್ಕ್‌ಟಾರ್ಗೆಟ್' ನೀಡುತ್ತವೆ. ಇಷ್ಟು ಸಮಯದ್ಲಲಿ ಇಷ್ಟು ಪ್ರಮಾಣದ ಗುರಿ ಸಾಧಿಸಬೇಕೆಂಬುದು ಇದರ ಉದೇಶ. ಈ ಉದೇಶಕ್ಕಾಗಿ ವ್ಯಾಪಾರಿ ಸಂಸ್ಥೆಗಳಂತೆ ಈ ಏಜೆಂಟರೂ ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಅದರ್‍ಲಲೊಂದು ಲವ್ ಜೆಹಾದ್! ಬೇತಾಳ ತಲೆ ತುರಿಸಿಕೊಂಡಿತು.... ವಿದ್ಯೆ ಕಲಿಯಲು ಬಂದವರ ವಿಧಿಯೇ...
ಲವ್ ಜೆಹಾದ್ ಹೇಗೆ...?
ಉಗ್ರಗಾಮಿಗಳೊಂದಿಗೆ ಗುರುತಿಸಲ್ಪಟ್ಟ ಚಾಕೊಲೆಟ್ ಯುವಕರು ಶಾಲಾ ಕಾಲೇಜುಗಳ್ಲಲಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಾರೆ. ಅರ್ಹತೆ ಇರಲಿ ಬಿಡಲಿ ಅವರಿಗಾಗಿ ಲಕ್ಷಾಂತರ ರೂಪಾಯಿ ಅಲಿ ಹೂಡಿಕೆಯಾಗಿರುತ್ತದೆ. ಇದು ಮೊದಲ ಹಂತ.
ಸಂಸ್ಥೆಯ್ಲಲಿ ಆ ವಿದ್ಯಾರ್ಥಿ ನಯವಿನಯದ ನಡವಳಿಕೆ ಪ್ರದರ್ಶಿಸುತ್ತಾನೆ. ಎಲರಿಗೂ ಆತ್ಮೀಯನಾಗುತ್ತಾನೆ. ಇದರೊಂದಿಗೆ ಹುಡುಗಿಯರತ್ತ್ಲಲೂ ಕಾಳಜಿ ವಹಿಸುತ್ತಾನೆ. ಮೃದು ಮನಸ್ಸಿನ ಗೆಳತಿಯರೊಂದಿಗ ಲ್ಲಲೆ ಗರೆದು ಪ್ರೇಮದ ಆಟ ಆರಂಭಿಸುತ್ತಾನೆ. ಯಾವಾಗ ಹುಡುಗಿ ನಾ ನಿನ್ನ ಬಿಟ್ಟಿರಲಾರೆ ಎಂಬ ಕಳಕಳಿ ತೋರುತ್ತಾಳೊ ಆವಾಗ ಈತಹ ಹಿಡನ್ ಅಜೆಂಡಾ ಚಾಲೂ ಆಗುತ್ತದೆ...! ಇದು ಎರಡನೇ ಹಂತ.. ಚಾನೆಲ್ ಸ್ದುದಿ ಅವಲೋಕನ ನಡೆದೇ ಇತ್ತು. ಬೇತಾಳ ಶವದೊಳಗೆ ಬೆಚ್ಚಿ ಬಿತ್ತು.
ಹುಡುಗಿಗೆ ಈ ಹುಡುಗನೇ ಸರ್ವಸ್ವವಾಗುತ್ತಾನೆ. ಸರ್ವಸ್ವವನ್ನೂ ಅರ್ಪಿಸಿ ಮಂತ್ರದ ಗೊಂಬೆಯಂತೆ ಆತನ ಆಜ್ಞಾನು ವರ್ತಿಯಾಗುತ್ತಾಳೆ. ಅವರಿಬ್ಬರೂ ಆ ಊರು ಬಿಟ್ಟು ಕೇರಳದ ಕೋಟ್ಟಯಂ, ಮಲಪ್ಪುರಂ ಮುಂತಾದ ಊರುಗಳನ್ನು ಸೇರುತ್ತಾರೆ. ಅಲಿ ಆಕೆ ನಿಜವಾಗಿಯೂ ಬಂಧಿಯ ಬದುಕು ಬಾಳ ಬೇಕಾಗುತ್ತದೆ.... ಮತ್ತೆ ಆಕೆ ಹೇಳುವುದೇನೂಇಲ. ಎಲವನ್ನೂ ಆತ ಹೇಳುತ್ತಾನೆ. ಅಪ್ಪಟ್ಟ ಧರ್ಮಗುರುವಿನಂತಾಗುತ್ತಾನೆ ಆಕೆಯ ಆ ನ್ಲಲ. ಇದು ಮೂರನೆಯ ಹಂತ. ಚಾನೆಲ್‌ನ್ಲಲಿ ಕುತೂಹಲಕಾರಿ ಮಾಹಿತಿ ಅನಾವರಣವಾಗುತ್ತಲೇ ಇತ್ತು. ಶಾಲಾ ಕಾಲೇಜುಗಳ್ಲಲಿ ನಡೆಯುತ್ತದೆಯೇ ಬೇತಾಳಕ್ಕೆ ಅಚ್ಚರಿಯಾಯಿತು.
ಈ ಹಂತದ್ಲಲಿ ಆತ ಮತಾಂತರದ ವಿಷಯವನ್ನು ಹೇಳುತ್ತಾನೆ. ಧರ್ಮಕ್ಕೆ ಬದ್ಧವಾಗಿ (ಆತ ಹೇಳುವುದನ್ನು ಕೇಳುವುದೇ ಆಕೆಯ ಧರ್ಮ)ಬದುಕುವುದು, ಮುಖಾವರಣ, ಬುರ್ಖಾಧರಿಸುವುದು ಇತ್ಯಾದಿಗಳಿಗೆ ಆದೇಶ ಬರುತ್ತದೆ. ಇದು ನಾಲ್ಕನೆಯ ಹಂತ. ಈಹಂತದ್ಲಲಿ ಆಕೆಗೆ ಹಣದ ಆಮಿಷವೂ ಒಡ್ಡಲಾಗುತ್ತದೆ. ಹುಡುಗನ ಮನಸ್ಸಿನ ನಿಜಬಣ್ಣ ಆಗ ಆಕೆಗೆ ಅರಿವಾಗುತ್ತದೆ. ಆದರೆ ಆ ವೇಳೆಗಾಗಲೇ ಆಕೆ ಹಿಂದಿರುಗಿ ಬರಲಾಗದಷ್ಟು ಹೊಸ ಹಾದಿಯ್ಲಲಿ ಮುಂದುವರಿದಿರುತ್ತಾಳೆ..... ಸ್ದುದಿ ಕೊನೆಗೊಂಡಿರಲ್ಲಿಲ! ಬೇತಾಳಕ್ಕೆ ಸ್ಥಳ ಕಾಲದ ಪರಿವೇ ಇರಲ್ಲಿಲ.
ಮಂಗಳೂರು- ಚಾಮರಾಜನಗರ
ಇಂತಹ ಘಟನೆಗಳಿಗೆ ದೃಷ್ಟಾಂತಗಳು ಬರತೊಡಗಿತು..
ಆಕೆ ಮಂಗಳೂರಿನ ಅಲ್ಪ ಸಂಖ್ಯಾತ ಧಾರ್ಮಿಕ ಸಂಸ್ಥೆಯೊಂದರ ಖಾಸಗಿ ಕಾಲೇಜ್ಲಲಿ ಉಪನ್ಯಾಸಕಿಯಂತೆ. ತಿಂಗಳಿಗೆ ೨೫೦೦ ರೂ. ವೇತನ ಬರುತ್ತಿತ್ತಂತೆ. ಆಕೆಯನ್ನು ಕೇರಳಕ್ಕೆ ಕರೆದೊಯ್ದ ಚಾಕೊಲೆಟ್ ಹೀರೊ ಹೇಳ್ದಿದೇನೆಂದರೆ ಮದುವೆಯ ಮಾತ್ಲಲ.... ಮುಖಾವರಣ ಇಸ್ಲಾಂ ಆಚರಣೆ, ಮತ ಪರಿವರ್ತನೆಯಾದರೆ ೧ ಲಕ್ಷ ಕೊಡುಗೆ ನೀಡುತ್ತಾನಂತೆ! - ಬೇತಾಳವೂ ಬೆಚ್ಚಿತು. ತಲಾ ೧ ಲಕ್ಷ ಹಣ ಕೊಡುವಂತ್ದಿದರೆ ಈ ಉದೇಶಕ್ಕಾಗಿ ಚಲಾವಣೆಯಾಗುವ ಹಣ ಎಷ್ಟಿರಬಹುದು.
ಇನ್ನೊಬ್ಬಳು ಚಾಮರಾಜನಗರದವಳು... ಅವಳ ವ್ಯಥೆಯೂಇದುವೇ... ಆದರೆ ಅಲಿ ಚಿತ್ರಣ ಆಕೆಯ ಹೆತ್ತವರದು.. ಆಕೆಯನ್ನರಸಿ ಕೇರಳಕ್ಕೆ ಹೊರಟರೆ, ಮಗಳನ್ನು ತೋರಿಸಲೂ ಸಿದ್ಧವಾಗದ ಚಾಕೊಲೆಟ್ ಹೀರೊಗಳು ಹೆದರಿಸಿ ಕಳುಹಿಸಿದರಂತೆ....
ಲ್ಯಾಪ್ ಟಾಪ್ ಮುಚ್ಚಿಟ್ಟ ಬೇತಾಳ ಪ್ರಶ್ನಿಸಿತು. ರಾಜನೇ ಇನ್ನು ಉತ್ತರಿಸು.. ನಮ್ಮ ಶಿಕ್ಷಣ ಸಂಸ್ಥೆಗಳ್ಲಲಿ ಉಗ್ರರು ನುಸುಳಿ ತಮ್ಮ ದುರ್‍ದುದೇಶ ಗುರಿ ಸಾಧಿಸುವುದೇಕೆ? ಇದಕ್ಕೆ ಸರ್ಕಾರ ಮೌನ ಪಾಲಿಸುವುದೇ?
 ಬೇತಾಳನೇ ನೀಡು ಕಂಡಿರುವುದು ಸಾಮಾಜಿಕವಾಗಿ ಬೇಗ ಅರಿವಿಗೆ ಬರುವ ವಿಷಯ. ಹಾಗಾಗಿ ಸ್ದುದಿವಾಹಿನಿಯ ಗಮನಕ್ಕೆ ಬಂತು. ಆದರೆ ಶಾಲಾ ಪಠ್ಯಕ್ರಮದ್ಲಲಿ ಗೊಂದಲಗಳು, ಕೌಟುಂಬಿಕ ಭದ್ರತೆಗೆ ಹಾನಿಯೊಡ್ಡುವ ವಿಷಯಗಳನ್ನು ತುರುಕುವುದು, ಪ್ರಗತಿವಾದದ ಮುಖವಾಡದ ಹಿಂದೆ ದೇಶದ ಭದ್ರತೆಗೆ ಮಾರಕವಾದ, ಅನಾದಿ ಕಾಲದಿಂದ ಬಂದ ನಂಬಿಕೆಯ ಬುನಾದಿಯನ್ನೇ ಕಳಚುವ ಹುನ್ನಾರ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದರೆ ಕೋಮುವಾದಿಗಳೆಂಬ ಹಣೆಪಟ್ಟಿ ತಗುಲಬಹುದೆಂದು ಯಾರೂಮಾತನಾಡುತ್ತ್ಲಿಲ ಅಷ್ಟೇ. ಏನೇ ಆಗಲಿ ಪರಚಿಂತೆನಮಗೇಕೆ ಎಂದು ಬಾಳುವವರಷ್ಟೇ ನಮ್ಮ್ಲಲಿ ಪ್ರಗತಿ ವಾದಿಗಳಾಗುತ್ತಾರೆ..... ರಾಜ ಮಾನತಾಡಿ ಮುಗಿಸುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಮಾಯವಾಯಿತು.

Tuesday, September 8, 2009

ಮುಖ್ಯಮಂತ್ರಿಯ ಚೀನ ಯಾನ

ವದೊಳಗೆ ಸೇರಿದ ಬೇತಾಳಕ್ಕೆ ಯಾಕೋ ಎಲ್ಲವೂ ಸರಿ ಇಲ್ಲ ಅನ್ನಿಸತೊಡಗಿತ್ತು. ಖಾಕಿ, ಖಾದಿ, ಕಾವಿಗಳೆಲ್ಲಾ ಅದಲುಬದಲಾದಂತೆ... ಎಲ್ಲವೂ ಅಯೋಮಯ.

ಅದರೊಳಗೆ ಇವರು.. ಇದರೊಳಗೆ ಅವರು ಸೇರಿ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದನ್ನಿಸತೊಡಗಿತು.
ಭಾರತೀಯ ಸೇನೆಯ ಅಧಿಕಾರಿಯಾಗ್ದಿದು, ಬಳಿಕ ನಾಲ್ಕು ದಶಕ ಕಾಲ ಆರ್‌ಎಸ್‌ಎಸ್ ಬಿಜೆಪಿಯ ಶಿಸ್ತಿನ ಸಿಪಾಯಿಯಾಗ್ದಿದ ಜಸ್ವಂತ್ ಸಿಂಗ್ ಪಾಕಿಸ್ತಾನದ ಮುಖಂಡರ ಬೆನ್ನುತಟ್ಟಿದಾಗ... ಕೇಸರಿಯೇ ನೆಲಜಲ ಎಂದೆನ್ನುತ್ತ್ದಿದ ರೈತಪುತ್ರ ಯಡಿಯೂರಪ್ಪ ಚೀನ  ಕತ್ತಿಕಾಳಗದ ಕೆಂಪುನೆಲಕ್ಕೆ ಆಸಕ್ತಿಯ ಅಡಿ ಇಟ್ಟ್ದದು, ಕೇರಳದ್ಲಲಿ `ಸ್ವಂತಕ್ಕೇನೂ ಬೇಡ ಎಲವೂ ಸಮಾಜ್ದದು'ಎಂದು ಹೇಳಿದ ಕಾರ್ಲ್ ಮಾರ್ಕ್ಸ್‌ನ ಶಿಷ್ಯರ ಸರ್ಕಾರದ ಮಂತ್ರಿಯೊಬ್ಬರು ಬಹುಕೋಟಿ ಹಗರಣದ್ಲಲಿ ತಬ್ಬಿಬ್ಬಾಗಿ ಸಿಬಿಐ ಪಟ್ಟಿಯ್ಲಲಿ ಹುಗಿದು ಹೋದ್ದದು.... ಬೇತಾಳನಿಗೆ ಬ್ರಾಂಡ್ ನೇಮ್‌ಗಳ್ಲೆಲಾ ಕಲಬೆರಕೆಯಾದಂತೆ ಅನ್ನಿಸತೊಡಗಿತ್ತು.
ಪಕ್ಕದ್ಲಲೇ ಇರುವ ಕೇರಳ...
ಕೃಷಿ, ಕೃಷಿರಂಗದ ಸುಧಾರಣೆ ಇತ್ಯಾದಿಗಳ ಬಗ್ಗೆ ಕಲಿಯ ಬೇಕೆಂದ್ದಿದರೆ, ಯಡಿಯೂರಪ್ಪ ಮತ್ತವರ ಸಹೋದ್ಯೋಗಿಗಳು ಚೀನಾಕ್ಕೆ ಹೋಗಬೇಕೆಂದಿರಲ್ಲಿಲ. ಪಕ್ಕದ್ಲಲೇ ಇರುವ ಕೇರಳದ ಕುಟ್ಟನಾಡಿನಂತಹ ಬಯಲುಸೀಮೆಗೆ ಹೋಗಿ ಬರಬಹುದಿತ್ತು. ಕಮ್ಯುನಿಸ್ಟರಿಗೆ ಅಧಿಕಾರ ಕೈಗೆ ಸಿಕ್ಕರೆ ಅವರೂ ಸಮಾಜವಾದ ಮರೆತು ಸಾಮ್ರಾಜ್ಯವಾದಿಗಳ ಭೂತಹೊಕ್ಕವರಂತಾಗುತ್ತಾರೆ. ಕುಟ್ಟನಾಡಿನ್ಲಲಿ ಭತ್ತದ ಗ್ದದೆಗಳು ಹೇಳ ಹೆಸರ್‍ಲಿಲದಂತೆ ವಿನಾಶದ ಅಂಚಿನ್ಲಲಿವೆ. ಸಾಮಾನ್ಯರು, ಸಣ್ಣಗಾತ್ರದ ಜಮೀನು ಹೊಂದಿದ ಕೃಷಿಕರು, ಗೇಣಿಗೆ ಕೃಷಿ ಮಾಡುವವರಿಗಾಗಿ ಕಾನೂನು ಹೆಚ್ಚೇನನನ್ನೂ ಕೊಟ್ಟ್ಲಿಲ. ಹೊಸ ಕಾಯ್ದೆಗಳೂ ಇದನ್ನೇ ಹೇಳುತ್ತವೆ. ಆದರೆ ಸಮಾಧಾನದ ವಿಷಯವೆಂದರೆ ನಿವೃತ್ತಿಯ ಅಂಚಿನ್ಲಲಿರುವ ವೃದ್ಧ ಕೃಷಿಕರಿಗೆ ಪಿಂಚಣಿ ರೂಪದ್ಲಲಿ ಗಂಜಿ ಕುಡಿಯಲು ಸರ್ಕಾರದಿಂದ ಹಣ ಸಿಗುತ್ತದೆ. `ಉಳುವವನೇ ಹೊಲದೊಡೆಯ' ಎಂದು ೭೦ರ ದಶಕದ್ಲಲಿ ಕೆಂಪುಬಾವುಟ ಹಿಡಿದು, ಕೃಷಿಕಾರ್ಮಿಕರ ಕೈಗೆ ಸ್ವಾಭಿಮಾನದ ಶಕ್ತಿ ನೀಡಿದ ಕಮ್ಯೂನಿಸ್ಟರು ಇಂದು ಎಲವನ್ನೂ ಮರೆತ್ದಿದಾರೆ ಬೇತಾಳನಿಗಷ್ಟೇ ಅಲ ಸ್ವತಃ ಪಕ್ಷದ ಬೆಂಬಲಿಗರಿಗೂ ಹೀಗೆ ಅನ್ನಿಸುತ್ತಿದೆಯಂತೆ!
ಪಶ್ಚಿಮ ಬಂಗಾಳ..
ಯಾಕಂದ್ರೆ ಪಶ್ಚಿಮ ಬಂಗಾಳದ್ಲಲಿ ಸೆಪಿಎಂ ಆಡಳಿತವ್ದಿದರೂ ದುಡಿಯುವವರನ್ನು ತೊತ್ತಳ ತುಳಿದ ಸರ್ಕಾರ ಟಾಟಾ ಕಂಪನಿಯ ಅಡಿಯಾಳಾಗಿ 'ನ್ಯಾನೊ'ಗೆ ಕೆಂಪು ಹಾಸಿನ ಸ್ವಾಗತ ನೀಡಿತ್ತು. ಅಲಿ ಬಡಜನರ ರಕ್ತ ಹಳದಿನದಿಯ ನೀರನ್ನೂ ಕೆಂಪಾಗಿಸಿತ್ತು. ಹಾಗಿರುವಾಗ `ಸಮಾಜವಾದಿ'ಗಳಾದ ಕಮ್ಯೂನಿಸ್ಟರಿಗೆ `ಸಾಮ್ರಾಜ್ಯವಾದಿ', `ಕೋಮುವಾದಿ' ಮುಂತಾದ ವ್ಯಾಧಿಗಳನ್ನು ಹೊತ್ತ ಬಿಜೆಪಿ ಮಂದಿ ಕಮ್ಯೂನಿಸ್ಟ್ ದೇಶ ಚೀನಾದಿಂದ ಕಲಿಯ ಬೇಕ್ದಾದೇನು ಎಂzಬುದು ಬೇತಾಳನ ತಲೆಗೆ ಹೊಳೆಯದ ವಿಷಯವಾಗಿತ್ತು.
ಭೂಮಾಫಿಯ ಪಾಲಾಗುತ್ತಿದೆ ಕೃಷಿ ಭೂಮಿ..
ಕರ್ನಾಟಕದ್ಲಲಿ ರೈತನಿಗೆ ಸುಖ ಇಲ, ರೈತರ ರಕ್ಷಕರೆಂದು ಕೂಗಾಡುವ ಸಂಘಟನೆ ಮುಖಂಡರು ಮಾತ್ರ ಹೊಟ್ಟೆ ಬೆಳೆಸಿ ಹಾಯಾಗ್ದಿದಾರೆ. ಆದರೆ ರೈತರ ಕೃಷಿ ಭೂಮಿ ಅಭಿವೃದ್ಧಿಯ ಹೆಸರ್‍ಲಲಿ ಭೂಮಾಫಿಯದ ಪಾಲಾಗುತ್ತಿದೆ. ಕೃಷಿ ಭೂಮಿ ಸುಲಭವಾಗಿ ವಾಣಿಜ್ಯ್ದೋದೇಶಕ್ಕೆ ಖಾತೆ ಬದಲಾಗುವುದರಿಂದ ರೈತನ ಕಾಲಡಿಯ ನಲ ಕರಗತೊಡಗಿದೆ. ವಿಶೇಷ ಆರ್ಥಿಕ ವಲಯ, ಉದ್ಯಮೀಕರಣ ಮುಂತಾದವುಗಳಿಗೆ ಜಮೀನು ಸ್ವಾಧೀನ ಎಂಬ ನೆಲೆಯ್ಲಲಿ ರೈತರ ಮೇಲೆಯೇ ಆಕ್ರಮಣ ನಡೆಯುತ್ತಿದೆ. ಬರಡು ಭೂಮಿಯ ಬದಲು ಫಸಲು ಭೂಮಿ ಸ್ವಾಧೀನ ಮಾಡುವ ಕುತಂತ್ರ ಅಧಿಕಾರಿ ವರ್ಗದ್ಲಲಿ ನಡೆಯುತ್ತಿದೆ. ಹಾಗಾಗಿ ಕುಳಿತ್ಲಲೇ ಮಾಡಬಹುದಾದ ಕ್ರಾಂತಿಗೆ ಸಿಎಂ ಚೀನಾಗೆ ಫ್ಲೈಟ್ ಹತ್ತಿ ಹಾರ್‍ದಿದೇಕೆ ಎಂಬುದು ಬೇತಾಳನನ್ನು ಕಾಡುವ ಪ್ರಶ್ನೆಯಾಗಿತ್ತು.
ಚೀನಾ ಅಭೂತಪೂರ್ವ ಸಾಧನೆ..
ಚೀನಾ ಕಮ್ಯೂನಿಸ್ಟ್ ರಾಜ್ಯವಾಗ್ದಿದರೂ ಅಲಿ ಕಳೆದ ನಾಲ್ಕುಯ ವರ್ಷಗಳ್ಲಲಿ ಅಭೂತಪೂರ್ವ ಸಾಧನೆ ಆಗಿದೆ. ಅಲಿಯ ಕೃಷಿ ನೆಲಗಳ್ಲಲಿ ಕ್ರಾಂತಿ ಕಾರಿ ಉತ್ಪಾದನೆ ಮಾಡಿ ಆಗಾರ ಸ್ವಾವಲಂಬನೆಗೆ ಸರ್ಕಾರ ಹೆಜ್ಜೆ ಇರಿಸಿದೆ. ರೈತರು ಸರ್ಕಾರಕ್ಕೆ ತಮ್ಮ ಇಳುವರಿಯ ಒಂದು ಭಾಗವನ್ನು ದೇಣಿಗೆನೀಡಿ ದೇಶದ ಆಹಾರ ಸಂಗ್ರಹಕ್ಕೆ ತಮ್ಮ ಕೊಡುಗೆ ಕೊಡುತ್ತಾರೆ. ಜಗತ್ತಿನ ಅತಿ ಹೆಚ್ಚು ಜನಸಂರ್ಖಯೆಯ ರಾಷ್ಟ್ರವಾಗ್ದಿದರೂ ಅಲಿನ ಬಡವರು ಹಸಿವೆ, ಪೋಷಕಾಂಶದ ಕೊರತೆ ಇಲದೆ ಬದುಕುತ್ತವೆ ಅಂತೆ ಇದು ವಿಶ್ವಸಂಸ್ಥೆಯ ಅಧ್ಯಯನ ವರದಿಯ್ಲ್ಲಲೂಇದೆ. ಹಾಂ! ಇದು ಭರತದ್ಲಲಿ ನಡೆಯುವ 'ಬಲವಂತದ ಮಾಘಸ್ನಾನ'ದಂತಿರುವ 'ಲೆವಿ ಪದ್ಧತಿ' ಅಲ. ದಾಖಲೆಯ್ಲಲಿರುವ ಎಲರಿಗೆ ಸಮಬಾಳು ಎಲರಿಗೆ ಸಮಪಾಲು ಸ್ಲೋಗನ್ ಅಲವೇ ಅಲ.
ಪ್ರವಾಸ ಹೊರಟ ಕಾರಣ
ಸಿಎಂಯಡಿಯೂರಪ್ಪ ಮತ್ತು ತಂಡದವರು ಪ್ರವಾಸ ಹೊರಟ ಇನ್ನೊಂದು ಕಾರಣ ಎಂದರೆ ಬಂಡವಾಳ ಹೂಡಿಕೆ. ಚೀನಾದಿಂದ ಶ್ರೀಮಂತರನ್ನು ರಾಜ್ಯಕ್ಕೆ ಕರೆಸಿ ಅವರಿಗೆ ಉದ್ಯಮ ಅವಕಾಶ ನೀಡುವುದು. ಬಿಜೆಪಿ ಅಧಿಕಾರ ನಡೆಸಲು ಅನರ್ಹ, ನಂಬಿಕೆಗೂಯೋಗ್ಯರ್‍ಲಲ ಎಂದು ಹೆಳುತ್ತಿರುವ ಭಾರತೀಯ ಕಮ್ಯುನಿಸ್ಟರ ಶಿಫಾರಸು ಇಲದೆ ಚೀನಾದ ಮಂದಿ ಇಲಿಗೆ ಹಣದ ಥೈಲಿ ಹಿಸಿದು ಬರುತ್ತಾರೆಯೇ? ರಾಜ್ಯದ್ಲಲಿ ವಿದೇಶಿ ಹೂಡಿಕೆದಾರರಿಗೆ ನೆಮ್ಮದಿಯ ವಾತಾವರಣ ಇಲ `ಇದು ಕೋಮು ಗಲಭೆ' ರಾಜ್ಯ ಎಂಬಂಥ ಸ್ದುದಿ ಹರಡುತ್ತಲೇ ಇರುವವರೂಇದಾರೆ. ಇದಕ್ಕೆ ಕೆಲವು ಆಂಗ್ಲ ಟಿವಿ ಛಾನೆಲ್‌ಗಳೂ ಸಾಥ್ ನೀಡುತ್ತಿವೆ.... ಬೇತಾಳಕ್ಕೆ ಇದ್ಲೆವೂಕಣ್ಣೊರಸುವ ತಂತ್ರ ಎಂದನ್ನಿಸತೊಡಗಿತ್ತು.
ಬೇತಾಳ ಇಷ್ಟ್ಲೆಲಾ ಮಾತನಾಡುತ್ತ್ದಿದರೂ ಇದ್ಲೆಲಾ ತನಗೆ ಸಂಬಂಧಿಸ್ದಿದೇ ಅಲ ಅನ್ನುವಂತೆ ಭಾರತೀಯ ಮತದಾರನ ಪ್ರತಿರೂಪದಂತೆ ಮೌನವಾಗಿ ಸಾಗುತ್ತ್ದಿದ ವಿಕ್ರಮಾದಿತ್ಯನನ್ನು ಕಂಡು ಅಸಹನೆ ಭೂಗಿಲ್ದೆದಿತು.
ರಾಜನೇ, ಈ ಮೇಲಿನ ಎಲಾಗೊಂದಲಗಳಿಗೆಉತ್ತರ ಅರಿತೂ ನೀನು ಉತ್ತರಿಸದ್ದಿದರೆ ನಿನ್ನ ತಲೆ ಬಾಂಬ್ ಇಡದೆಯೇ ಸ್ಫೋಟಗೊಳ್ಳುತ್ತದೆ ಎಂದು ಹೆದರಿಸಿತು....
 ತಂತ್ರ...
ಬೇತಾಳನೇ ... ಇದ್ಲೆಲವೂ ಸರ್ಕಾರ ನಡೆಸುವವರ್‍ಲಲಿ ಸಹಜವಾಗಿಯೇ ಇರುವ ತಂತ್ರ. ವಿಧಾನ ಸಭೆಯ್ಲಲಿ ಗ್ದದಲ ಮಾಡುವ ಪ್ರತಿಪಕ್ಷಗಳಬಾಯ್ಮುಚ್ಚಿಸಲು ಅಭಿವೃದ್ಧಿಯ ಮಂತ್ರ, ಚೀನಾ ಅಣ್ಣಂದಿರ ಸಹವಾಸ ಬಯಸಿದಂತೆ ತೋರಿಸಿ `ಕೋಮುವಾದಿ' ಗಳೆಂದು ಕರೆಯುವ ಕೊಮಾ ಸ್ಥಿತಿಯ್ಲಲಿರುವ ಕಮ್ಯುನಿಸ್ಟ್‌ರು, ವಿಚಾರವಾದಿಗಳು, ಬುದ್ಧಿ ಜೀವಿಗಳ ಹಾದಿ ತಪ್ಪಿಸುವ ತಂತ್ರ, ಎಲವನ್ನೂಪ್ರತಿ ಚುನಾವಣೆಯ್ಲಲಿ ಮರೆಯುವ ಜನ ಇಂತ್ದದನ್ನ್ಲೆಲ ಮರೆಯದೇ ಇರುತ್ತಾರೆಯೇ ಎಂದು ರಾಜ ಪ್ರಶ್ನಿಸಿದ.

ರಾಜನ ಮೌನ ವ್ರತ ಭಂಗವಾಗುತ್ತಿರುವಂತೆಯೇ ಬೇತಾಳ ಶವದೊಂದಿಗೆ ಮತ್ತೆ ಮರ ಸೇರಿತು.

Saturday, September 5, 2009

ಸೊಪ್ಪು ಜಗಿಯುತ್ತಿರುವ `ನಾಗರಿಕರು'

ಬೇತಾಳ ಯಾಕೋ ಅನ್ಯಮನಸ್ಕನಾಗಿ ಕುಳಿತಿತ್ತು. ಎಲವನ್ನೂ ಸಾಧಿಸ್ದಿದೇವೆ.. ಜಗತ್ತೇ ಕೈ ಮುಷ್ಟಿಯೊಳಗೆ ಅನ್ನುವ ಅಹಂಕಾರದ್ಲಲಿ ಮೆರೆಯುತ್ತಿರುವ ಮನುಷ್ಯನನ್ನು ಹೊಸ ಹೊಸ ರೋಗಗಳು ತಬ್ಬಿಬ್ಬು ಮಾಡುತ್ತಿವೆ. ಈಗ ಹಂದಿಜ್ವರದ ಸಾವಿನ ತೇರುಯಾತ್ರೆ ಸಾಗಿರುವುದು ಬೇತಾಳನ ಹೊಸ ಚಿಂತೆಗೆ ಕಾರಣ...

ಎಲಿ ನೋಡಿದರೂ ಸಾವಿನ ಸ್ದುದಿ. ಸೂತಕದ ಛಾಯೆ... ಥಂಡಿಯಾದರೂ ಹಂದಿಜ್ವರ ತಗುಲಿತೇನೊ ಎಂದು ಹೆದರಿ ಬಿಳುಚಿಕೊಳ್ಳುವವರು. ಪಕ್ಕದ್ಲಲಿ ಯಾರಾದರೂ ಕೆಮ್ಮಿದರೆ ಸೀನಿದರೆ ಹಂದಿಜ್ವರವೇನೋ ಎಂದು ಅತ್ತ ಗೋಣು ತಿರುಗಿಸಿ ಕಣ್ಣು ಕೆಕ್ಕರಿಸುವವರು....

ಯಮರೂಪಿ ಹಂದಿಜ್ವರ
ಹಂದಿಜ್ವರ ಎಂದು ಜನಸಾಮಾನ್ಯರು ಕರೆಯುವ ಇನ್‌ಫ್ಲುಯೆಂಜಾ- ಎ ವೈರಸ್‌ನಿಂದ ಹರಡುವ ಎಚ್೧ಎನ್೧ ಜ್ವರ ಈಗ ಏಡ್ಸ್‌ಗಿಂತ ಹೆಚ್ಚು ಹೆದರಿಕೆ ಹುಟ್ಟಿಸಿದೆ.
ಎಚ್‌ಐವಿ ಓಕೆ ಎಚ್೧ಎನ್೧ ಯಾಕೆ?

'ಎಚ್‌ಐವಿ ಅಣುಗಳು ಹರಡುವ ಏಡ್ಸ್ ಸೋಂಕಿದರೆ ಹತ್ತಿಪ್ಪತ್ತು ವರ್ಷ ಬದುಕಬಹುದು; ಆದರೆ ಎಚ್೧ಎನ್೧ ಸೋಂಕಿದರೆ ಒಂದು ವಾರ ಕಾಲ ಬದುಕುಳಿಯುವುದು ಕಷ್ಟ' ಇದು ನೊಂದವರ ಅಭಿಪ್ರಾಯ.

ಏಡ್ಸ್‌ನಂತೆಯೇ ಎಚ್೧ಎನ್೧ ಕೂಡಾ ವಿದೇಶಿ ರಾಷ್ಟ್ರಗಳಿಂದ ಆಮದು ಆಗಿರುವ ರೋಗ. ಏಡ್ಸ್ ರೋಗ ಅಲ ರೋಗ ಲಕ್ಷಣ. ಪ್ರತಿರೋಧ (ಇಮ್ಯೂನಿಟಿ) ಶಕ್ತಿ ಕುಸಿಯುವ ವೈರಾಣು ಬಾಧೆ ಇದು. ಅದೇ ರೀತಿ ಹಂದಿ ಜ್ವರದ ವೈರಾಣು ಕೂಡ ಪ್ರತಿರೋಧ ಶಕ್ತಿಯನ್ನು ಆಧರಿಸಿಯೇ ಹರಡುತ್ತದೆ. ದೇಹವನ್ನು ಕೋಟೆಯಂತೆ ಕಾಪಾಡುವ ರಕ್ತದ ಬಿಳಿ ಕಣಗಳನ್ನು ಕ್ಲೊಲುವ ಮೂಲಕವೇ ಹರಡುತ್ತದೆ. ಕಫ ಹೆಚ್ಚಿ ಉಸಿರು ಬಂದ್ ಮಾಡುತ್ತದೆ..
ಕೈ ಚ್ಲೆಲಿದ ವೈದ್ಯರು...
ಏಡ್ಸ್‌ಗೂ ಮೊದಲು ಆಫ್ರಿಕಾದಿಂದ `ಎಬೋಲ' ಎಂಬ ಮ್ದದ್ಲಿಲದ ರೋಗ ಇತರ ದೇಶಗಳತ್ತ ಕಬಂದ ಬಾಹುಗಳನ್ನು ಹರಡಿತ್ತು. ಆದರೆ ವೈದ್ಯರು ಮಾತ್ರ ಕೈಚ್ಲೆಲಿಕುಳಿತ್ದಿದಾರೆ. ನಕಲಿ ವೈದ್ಯರು, ಮಾಸ್ಕ್ ತಯಾರಕರಿಗೆ ಹಂದಿ ಜ್ವರ ಹಣಚ್ಲೆಲುವ 'ಕಾಮಧೇನು'ವಾಗಿ ಬದಲಾಗಿರುವುದು ಬೇತಾಳನಿಗೆ ಗಂಟಲು ಕಟ್ಟುವಂತೆಮಾಡಿತು.
ಶ್ರೀಮಂತರಿಂದ ಬಡವರಿಗೆ ಕಷ್ಟ
ಹಂದಿ ಜ್ವರ ಶ್ರೀಮಂತರ ರೋಗವಾಗಿತ್ತು. ಅಲಿ ಅಮೆರಿಕದ ಮೆಕ್ಸಿಕೊದ್ಲಲಿ ಕಳೆದ ಮಾರ್ಚ್ ಕಾಣಿಸಿಕೊಂಡ್ದಿದ ಹಂದಿ ಜ್ವರ ಜೂನ್ ವೇಳೆಗೆ ಭಾರತ ತಲುಪಿತ್ತು. ಆಗ್ಲೆಲಾ ಇದು 'ಶ್ರೀಮಂತರ ಕಾಯಿಲೆ', ವಿಮಾನದ್ಲಲಿ ಅಲೆದಾಡುವ, ವಿದೇಶ- ದೇಶಾಂತರ ಹೋಗುವವರನ್ನು ಕಾಡುವ ರೋಗ ಎಂದು ಬಡವರು ಭಾವಿಸ್ದಿದರು. ಆದರೆ ಶ್ರೀಮಂತರು ಬೇಕಷ್ಟು ಹಣ ಚ್ಲೆಲಿ ಜ್ವರದಿಂದ ಬಚಾವಾದರು... ಬಡವರ ಸ್ಥಿತಿ ನೋಡಿ ಬೇತಾಳನಿಗೆ ಬೇಸರವಾಯಿತು. ಆದರೆ ಹಳ್ಳಿ-ಗ್ರಾಮಗಳತ್ತ ಈ ಮಹಾಮಾರಿ ವ್ಯಾಪಿಸ್ಲಿಲ ಎಂದು ಚಿಂತಿಸಿದಾಗ ಸಮಾಧಾನವಾಯಿತು.
ಭಾರತದ್ಲಲಿ ಬಲಿಯಾಗುವವರೇ ಬಡವರು. ಸತ್ತವನ್ನೊಮ್ಮೆ ತಿರುಗಿ ನೋಡಿದರೆ ಬೇತಾಳನಿಗೆ ಬಡವರ ಅಸಹಾಯಕ ಮುಖಗಳೇ ಕಾಣಿಸುತ್ತ್ದಿದುವು. ಜ್ವರ ವ್ಯಾಪಿಸುತ್ತ್ದಿದಂತೆಯೇ ಜನರು ಸಾಮಾನ್ಯವಾಗಿ ಹೋಗುತ್ತ್ದಿದ ಪೆಟ್ಟಿಗೆ ಅಂಗಡಿಗಳು, ಚಹಾ ಅಂಗಡಿಗಳ ಮುಂದೆ ಜನ ಸಂಖ್ಯೆ ಕಡಿಮೆಯಾಗ ತೊಡಗಿತು. ಇದರಿಂದ ಸಾಮಾನ್ಯರ ಆದಾಯಕ್ಕೂ ಕತ್ತರಿಯಾಗಿತ್ತು...
ಜ್ವರ ಇದೆಯಾ ಅಂತ ತಪಾಸಣೆ ಮಾಡಬೇಕ್ದಿದರೆ ನಾಲ್ಕಾರು ಸಾವಿರ ಕೈಯ್ಲಲಿರಬೇಕು. ಬಡವರಿಗೆ ಹೇಗೆ ಸಾಧ್ಯ?ಇದು ಸರ್ಕಾರಿ ಆಸ್ಪತ್ರೆಯ್ಲಲಿ ಉಚಿತ ತಪಾಸಣೆ ಆದರೆ ಎಂಟ್ರಿ ಸಿಗಬೇಕ್ದಿದರೆ ವೈದ್ಯರು-ದಾದಿಯರಿಗೆ `ಆತಿಥ್ಯ'ಆದಾಗ ಖಾಸಗಿಯಷ್ಟೇ ಖರ್ಚು. ಶ್ರೀಮಂತರ ಮ್ದದ್ಲಿಲದ ರೋಗ ಬಡವರನ್ನು ಇಕಾಡಿದರೆ ಅವರಿಗೆ ಯಮನೇ ಗತಿ! ವಿದೇಶಗಳಿಗೆ ಹೋಗಿ ಹೊಸ ಹೊಸ ರೋಗಗಳನ್ನು ಹೊತ್ತು ತರುವ `ವಿಮಾನ ಯಾನಿ' ಶ್ರೀಮಂತರಿಂದ 'ಬಡವರ ರಕ್ಷಣೆ ತೆರಿಗೆ' ವಸೂಲಿ ಮಾಡಬೇಕಾಗಬಹುದೇನೊ?
ಬೇತಾಳನ ತಲೆಯ್ಲಲಿ ಹೊಸಹೊಸ ಯೋಚನೆಗಳು ಬರತೊಡಗಿ ತಾನೂ 'ಬುದ್ಧಿಜೀವಿ'ಯಾಗಿ ಬಿಡುತ್ತೇನೇನೊ ಎಂದು ಹೆದರಿತು.
ಅಮೃತ ಬಳ್ಳಿ ಎಂದು ಮನಿಪ್ಲಾಂಟ್ ಮುಕ್ಕಿದರು!
ಬೇತಾಳನ ಚಿಂತೆಗೆ ಅಡ್ಡಿಯಾಗುವಂತೆ ಶವವ್ದಿದ ಮರದ ಕೆಳಗಿನ ಸ್ಮಶಾನ ಭೂಮಿಯ್ಲಲಿ ಅದೇನೋ ಸ್ದದು.
ರಾಜ ಮತ್ತೆ ಶವವನ್ನು ಹೊತ್ತು ಹೊರಟನೇ... ಅನುಮಾನದಿಂದ ನಾಲ್ಕೂಸುತ್ತು ನೋಡಿತು. ಇದು ವಿಕ್ರಮಾದಿತ್ಯ ಅಲ. ಬೇರೆ ಯಾರೋ...
ಯಾರೋ ಏನೋ ಮಾಡುತ್ತ್ದಿದಾರೆ. ಅಂತ್‌ಯಕ್ರಿಯೆ, ಪಿತೃ ಕ್ರಿಯೆಗಳಿಗಾಗಿ ಬಂದವರ್‍ಲಲ. ಕೈಯ್ಲಲಿ ಚೀಲ... ಅದೇನೋ ಹುಡುಕಾಟ. ಬೇತಾಳ ಅದ್ಲಿಲದೆ ಅವರತ್ತ ಸಾಗಿತು. ನೋಡಿದರೆ ಸ್ಮಶಾನದ ಅಲ್ಲಲಿ ಬೆಳೆದ ಗಿಡ, ಬಳ್ಳಿ ಬೇರುಗಳನ್ನು ಸಂಗ್ರಹಿಸುತ್ತ್ದಿದರು ಬಂಧು ಎಂದೇ ಕರೆಯಲ್ಪಡುವ 'ತಗಸೆ ಗಿಡ' (ವೈಜ್ಞಾನಿಕ ಹೆಸರು ಕ್ಯಾಸಿಯಾ), ಅಮೃತ ಬಳ್ಳಿ, ಕೃಷ್ಣ ತುಳಸಿ ಎಂದು ಕೀಳುತ್ತ್ದಿದರು. ಇವುಗಳನ್ನು ಹಿಂಡಿ ರಸ ಕುಡಿದರೆ ಬದುಕಬಹುದು ಎಂಬುದು ಅನೇಕರ ನಂಬಿಕೆ.
ಕಿ ಬ್ದಿದಾಗ ಬಾವಿ ತೋಡುವ' ಗುಣ ಇರುವ ಪೇಟೆ ಮಂದಿಗೆ ಗಿಡಮೂಲಿಕೆಗಳನ್ನು ಗುರುತಿಸಲುವ ಜ್ಞಾನ ಇದೆಯೇ. ಸಂಸ್ಕೃತದೊಂದಿಗೇ ಆರ್ಯುವೇದದಂತಹ ಭಾರತೀಯ ವೈದ್ಯಪದ್ಧತಿಯನ್ನು `ಮೃತ' ಎಂದು ಪರಿಗಣಿಸಿದ ಇವರು ತಾವೇ ಮೃತಾವಸ್ಥೆಗೆ ಬಂದಾಗ ತೆಗಳ್ದಿದನ್ನೇ ಹೊಗಳ ತೊಡಗ್ದಿದಾರೆ. ದೇವರ ಅಸ್ತಿತ್ವನ್ನೇ ಒಪ್ಪದವರೂ ದೇವರೇ ರಕ್ಷಿಸು ಅನ್ನತೊಡಗಿರುವುದು.. ಗಿಡಮೂಲಿಕೆ ಎಂದು ಯಾರ್‍ಯಾರೊ ನೀಡಿದ ಮನಿಪ್ಲಾಂಟ್ ಗಿಡವನ್ನೇ ಅಮೃತಬಳ್ಳಿ ಎಂದು ನುಂಗಿದವರನ್ನು ಕಂಡಾಗ ಪರಿಸ್ಥಿತಿಯ ವ್ಯಂಗ್ಯವೇನೊ.ಎಂದನಿಸಿತು.
ಯೋಗ... ಯೋಗಾಯೋಗ
ಅಯ್ಯಯ್ಯೊ...! ಮೊಸಾ ಟೈಲ್ಸ್ ಹಾಕಿದ ನೆಲದ್ಲಲೇ ನಡೆಯುವ, ಮಣ್ಣು ಮುಟ್ಟಿದರೆ ಮೈಲಿಗೆಯಾಗಬಹುದೆನ್ನುವ, ಸೊಪ್ಪು ತರಕಾರಿ ತಿಂದರೆ ಅನಾಗರಿಕರಾಗಿ ಬಡಬಹುದೇನೊ ಎಂಬ ಭ್ರಮೆಯ್ಲಲಿ ಬೀಗುತ್ತ್ದಿದ ನಾಗರಿಕರ್‍ಲೆಲರೂ ಈಗ ದನ ಜಾನುವಾರುಗಳಿಗೂ ಸಿಗದಂತೆ ಬೀದಿ ಬೀದಿ ತಿರುಗಿ ಸೊಪ್ಪು ಬಳ್ಳಿ ಜಗಿಯ ತೊಡಗ್ದಿದಾರ್‍ಲಲಾ ಎಂದು ಬೇತಾಳ ಮುಸಿಮುಸಿ ನಗತೊಡಗಿತು.
ಪೇಟೆಯ ಜನರೇ ಹಾಗೆ ಎಲವೂ ರೆಡಿ ಇದರಷ್ಟೇ ಬೇಕು. ಯಾರೋ ಬೆಳೆಯ ಬೇಕು, ಇನ್ನಾರೊ ಬೇಯಿಸಬೇಕು ತಾನು ತಿನ್ನಬೇಕು. ಯಾರೋ ದುಡಿಯಬೇಕು ತಾನು ಮಜಾ ಮಾಡಬೇಕು ಎಂಬ ಚಿಂತನೆಯ್ಲಲಿ ಇದುವರೆಗೆ ಬೊಜ್ಜುಬೆಳೆಸಿ ಬಲೂನ್‌ನಂತೆ ಊದಿಕೊಳ್ಳುತ್ತ್ದಿದವರೇ
ಅಧಿಕ. ಈಗ ಕೊಬ್ಬಕರಗಿಸಲು ಬಗೆಬಗೆಯ ಕಸರತ್ತು ಮಾಡತೊದಗಿರುವುದು ಬೇತಾಳನಿಗೆ ಹೊಸ ಹಾಸ್ಯವಾಗಿ ಕಂಡಿತು.
ಇನ್ನು ಯೋಗ, ಧ್ಯಾನ, ಪ್ರಾಣಾಯಾಮ ಎಂದು ಸಿಕ್ಕಸಿಕ್ಕವರ ಕಾಲು ಹಿಡಿಯತೊಡಗ್ದಿದಾರೆ. ನಗರಗಳ್ಲಲಿ ಅರೆಬರೆ ಜ್ಞಾನ ಇದವರ್‍ಲೆಲಾ ಯೋಗ ಪಂಡಿತರಾಗ್ದಿದಾರೆ. ಒಂದೆರಡು ಸೊಪ್ಪಿನ್ನು ಗುರುತಿಸುವ ಪಾಂಡಿತ್ಯ ಇದವರ್‍ಲೆಲಾ ಟಿವಿ ಮಾಧ್ಯಮಗಳ ಮುಂದೆ ಅಶ್ವಿನಿದೇವತೆಗಳಂತೆ ಪೋಸ್ ನೀಡತೊಡಗ್ದಿದಾರೆ... ಬೇತಾಳನಿಗೆ ಜನರ ಪ್ರಾಣಭಯ ಕಂಡು ನಗಬೇಕೊ ಅಳಬೇಕೊ ಎಂಬ ಗೊಂದಲವಾಯಿತು.
ಮಾಸ್ಕ್‌ನ ಒಳಗೆ....
ಹಂದಿ ಜ್ವರ ಯುವ ಪ್ರೇಮಿಗಳಿಗೆ ವರ ಎಂಬ ಯೋಚನೆ ಬಂದಾಗ ಬೇತಾಳ ಮನದೊಳಗೆ ನಕ್ಕಿತು. ಮಾಸ್ಕ್ ಹಾಕಿ, ತಲೆಗೆ ವೇಲ್ (ಶಾಲು) ಹ್ದೊದರಂತೂ ಸ್ವತಃಅಪ್ಪಮ್ಮನಿಗೇ ಮಕ್ಕಳ ಗುರುತಾಗದು. ಇನ್ನು ಉಳಿದವರ ಮಾತೇ ಬೇಡ!
ವಿಕ್ರಮಾದಿತ್ಯನೇ, ಈಗ ಹೇಳು ನಾಗರಿಕರು, ಪ್ರಗತಿ ವಾದಿಗಳು ಅನ್ನುವವರು ಪಾಶ್ಚಾತ್ಯ ಸಂಸ್ಕೃತಿಯನ್ನು ವೈಭವೀಕರಿ ಆರ್ಷ ಭಾರತ ಸಂಸ್ಕೃತಿಯನ್ನು ದುರ್‍ದುದೇಶದಿಂದ ನಿರ್ಲಕ್ಷ್ಯಿಸ್ದಿದು ಹಂದಿಜ್ವರ ಬಂದಾಗ ಸಾಬೀತಾಗಿದೆ ಅಲವೇ?
ಬೇತಾಳನೇ, ಇದು ಎಲಾ ಕಾಲದ್ಲಲೂ ಇದ ಮಾನಸಿಕ ಅವಸ್ಥೆ. ಭಾರತೀಯ ಪರಂಪರೆಯನ್ನು ವಿನಾಕಾರಣ ದ್ವೇಷಿಸುವುದು, ಹೊರ ಸಂಸ್ಕೃತಿಗಳನ್ನು ಬೇಡವೆಂದರೂ ಅಪ್ಪಿಕೊಳ್ಳುವ ವಮೂಢತನ ಇತ್ತು. ಭಾರತೀಯರ ಸಾಧನೆ-ದೇಹದಂಡನೆಯ ಯಮಾಯಾಮ ವ್ಯಾಯಾಮಗಳನ್ನು ಟೀಕಿಸಿದ ಚಾರ್ವಾಕ `ಶರೀರಮಾದ್ಯಂ ಖಲು ಧರ್ಮ ಸಾಧನೆ' ಎಂದು ಪ್ರತಿ ಪಾದಿಸ್ದಿದನ್ಲಲ. ದೇಹವನ್ನು ಮಾತ್ರ ನಂಬಿ, ದೇಹಾತೀತ ಸಾಧ್ಯತೆಗಳನ್ನು ನಿರಾಕರಿಸಿದ ವಾದಗಳ್ಲೆಲಾ ಒಂದು ಹಂತದ್ಲಲಿ ಸೋಲು ಕಂಡಿವೆ. ಭಾರತೀಯ ವೈದ್ಯ ಪದ್ಧತಿ, ವೇದೋಕ್ತ ತಂತ್ರಜ್ಞಾನಗಳಿಗೆ ಅಳಿವ್ಲಿಲ, ಮಹತ್ವ ಕಳೆದುಕೊಳ್ಳಲಾರವು. ಇಂಗ್ಲಿಷ್ ವೈದ್ಯಪದ್ಧತಿಯನ್ನು ಸಾಕಿಸಲಹಿದ ವೈಜ್ಞಾನಿಕ ಮನೋಭಾವನೆಗಳಿಗೆ ಒಂದು ಮಿತಿ ಇದೆ. ಆದರೆ ಭಾರತೀಯ ಪರಂಪರೆ ಎಂದು ಮಾಟ ಮಂತ್ರ ಭೂತ ಪ್ರೇತಗಳನ್ನು ನಂಬಬಾರದುಅಷ್ಟೆ....
ವಿಕ್ರಮಾದಿತ್ಯ ಮೌನ ಮುರಿದು ವ್ರತಭಂಗವಾಗಿ ಮಾತು ಮುಗಿಸುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಹಾರಿ ಮರದಕೊಂಬೆಯ್ಲಲಿ ನೇತಾಡತೊಡಗಿತು.

Thursday, September 3, 2009

ಸಿಎಂ ಸಾವಿನ ಆಸುಪಾಸು

ಸಾವ್ಲಿಲದ ಜಾಗ ಇದೆಯೇ? ಸಾವು ಇಲ್ಲದವರು ಇದಾರೆಯೇ.. ಅದು ಕಲ್ಪನೆ ಮಾತ್ರ!


ಬೇತಾಳ ಯೋಚಿಸಿ.. ಯೋಚಿಸಿ ಅಸ್ವಸ್ಥನಾಗ್ದಿದ. ಇಂತಹ ಚಿಂತೆ ತಲೆಯ್ಲಲಿ ತುಂಬಲು ಕಾರಣ ಇತ್ತು. ಆಂಧ್ರ ಸಿಎಂ ವೈ ಎಸ್ ರಾಜಶೇಖರ ರೆಡ್ಡಿ ಅವರ ಸಾವು..

ಲೈವ್ ಆಗಲು ನಕ್ಸಲ್ ಅಡ್ಡಿ!

ಆ ದಿನದ ಎಲಾ ವಾರ್ತಾ ಮಾಧ್ಯಮಗಳು ಬಿತ್ತರಿಸಿದ ಸ್ದುದಿ ಸಾರಾಂಶನ್ನು ಗ್ರಹಿಸಿಕೊಂಡ್ದಿದ ಬೇತಾಳ ತನ್ನ್ಲಲ್ದಿದ `ಲ್ಯಾಪ್‌ಟಾಪ್ ಕಂಪ್ಯೂಟರ್'ನ್ಲಲಿ ಮುಖ್ಯಾಂಶಗಳನ್ನು ಅಳವಡಿಸಿಕೊಂಡಿತ್ತು. ಮುಂಬಯಿ ತಾಜ್ ಹೊಟೇಲ್‌ನ್ಲಲಿ ಉಗ್ರರ ದಾಳಿ(೨೬/೧೧) ಸಂಭವಿಸಿದಾಗ `ಲೈವ್' ವರದಿ ಟೆಲಿಕಾಸ್ಟ್ ಮಾಡುತ್ತ್ದಿದ ದೃಶ್ಯಮಾಧ್ಯಮಗಳು ಸಿಎಂ ಕಣ್ಮರೆಯ ಕುರಿತು ಇಂತಹ ಪ್ರಯತ್ನ ಮಾಡುತ್ತ್ದಿದುದು ಕಂಡುಬಂತು.

ಆದರೆ ಸಿಎಂ ಕಣ್ಮರೆ ಪ್ರಕರಣದ್ಲಲಿ ರಿಸ್ಕ್ ಹೆಚ್ಚು ಇತ್ತು. ಕ್ಯಾಮೆರಾಗಳು ಹೆಲಿಕಾಪ್ಟರ್ ಕಾಣೆಯಾಗ್ದಿದ ಕಾಡಿಗೆ ಏಕಾಏಕಿ ನುಗ್ಗುತ್ತ್ದಿದರು.... ಆ ಉತ್ಸಾಹಕ್ಕೆ ತಣ್ಣೀರು ಎರಚ್ದಿದು ನಕ್ಸಲರ ಭಯ! ಇದು ಅವರ ಮಾತಿನ್ಲಲಿ ಅಲ್ಲಲಿ ಕಾಣುತ್ತಿತ್ತು. ಮುಖ್ಯ ಮಂತ್ರಿ ಕಾಣೆಯಾದ ಕಾಡು ನಕ್ಸಲ ಕೇಂದ್ರ ತಾಣ ಎಂಬುದಾಗಿ ಪದೇ ಪದೇ ಅನ್ನುತ್ತ್ದಿದರು.

ಸಾವು ಒಂದೇ ಗೌರವ ಬೇರೆ..

ಕಾಣೆಯಾಗ್ದಿದ ಹೆಲಿಕಾಪ್ಟರ್‌ನ್ಲಲಿ ಮುಖ್ಯಮಂತ್ರಿ ವೈಎಸ್‌ಆರ್ ಮಾತ್ರ ಇದ್ದದ್ಲಲ. ಅಲಿ ಇಬ್ಬರು ಪೈಲಟ್‌ಗಳು, ಒಬ್ಬ ಗನ್‌ಮನ್, ಒಬ್ಬ ಕಂದಾಯ ಅಧಿಕಾರಿ, ಒಬ್ಬ ಪೊಲೀಸ್ ಅಧಿಕಾರಿ ಇದರು. ಇವರೂ ಮನುಷ್ಯರೇ, ಇವರ್‍ದದೂ ಜೀವವೇ, ಇವರಿಗೂ ಮನೆ, ಮಡದಿ ಮಕ್ಕಳು ಇದಾರೆ.... ಸಾವು ಒಂದೇ ರೀತಿ ಆಕ್ರಮಿಸಿ ಕೊಂಡಿತ್ತು. ಆದರೆ ಸಿಎಮ್ಮಿನ ಮರಣ ಮಾತ್ರ ಎಲರನ್ನೂ ಕಾಡ್ದಿದು ಮಾತ್ರ ಸತ್ಯ. ವ್ಯಕ್ತಿಯ ಲೌಕಿಕ ಜೀವನದ `ದರ್ಜೆ' ಆತನ ಸವಿನ ಶವದ ದರ್ಜೆಯನ್ನೂ ನಿರ್ಧರಿಸುವುದನ್ನು ಕಂಡು ಬೇತಾಳನ ತಲೆ ಕಿರಿಕ್ ಅಂದಿತು.

ಸಾವು ಅನ್ನುವ ಅತಿಥಿ

ಸಾವು ಅನ್ನುವುದೇ ಸತ್ಯ. ಅಲಿ ಮೇಲು ಕೀಳುಗಳ್ಲಿಲ. ಇರಬಾರದು. ಸಮಾನತೆ ಜಾಗ ಅದು. ಆಳಾಗಿರಲಿ, ಅರಸಾಗಿರಲಿ ಸಾವಿನಿಂದ ಹೊರತಾಗಿರಲು ಸಾಧ್ಯವ್ಲಿಲ... ಸಾವು ಒಂದೇ ವಿಧ ಆಗಿರಬಹುದು... ಆದರೆ... ಸಂಸ್ಕಾರ ಮಾತ್ರ ಭಿನ್ನ. ಆಳಿಗೊಂದು ಥರ, ಅರಸನಿಗೊಂದು ಥರ.. ಸ್ಮಶಾನದ್ಲಲಿ ಸಮಾಧಿಯ ಪಕ್ಕ ನಿಂತ್ದಿದ ಬೇತಾಳನಿಗೆ ಆ ಸತ್ಯ ಕಠೋರ ಅನ್ನಿಸಿತು.

ಸಾವನ್ನು ದೂರ ಇಡಲು, ಪಂಚಭೂತಗಳಿಂದಾದ ದೇಹವನ್ನು ಸಾವು ಅಪ್ಪದಂತೆ ಕಾಯಲು ಎಷ್ಟು ಸಿದ್ಧತೆ ನಡೆಸಿದರೂ, ಎಷ್ಟೇ ಸನ್ನಾಹ ಸಾವು ತಾನು ಆಕ್ರಮಿಸಬೇಕಾದ ದೇಹವನ್ನು ಸೇರಲು ನುಸುಳು ರಂಧ್ರವನ್ನು ಕಂಡುಕೊಂಡಿರುತ್ತದೆ. ತಕ್ಷಕನ ರೂಪದ್ಲಲಿ ಬರುವ ಸಾವನ್ನು ಹೊರಗಿಡಲು ಪ್ರಯತ್ನಿಸಿದ ರಾಜ ಪರೀಕ್ಷಿತ, ಸಾವಿನಿಂದ ಪಾರಾಗಲು ಬುದ್ಧನ ಸಲಹೆಯಂತೆ ಸಾಸಿವೆ ಕಾಳಿಗಾಗಿ ಅಲೆದಾಡಿದ ಗೌತಮಿ, ಸಾವಿನ ಹೆಜ್ಜೆಗಳನ್ನು ಬೆಂಬತ್ತಿ ಯಕ್ಷನ ಪ್ರಶ್ನೆಯ ಹಂದರದ್ಲಲಿ ಸಿಕ್ಕಿದ ಯುದಿಷ್ಠಿರ..... ಸಾವಿನ ಚಿಂತನೆ ನಡೆಸಿದ ಪೌರಾಣಿಕ, ಆದ್ಯಾತ್ಮಿಕ ಹೆಜ್ಜೆಗುರುತುಗಳು ಬೇತಾಳನ ಮನಃಪಟಲದ್ಲಲಿ ಸಿನಿಮಾ ರೀಲಿನಂತೆ ಚಲಿಸತೊಡಗಿದುವು..

ಆದರೂ ಆ ಸಿಎಂ ಸಾವು ಅನಿರೀಕ್ಷಿತ ಎಂದು ತಳ್ಳಿ ಹಾಕಬಹುದೇ? ನಕ್ಸಲರನ್ನು ಬೆಂಬತ್ತಿ ಕಾಡಿದ ಸಿಎಂ ರೆಡ್ಡಿ ನಕ್ಸಲರ ಅಡ್ಡೆಯಾದ ಕಾಡಿನ ನಡುವೆಯೇ ಕೊನೆಯುಸಿರೆಳ್ದೆದು ಮಾತ್ರ ವಿಪರ್ಯಾಸ.

ಸಾವು ಹೇಗೂ ಬರಬಹುದು... ಯಾವ ರೂಪದ್ಲಲೂ ಇರಬಹುದು. ಉದೇಶ ಮುಖ್ಯವೇ ಹೊರತು ನೆಪ ಅಲ ಎಂಬ ಸತ್ಯ ಅರಿತ ಬೇತಾಳ ತಾನು ಕುಳಿತ್ದಿದ ಶವ ಚಲಿಸತೊಡಗಿದಾಗ ಎಚ್ಚರಗೊಂಡಿತು.

ಅರಸನೂ ಆಳಾಗ ಬಹುದು..

ರಾಜ ಶವವನ್ನು ಮತ್ತೆ ಹೆಗಲಿಗೇರಿಸಿಕೊಂಡು ಹೊರಟ್ದಿದ. ಅಂಥಾ ಅರಸ ಇಂಥಾ ಅನಾಥ ಪ್ರೇತಕ್ಕೆ ಗತಿ ಕಾಣಿಸಲು ಭಗೀರಥ ಪ್ರಯತ್ನ ಪಡುತ್ತಿರುವುದು ಕಂಡು ಬೇತಾಳಕ್ಕೆ ವಿಸ್ಮಯವಾಯಿತು. ಆಳುಗಳು ಅರಸನ ಶವ ಹೊರುವುದು ಸರಿ, ಆದರೆ ಇಲಿ ಅರಸ ಅನಾಥ ಶವ ಹೊತ್ತು ಸಾಗುವುದರ ಹಿಂದಿನ ಸರಿತಪ್ಪುಗಳ್ಲಲ, ಆ ಮನಃಸ್ಥಿತಿ ಕಂಡು ಬೇತಾಳಕ್ಕೆ ವಿಸ್ಮಯವಾಯಿತು.

ಅರಸನ ಮೌನ ಮುರಿಯುವ ಪ್ರಯತ್ನಕ್ಕೆ ಮುಂದಾದ ಬೇತಾಳ ಅಂದು ಊರ್‍ಲೆಲಾ ಗ್ದದಲ ಎಬ್ಬಿಸ್ದಿದ ಸ್ದುದಿಯ ಮೂಲಕವೇ ಮೌನಮುರಿಯಲು ಪ್ರಯತ್ನಿಸಿತು....

ಹವಾಮಾನ ಇಲಾಖೆ ವಿಫಲ?

ಅರಸನೇ ಇದು ನಿನಗೂ ಗೊತ್ತಿರುವ ವಿಷಯ. ಅರಿವ್ಲಿಲದವನಂತೆ ನಟಿಸಬೇಡ. ಆಂಧ್ರಪ್ರದೇಶ ಎಂಬ ರಾಜ್ಯ ಪ್ರಜಾಪ್ರಭುವಿನ ಸಾವು ಸಹಜವೇ? ರಾಜಶೇಖರನು ರಹಸ್ಯವಾಗಿ ಪ್ರಜೆಗಳ ಯೋಗಕ್ಷೇಮ ತಿಳಿಯಲು, ಯೋಜನೆಗಳ್ಲಲಿ ಅಧಿಕಾರಿಗಳು ಕೈಗೊಂಡ ಅವ್ಯವಹಾರಗಳ ಪತ್ತೆಗೆ ಹೊರಟ್ದಿದು ಸಾವಿನ್ಲಲೇಕೆ ಕೊನೆಗೊಂಡಿತು? ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನೊಂದಿಗೆ ಸಾಗುವ ವಿಮಾನ, ಅತಿ ವಿಶಿಷ್ಟ ವ್ಯಕ್ತಿಯಾದ ರಾಜಶೇಖರ ರೆಡ್ಡಿ ಇದ ವಿಮಾನ ಹಾರಾಟದ ಮಾರ್ಗ ಹವಾಮಾನ ಇಲಾಖೆಯ ಅಧಿಕಾರಿಗಳ ಗಮನದ್ಲಲಿ ಇರಲ್ಲಿಲವೇ? ಮಳೆಯ ಹಂಗಾಮ ಮೋಡಮುಸುಕಿದ ಕಾಲಮಾನ ಹಾಗೂ ಅಪಾಯದ ಮುನ್ಸೂಚನೆಯನ್ನು ಅವರೇಕೆ ನೀಡಲ್ಲಿಲ. ಇವ್ಲೆಲಕ್ಕೂಉತ್ತರ ಗೊತ್ತ್ದಿದೂ ಮೌನವಹಿಸ ಬೇಡ ಎಂದು ಮಾತಿಗೆ ಎಳೆಯಿತು.

ಬೇತಾಳನೇ ಅಧಿಕಾರದ್ಲಲಿರುವವರಿಗೆ ಶತ್ರುಗಳು ಅನೇಕ. ಸಾವು ಕೂಡ ಶತ್ರುವೇ? ಶತ್ರು ಮಿತ್ರನ ರೂಪದ್ಲಲಿ ಸಾವಿನ ಹೊದಿಕೆ ಹ್ದೊದು ಬರುವುದು ಮಾತ್ರ ವಿಪರ್ಯಾಸ. ಜನ ಕಾರ್ಯಕ್ಕೆ ಹೊರಟ್ದಿದ ಪ್ರಜಾಪ್ರಭು ರಾಜಶೇಖರನಿಗೆ ಆಗಸದ್ಲಲಿ ಚಲಿಸಬೇಕಾದ ಹಾದಿ ದುರ್ಗಮ ಎಂದು ತಿಳಿಸಬೇಕಾದ ಹವಾಮಾನ ಇಲಾಖೆಗೆ ಅದು ತಿಳಿದಿರಲೇ ಬೇಕು. ಆದರೆ ಮೊಡದ ತೆರೆಯೊಳಗೆ ಹೆಲಿಕಾಪ್ಟರ್ ಸಂಚರಿಸಲಾರದು ಎಂದು ವೈಮಾನಿಕನಿಗೂ ಅರಿವಿರಬಹುದು. ಆದರೆ ಅರ್ಧಮಾರ್ಗದಿಂದ ಹಿಂದಿರುಗದೇ ಇದುದು. ನೇರ ಬೆಟ್ಟ- ದುರ್ಗಮ ಕಾಡಿನೊಳಕ್ಕೆ ವಿಮಾನ ಇಳಿಸ್ದಿದು ಮಾತ್ರಅರ್ಥವಾಗದ ವಿಷಯ.

ರಾಜಶೇಖರ ರೆಡ್ಡಿ ಜನಪ್ರಿಯ ಆಡಳಿತಾಧಿಕಾರಿಯಾಗ್ದಿದುದು, ಇತ್ತೀಚಿನ ಚುನಾವಣೆಗಳ ಯಶಸ್ಸು, ಈ ಯಶಸ್ಸನ್ನು ಕಂಡು ಪ್ರಜಾರಾಜ್ಯಂ, ತೆಲುಗು ದೇಶದಂತಹ ಸ್ಟಾರ್ ವ್ಯಾಲ್ಯೂ ಪಕ್ಷಗಳಿಂದ ತಾರೆಯರು ರೆಡ್ಡಿ ಪಾಳೆಯಕ್ಕೆ ಗುಳೇ ಬರತೊಡಿಗ್ದಿದುದು ಇತ್ತೀಚಿನ ವಿದ್ಯಮಾನ. ಇದು ಇತರ ಪಕ್ಷಗಳನ್ನು ಅಲುಗಾಡಿಸತೊಡಗಿಸಿತ್ತು. ಅಧಿಕಾರಿಗಳ ಭ್ರಷ್ಟತೆಯ ವಿರುದ್ಧ ಸಮರ ಸಾರ್‍ದಿದ ರು. ರೈತನಾಗಿ ಹುಟ್ಟಿ ವೈದ್ಯನಾಗಿ ಬೆಳೆದ್ದಿದ ಆ ಮುಖ್ಯಮಂತ್ರಿ ಅವ್ಯವಹಾರಗಳಿಗೆ ಶಸ್ತ್ರಚಿಕಿತ್ಸೆ ಆರಂಭಿಸ್ದಿದರು. ನಕ್ಸಲರಿಗೂ ಅವರು ದುಃಸ್ವಪ್ನವಾಗ್ದಿದರು. ಹೆಲಿಕಾಪ್ಟರ್ ದುರಂತ ತೀರಾ ಸಾಮಾನ್ಯ ಎಂಬ ರೀತಿಯ್ಲಲಿ ನಡೆದ್ದಿದರೂ ಅದರ ಹಿಂದೆ ನಿಗೂಢತೆಗಳಿರಬೇಕು ಎಂಬುದಂತೂ ಸತ್ಯ.

ಅರಸನ ಮೌನಭಂಗವಾಗುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಮರದ ಕೊಂಬೆ ಸೇರಿತು.